ನವದೆಹಲಿ: ರೈಲ್ವೆ ಮಂಡಳಿಗೆ ಶಾಸನಬದ್ಧ ಅಧಿಕಾರ ನೀಡುವ ರೈಲ್ವೆ (ತಿದ್ದುಪಡಿ) ಮಸೂದೆ –2024‘ ಅನ್ನು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.
ಮಸೂದೆ ಮಂಡಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಈ ಮಸೂದೆಯ ಮೂಲಕ 1989ರ ರೈಲ್ವೆ ಕಾಯ್ದೆ ಜೊತೆಗೆ 1905ರ ಭಾರತೀಯ ರೈಲ್ವೆ ಮಂಡಳಿ ಕಾಯ್ದೆಯನ್ನು ಸಂಯೋಜನೆಗೊಳಿಸಲಾಗುವುದು ಎಂದು ತಿಳಿಸಿದರು.
‘ಹೊಸ ಮಸೂದೆಯು ಮಂಡಳಿಯ ಕಾನೂನು ವ್ಯಾಪ್ತಿಯನ್ನು ಸರಳೀಕರಣಗೊಳಿಸಲಿದೆ. ಎರಡೂ ಕಾಯ್ದೆಗಳನ್ನು ಪರಾಮರ್ಶಿಸಬೇಕಾದ ಅಗತ್ಯವನ್ನು ತಪ್ಪಿಸಲಿದೆ’ ಎಂದು ವಿವರಿಸಿದರು.