ಕೋಲ್ಕತ್ತ: ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಲು ಖಚಿತ ಎಂಬುದು ಟಿಎಂಸಿಗೆ ಅರಿವಾಗಿದೆ. ಅದಕ್ಕಾಗಿಯೇ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ ಕಣಕ್ಕಿಳಿಯಲಿದ್ದಾರೆ ಎನ್ನುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಇಲ್ಲಿನ ಮಣ್ಣಿನ ಮಗನೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದಾರೆ.

ಓದಿ:ಬಂಗಾಳ: ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಕ್ರಿಕೆಟ್ ಉದಾಹರಣೆ ನೀಡಿದ್ದೇಕೆ?

ದೀದಿ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಅವರ ಪಕ್ಷವು ಹೇಳುತ್ತಿದೆ. ಈ ಹೇಳಿಕೆಯಿಂದ ಎರಡು ವಿಚಾರಗಳು ಸ್ಪಷ್ಟವಾಗಿವೆ. ಮೊದಲನೆಯದ್ದು, ಮಮತಾ ಅವರು ಬಂಗಾಳದಲ್ಲಿ ಸೋಲನ್ನು ಒಪ್ಪಿಕೊಂಡಿದ್ದಾರೆ. ಎರಡನೆಯದ್ದು, ಬಂಗಾಳದಿಂದ ಹೊರತಾಗಿ ಬೇರೆ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ಹೊರತುಪಡಿಸಿ ಇನ್ನೊಂದು ಕ್ಷೇತ್ರದಿಂದ ಮಮತಾ ಸ್ಪರ್ಧಿಸಬೇಕು ಎಂದು ಟಿಎಂಸಿಯ ಕೆಲವು ನಾಯಕರು ಹೇಳುತ್ತಿದ್ದಾರೆ. ಅವರು ಎರಡೂ ಕ್ಷೇತ್ರಗಳಲ್ಲಿ ಸೋಲನುಭವಿಸಿದರೆ ಪಕ್ಷವು ರಾಜ್ಯದಲ್ಲಿ ಕಾರ್ಯನಿರ್ವಹಿಸುವುದು ಕಷ್ಟಕರವಾಗಲಿದೆಯೆಂದು ಟಿಎಂಸಿಯ ಕೆಲವು ಬುದ್ಧಿವಂತ ನಾಯಕರು ಹೇಳುತ್ತಿದ್ದಾರೆ. ಮಮತಾಗೆ ತಪ್ಪು ಸಲಹೆ ನೀಡಿ ಅವರನ್ನು ಮತ್ತು ಅವರ ಸ್ಕೂಟಿಯನ್ನು ನಂದಿಗ್ರಾಮಕ್ಕೆ ಕಳುಹಿಸಿದ ಕೆಲವರು ಈಗ ಅವರನ್ನು ಬಂಗಾಳದಿಂದಲೇ ಹೊರ ಕಳುಹಿಸಲು ಯೋಜನೆ ರೂಪಿಸುತ್ತಿದ್ದಾರೆ ಎಂದು ಮೋದಿ ವ್ಯಂಗ್ಯವಾಡಿದ್ದಾರೆ.

ಓದಿ:ದೇಶದ ಆಂತರಿಕ ವಿಚಾರವನ್ನು ವಿದೇಶಗಳೊಂದಿಗೆ ಹಂಚಿಕೊಳ್ಳುವುದು ಎಷ್ಟು ಸರಿ: ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.