ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್ ಮಿಸ್‌: ವರುಣ್‌ ಗಾಂಧಿ ಭಾವುಕ ಪತ್ರ

Published 28 ಮಾರ್ಚ್ 2024, 16:24 IST
Last Updated 28 ಮಾರ್ಚ್ 2024, 16:24 IST
ಅಕ್ಷರ ಗಾತ್ರ

ಲಖನೌ: ಬಿಜೆಪಿ ಟಿಕೆಟ್‌ ವಂಚಿತರಾಗಿರುವ ಪಿಲಿಭಿತ್‌ ಕ್ಷೇತ್ರದ ಸಂಸದ ವರುಣ್‌ ಗಾಂಧಿ ಅವರು ತಮ್ಮ ಕ್ಷೇತ್ರದ ಜನರಿಗೆ ಭಾವುಕ ಪತ್ರ ಬರೆದಿದ್ದಾರೆ.

‘ಪಿಲಿಭಿತ್ ಕ್ಷೇತ್ರವು ನೀಡಿದ ಆದರ್ಶಗಳು ಸಂಸದನಾಗಿ ಮಾತ್ರವಲ್ಲದೆ ಒಬ್ಬ ವ್ಯಕ್ತಿಯಾಗಿಯೂ ನನ್ನ ಬೆಳವಣಿಗೆಗೆ ಸಹಕಾರಿಯಾಗಿದೆ. ನಿಮ್ಮ ಪ್ರತಿನಿಧಿಯಾಗುವ ಅವಕಾಶ ಲಭಿಸಿದ್ದು ನನ್ನ ಜೀವನದ ಬಲುದೊಡ್ಡ ಗೌರವ. ನಿಮ್ಮ ಹಿತಾಸಕ್ತಿಗಾಗಿ ಪ್ರತಿ ಬಾರಿಯೂ ಧ್ವನಿ ಎತ್ತಿದ್ದೇನೆ. ಸಂಸದನಾಗಿಯಲ್ಲದಿದ್ದರೂ, ಈ ಕ್ಷೇತ್ರದ ಮಗನಾಗಿ ನಿಮ್ಮ ಸೇವೆಗೆ ಸದಾ ಸಿದ್ಧ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಬಿಜೆಪಿಯು ಪಿಲಿಭಿತ್‌ ಕ್ಷೇತ್ರದಿಂದ ವರುಣ್‌ ಬದಲು ಉತ್ತರ ಪ್ರದೇಶದ ಸಚಿವ ಜಿತಿನ್‌ ಪ್ರಸಾದ್ ಅವರನ್ನು ಕಣಕ್ಕಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT