ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಆ್ಯಪ್ ಅಭಿವೃದ್ಧಿಪಡಿಸಿತ್ತು. ಮೊದಲ ಆವೃತ್ತಿಯಲ್ಲಿ ವಿವಿಧೆಡೆ ಇರುವ 200 ಪ್ರವಾಹ ನಿರ್ವಹಣಾ ಕೇಂದ್ರಗಳ ಮಾಹಿತಿ ಆಧರಿಸಿ ಮುನ್ಸೂಚನೆ ನೀಡಲಾಗುತ್ತಿತ್ತು.
ನವೀಕೃತ ಅಪ್ಲಿಕೇಷನ್‌ನಲ್ಲಿ ಹೆಚ್ಚುವರಿ 392 ಕೇಂದ್ರ ಸೇರಿ ಒಟ್ಟು 592 ಕೇಂದ್ರಗಳ ಮಾಹಿತಿ ಲಭ್ಯವಿದೆ. ಈ ಮೂಲಕ ಬಳಕೆದಾರರಿಗೆ ದೇಶದಾದ್ಯಂತ ಮುನ್ಸೂಚನೆ ಕುರಿತ ಸಮಗ್ರ ಮಾಹಿತಿ ಸಿಗಲಿದೆ.
ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್‌ನಲ್ಲಿ ಉಚಿತವಾಗಿ ಅಪ್ಲಿಕೇಷನ್ ಲಭ್ಯವಿದೆ ಎಂದು ಹೇಳಿಕೆ ತಿಳಿಸಿದೆ.