ನವದೆಹಲಿ: ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ 12 ದಿನಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ‘ಸೂಕ್ತ ಸಮಯದಲ್ಲಿ, 2027ರ ಆಗಸ್ಟ್ನಲ್ಲಿ ನಿವೃತ್ತನಾಗುತ್ತೇನೆ’ ಎಂದು ಘೋಷಿಸಿದ್ದ ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಯಿಂದ ಸೋಮವಾರ ರಾತ್ರಿ ಆತುರಾತುರವಾಗಿ ನಿರ್ಗಮಿಸಿದ್ದಾರೆ. ಅವರ ಈ ನಡೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮುಂಗಾರು ಅಧಿವೇಶನದ ಮೊದಲ ದಿನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಹುಬ್ಬೇರುವಂತೆ ಮಾಡಿದೆ. ಆರೋಗ್ಯ ಸಮಸ್ಯೆ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಧನಕರ್ ಹೇಳಿಕೊಂಡಿದ್ದಾರೆ. ‘ಅವರು ಹಲವು ಸಮಯದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಕಾರಣಕ್ಕಾಗಿ ಮುಂಗಾರು ಅಧಿವೇಶನದ ಮೊದಲ ದಿನವೇ ರಾಜೀನಾಮೆ ನೀಡುವ ಅಗತ್ಯ ಇರಲಿಲ್ಲ. ಮೊದಲೇ ನೀಡಬಹುದಿತ್ತು’ ಎಂದು ವಾದಿಸುವವರು ಇದ್ದಾರೆ.

ಸೋಮವಾರ ನಡೆದ ರಾಜ್ಯಸಭೆ ಅಧಿವೇಶನದಲ್ಲಿ ಧನಕರ್ ಅವರು 62 ನಿಮಿಷ ಅಧ್ಯಕ್ಷತೆ ವಹಿಸಿದ್ದರು. ಮಧ್ಯಾಹ್ನ 12.30 ಹಾಗೂ ಸಂಜೆ ನಡೆದ ಸದನ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಭಾಗಿಯಾಗಿದ್ದರು. ಸಚಿವರ ಗೈರುಹಾಜರಿಯ ಹಿನ್ನೆಲೆಯಲ್ಲಿ ಸಮಿತಿ ಸಭೆಯನ್ನು ಮಂಗಳವಾರ ಮಧ್ಯಾಹ್ನ 1ಕ್ಕೆ ಮರು ನಿಗದಿ ಮಾಡಿದ್ದರು. ಈ ನಡುವೆ, ಉಪರಾಷ್ಟ್ರಪತಿ ಅವರು ಇದೇ 23ರಂದು ಜೈಪುರಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಿಐಬಿ ಮಧ್ಯಾಹ್ನ 3.53ಕ್ಕೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿತ್ತು.

ಕಳೆದ ಮೂರು ವರ್ಷಗಳಲ್ಲಿ ವಿಪಕ್ಷಗಳ ಅನೇಕ ನೋಟಿಸ್ಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದ ಧನಕರ್ ಅವರು, ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಪದಚ್ಯುತಗೊಳಿಸುವುದಕ್ಕೆ ಸಂಬಂಧಿಸಿದ ನೋಟಿಸ್ ಅನ್ನು ಸೋಮವಾರ ಸಂಜೆ ಸ್ವೀಕರಿಸಿದ್ದರು. ವಿಪಕ್ಷದೊಂದಿಗೆ ಸದಾ ಸಂಘರ್ಷದಲ್ಲೇ ತೊಡಗಿದ್ದ ಅವರ ಈ ನಡೆ ಅಚ್ಚರಿಗೆ ಕಾರಣವಾಗಿತ್ತು. ಆದರೆ, ಧನಕರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಉಪರಾಷ್ಟ್ರಪತಿಯವರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ರಾತ್ರಿ 9.30ಕ್ಕೆ ಪೋಸ್ಟ್ ಮಾಡಲಾಯಿತು.

ಯಾವುದೇ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸುವ ಬಿಜೆಪಿ ಸಚಿವರು ಹಾಗೂ ನಾಯಕರು ಉಪರಾಷ್ಟ್ರಪತಿಯವರ ರಾಜೀನಾಮೆ ಬಗ್ಗೆ ಚಕಾರ ಎತ್ತಲಿಲ್ಲ. ಕಿಸಾನ್ ಪುತ್ರ ಎಂದು ಕಮಲ ಪಾಳಯದ ನಾಯಕರಿಂದ ಹೊಗಳಿಸಿಕೊಂಡ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ‘ಸ್ಪೂರ್ತಿದಾಯಕ’ ಎಂದು ಮೆಚ್ಚುಗೆ ನುಡಿ ಪಡೆದಿದ್ದ ಧನಕರ್ ರಾಜೀನಾಮೆ ಕುರಿತು ಬಿಜೆಪಿ ನಾಯಕರಿಂದ ಯಾವುದೇ ಸಂದೇಶ ಕಾಣಲಿಲ್ಲ. 15 ಗಂಟೆಗಳ ಬಳಿಕವಷ್ಟೇ ಮೋದಿ ಟ್ವೀಟ್ ಮಾಡಿದರು.

ಸಂಸತ್ ಅಧಿವೇಶನದ ಮೊದಲ ದಿನ ನಡೆದ ಘಟನಾವಳಿಗಳೇ ಉಪರಾಷ್ಟ್ರಪತಿಯವರ ರಾಜೀನಾಮೆಗೆ ಕಾರಣ ಎಂಬ ಸುದ್ದಿಗಳು ರಾಜಕೀಯ ವಲಯದಲ್ಲಿ ಹರಡಿವೆ. ‘ನ್ಯಾಯಮೂರ್ತಿ ವರ್ಮಾ ಪದಚ್ಯುತಿ ನೋಟಿಸ್ ಸ್ವೀಕರಿಸುವ ಮುನ್ನ ಅವರು ಕೇಂದ್ರ ಸರ್ಕಾರದ ಜತೆಗೆ ಸಮಾಲೋಚಿಸಿರಲಿಲ್ಲ. ಅವರ ಈ ನಡೆ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಕಾರಣಕ್ಕೆ ರಾಜ್ಯಸಭೆಯ ಸಭಾನಾಯಕ ಜೆ.ಪಿ.ನಡ್ಡಾ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸದನ ಕಲಾಪ ಸಲಹಾ ಸಮಿತಿ ಸಭೆಗೆ ಗೈರು ಹಾಜರಾಗಿದ್ದರು’ ಎಂಬ ಸುದ್ದಿ ಸಂಸತ್ ಭವನದಲ್ಲಿ ಹರಡಿದೆ. ‘ಸೋಮವಾರ ಮಧ್ಯಾಹ್ನ 1ರಿಂದ ಸಂಜೆ 4.30ರ ನಡುವೆ ನಡೆದಿದ್ದು ಏನು. ರಾಜೀನಾಮೆ ಹಿಂದೆ ನಿಗೂಢ ಕಾರಣಗಳಿವೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ.

ವಿಪಕ್ಷಗಳ ನಾಯಕರ ಆರೋಪದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಜೆ.ಪಿ.ನಡ್ಡಾ ಹಾಗೂ ಕಿರಣ್ ರಿಜಿಜು, ‘ತುರ್ತು ಕೆಲಸ ಇದ್ದ ಕಾರಣಕ್ಕೆ ಬಿಎಸಿ ಸಭೆಗೆ ಹಾಜರಾಗುತ್ತಿಲ್ಲ ಎಂದು ಉಪರಾಷ್ಟ್ರಪತಿ ಕಚೇರಿಗೆ ಮುಂಚಿತವಾಗಿ ತಿಳಿಸಲಾಗಿತ್ತು’ ಎಂದಿದ್ದಾರೆ.

ಕಳೆದೊಂದು ವರ್ಷದಿಂದ ಉಪರಾಷ್ಟ್ರಪತಿ ಹಾಗೂ ಕೇಂದ್ರ ಸರ್ಕಾರದ ನಡುವೆ ಸಂಬಂಧ ಮಧುರವಾಗಿರಲಿಲ್ಲ. ಬಿಜೆಪಿ ನಾಯಕರು ಗೌರವಯುತವಾಗಿ ನಡೆದುಕೊಳ್ಳುತ್ತಿಲ್ಲ. ವಿದೇಶ ಪ್ರವಾಸ ಸೇರಿದಂತೆ ಉಪರಾಷ್ಟ್ರಪತಿ ಭವನದ ಪ್ರಸ್ತಾವಗಳಿಗೆ ಅನಗತ್ಯವಾಗಿ ತಡೆ ಒಡ್ಡುತ್ತಿದ್ದರು ಎಂದು ಧನಕರ್ ಅಸಮಾಧಾನಗೊಂಡಿದ್ದರು. ವರ್ಮಾ ಪ್ರಕರಣದ ಬಳಿಕ ಈ ಸಂಬಂಧ ಮತ್ತಷ್ಟು ಬಿಗಡಾಯಿಸಿತು ಎಂಬ ಮಾತು ಇದೆ.

ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಜಾಗ ಮಾಡಿಕೊಡಲು ಧನಕರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಶುರುವಾಗಿದೆ.

ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಪೂರಕ ವಾತಾವರಣ ಇಲ್ಲ. ಕಳೆದೆರಡು ದಶಕಗಳಿಂದ ರಾಜ್ಯ ರಾಜಕಾರಣದಲ್ಲಿ ಕಿಂಗ್ ಹಾಗೂ ಕಿಂಗ್ ಮೇಕರ್ ಆಗಿರುವ ನಿತೀಶ್ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ಗೆಲುವುದು ದಡ ಮುಟ್ಟುವುದು ಕಷ್ಟ ಎಂಬುದು ಬಿಜೆಪಿ ನಾಯಕರ ಅಭಿಮತ. ಉಪರಾಷ್ಟ್ರಪತಿ ಹುದ್ದೆ ನೀಡಿದರೆ ನಿತೀಶ್ ಅವರಿಗೆ ಸಕ್ರಿಯ ರಾಜಕಾರಣದಿಂದ ಗೌರವಯುತ ಬೀಳ್ಕೊಡುಗೆ ನೀಡಿದಂತಾಗುತ್ತದೆ ಹಾಗೂ ಒಬಿಸಿ ಮತಗಳನ್ನು ಸೆಳೆಯಲು ಅನುಕೂಲ ಆಗುತ್ತದೆ ಎಂಬುದು ತರ್ಕ. ಈಚಿನ ದಿನಗಳಲ್ಲಿ, ಮರೆಗುಳಿತನದಿಂದ ಹೆಚ್ಚು ಸುದ್ದಿಯಲ್ಲಿರುವ ನಿತೀಶ್ ಅವರಿಗೆ ಈ ಉನ್ನತ ಸ್ಥಾನ ಸಿಗಲಿದೆಯೇ ಎಂಬುದು ಮತ್ತೊಂದು ಪ್ರಶ್ನೆ.

ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿದ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಅವರು ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದರು. ‘ನಿತೀಶ್ ಕುಮಾರ್ ಅವರನ್ನು ಉಪರಾಷ್ಟ್ರಪತಿಯನ್ನಾಗಿ ಮಾಡಿದರೆ ಬಿಹಾರಕ್ಕೆ ತುಂಬಾ ಒಳ್ಳೆಯದು’ ಎಂದು ಠಾಕೂರ್ ಸುದ್ದಿಗಾರರಿಗೆ ತಿಳಿಸಿದರು.

ಕೆಲವು ಸಮಯದಿಂದ ಕಾಂಗ್ರೆಸ್ ನಾಯಕರೊಂದಿಗೆ ಮುನಿಸಿಕೊಂಡಿರುವ ಸಂಸದ ಶಶಿ ತರೂರ್ ಅವರನ್ನು ಉಪರಾಷ್ಟ್ರಪತಿ ಮಾಡಲಾಗುತ್ತದೆ ಎಂಬ ಊಹಾಪೋಹ ಹರಡಿದೆ. ದೇಶದ ಎರಡನೇ ದೊಡ್ಡ ಸಾಂವಿಧಾನಿಕ ಹುದ್ದೆಯನ್ನು ಕಾಂಗ್ರೆಸ್ ನಾಯಕನಿಗೆ ನೀಡುವಂತಹ ದೊಡ್ಡ ಮನಸ್ಸನ್ನು ಬಿಜೆಪಿ ಮಾಡಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
.ಉಪ ರಾಷ್ಟ್ರಪತಿ ಹುದ್ದೆಗೆ ಧನಕರ್ ರಾಜೀನಾಮೆ: ಸಂವಿಧಾನ ಹೇಳುವುದೇನು?.ವೈದ್ಯಕೀಯ ಕಾರಣ ನೀಡಿ ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಘೋಷಿಸಿದ ಧನಕರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.