ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌: ರ‍್ಯಾಲಿಯಲ್ಲಿ ಸಿಧು ಭಾಗಿ–ಇಬ್ಬರು ‘ಕೈ’ ಮುಖಂಡರ ಅಮಾನತು

Published 27 ಜನವರಿ 2024, 16:26 IST
Last Updated 27 ಜನವರಿ 2024, 16:26 IST
ಅಕ್ಷರ ಗಾತ್ರ

ಚಂಡೀಗಡ: ಕಾಂಗ್ರೆಸ್‌ನ ಪಂಜಾಬ್‌ ಪ್ರದೇಶ ಸಮಿತಿ ಅಧ್ಯಕ್ಷ ಅಮರಿಂದರ್‌ ಸಿಂಗ್‌ ರಾಜಾ ವಾರಿಂಗ್‌ ಅವರು, ಮುಖಂಡ ಮಹೇಶಿಂದರ್ ಸಿಂಗ್‌ ಹಾಗೂ ಅವರ ಪುತ್ರ ಧರಂಪಾಲ್‌ ಸಿಂಗ್‌ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಶನಿವಾರ ಅಮಾನತು ಮಾಡಿದ್ದಾರೆ.

ಮಹೇಶಿಂದರ್ ಮತ್ತು ಧರಂಪಾಲ್‌ ಅವರು ಇತ್ತೀಚೆಗೆ ಮೋಗಾ ಜಿಲ್ಲೆಯಲ್ಲಿ ಆಯೋಜಿಸಿದ್ದ ರ‍್ಯಾಲಿಯನ್ನು ಉದ್ದೇಶಿಸಿ ನವಜೋತ್‌ ಸಿಂಗ್‌ ಸಿಧು ಮಾತನಾಡಿದ್ದರು. ಇದರ ಬೆನ್ನಲ್ಲೇ, ಈ ಇಬ್ಬರಿಗೆ ಶೋಕಾಸ್‌ ನೋಟಿಸ್‌ ನೀಡಿದ್ದ ವಾರಿಂಗ್‌, ರ‍್ಯಾಲಿ ಆಯೋಜಿಸಿರುವ ಕುರಿತು ಸ್ಥಳೀಯ ನಾಯಕತ್ವಕ್ಕೆ ಏಕೆ ಮಾಹಿತಿ ನೀಡಿರಲಿಲ್ಲ ಎಂಬ ಬಗ್ಗೆ ಎರಡು ದಿನಗಳ ಒಳಗಾಗಿ ಉತ್ತರಿಸುವಂತೆ ಸೂಚಿಸಿದ್ದರು.

ರ‍್ಯಾಲಿ ಕುರಿತು ಸ್ಥಳೀಯ ನಾಯಕರಿಗೆ ಮಾಹಿತಿ ನೀಡಿರಲಿಲ್ಲ ಎಂದು ಕಾಂಗ್ರೆಸ್‌ನ ಮೋಗಾ ಜಿಲ್ಲಾ ಉಸ್ತುವಾರಿ ಮಾಲವಿಕಾ ಸೂದ್‌ ಸಾಚಾರ್‌ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT