ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರು ಭಾರತವೆಂಬ ದೇಗುಲವನ್ನು ಪುನರ್‌ನಿರ್ಮಿಸುವ ಕರ್ತವ್ಯ ನೀಡಿದ್ದಾನೆ: ಮೋದಿ

Published 19 ಫೆಬ್ರುವರಿ 2024, 13:16 IST
Last Updated 19 ಫೆಬ್ರುವರಿ 2024, 13:16 IST
ಅಕ್ಷರ ಗಾತ್ರ

ಸಂಭಾಲ್‌ (ಉ.ಪ್ರದೇಶ): ಕಾಲಚಕ್ರ ಉರುಳಿದಂತೆ ದೇಶವು ಹಲವು ಮೊದಲುಗಳ ದಾಖಲೆಯನ್ನು ನಿರ್ಮಿಸಿದ್ದು, ಜಗತ್ತಿಗೆ ಉತ್ತಮ ಮಾದರಿಯಾಗಿದೆ. ಜತೆಗೆ ಭಾರತವೆಂಬ ದೇಗುಲವನ್ನು ಮರುನಿರ್ಮಾಣಗೊಳಿಸುವ ಕರ್ತವ್ಯವನ್ನು ದೇವರು ನನಗೆ ನೀಡಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉತ್ತರ ಪ್ರದೇಶದ ಶ್ರೀ ಕಲ್ಕಿ ಧಾಮ ದೇವಾಲಯ ನಿರ್ಮಾಣದ ಶಂಕುಸ್ಥಾಪನೆಯನ್ನು ನೇರವೇರಿಸಿ ಮಾತನಾಡಿದ ಅವರು, ಜನವರಿ 22ರಿಂದ ಹೊಸ ಯುಗ ಪ್ರಾರಂಭವಾಗಿದೆ ಎಂದು ಅಯೋಧ್ಯೆಯ ಬಾಲ ರಾಮ ಪ್ರಾಣ ಪ್ರತಿಷ್ಠಾಪನೆಯ ದಿನದಂದು ಹೇಳಿದ್ದ ಮಾತನ್ನು ಪುನರುಚ್ಚರಿಸಿದ್ದಾರೆ.

‘ಶ್ರೀ ರಾಮನ ಆಳ್ವಿಕೆಯು ಸಾವಿರ ವರ್ಷಗಳವರೆಗೆ ಪ್ರಭಾವ ಬೀರಿತ್ತು. ಹಾಗೆಯೇ, ಬಾಲ ರಾಮ ಪ್ರಾಣ ಪ್ರತಿಷ್ಠಾಪನೆಯೊಂದಿಗೆ ಮುಂದಿನ ಸಾವಿರ ವರ್ಷಗಳವರೆಗೆ ದೇಶಕ್ಕೆ ಹೊಸ ಪ್ರಯಾಣ ಪ್ರಾರಂಭಗೊಂಡಿದೆ. ಭಾರತವೆಂಬ ದೇಗುಲವನ್ನು ಮರುನಿರ್ಮಾಣಗೊಳಿಸುವ ಕರ್ತವ್ಯವನ್ನು ದೇವರು ನನಗೆ ನೀಡಿದ್ದಾನೆ’ ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕಲ್ಕಿ ಧಾಮ ಪೀಠಾಧೀಶ್ವರ ಆಚಾರ್ಯ ಪ್ರಮೋದ್ ಕೃಷ್ಣಂ ಅವರ ಸಮ್ಮುಖದಲ್ಲಿ ಪ್ರಧಾನಿ ಮೋದಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT