ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಮ್ಯಾನ್ಮಾರ್‌ ಗಡಿಯಲ್ಲಿ ಜನರ ಮುಕ್ತ ಸಂಚಾರ ತಡೆಯುತ್ತೇವೆ: ಅಮಿತ್ ಶಾ

Published 20 ಜನವರಿ 2024, 11:40 IST
Last Updated 20 ಜನವರಿ 2024, 11:40 IST
ಅಕ್ಷರ ಗಾತ್ರ

ಗುವಾಹಟಿ: ಭಾರತ– ಮ್ಯಾನ್ಮಾರ್‌ ಗಡಿಯಲ್ಲಿ ಬೇಲಿ ನಿರ್ಮಿಸಲು ಹಾಗೂ ಜನರ ಮುಕ್ತ ಸಂಚಾರ ಒಪ್ಪಂದ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶನಿವಾರ ಹೇಳಿದರು. 

ಮ್ಯಾನ್ಮಾರ್‌ನಲ್ಲಿ ಸಂಘರ್ಷದ ಕಾರಣ ಅಲ್ಲಿನ ಸೈನಿಕರು ಮತ್ತು ಪ್ರಜೆಗಳು ಗಡಿ ದಾಟಿ ಭಾರತಕ್ಕೆ ಬರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಸರ್ಕಾರ ಈ ಹೆಜ್ಜೆಯಿಟ್ಟಿದೆ.

ಅಸ್ಸಾಂ ಪೊಲೀಸ್‌ ಕಮಾಂಡೊಗಳ ಪ್ರಥಮ ಬ್ಯಾಚ್‌ನ ನಿರ್ಗಮನ ಪಥಸಂಚಲನ ಸಮಾರಂಭದಲ್ಲಿ ಮಾತನಾಡಿದ ಶಾ, ‘ಮ್ಯಾನ್ಮಾರ್‌ ಜತೆಗಿನ ನಮ್ಮ ಗಡಿ ಮುಕ್ತವಾಗಿತ್ತು. ಆದರೆ ನರೇಂದ್ರ ಮೋದಿ ಸರ್ಕಾರವು ಭಾರತ– ಬಾಂಗ್ಲಾದೇಶ ನಡುವಣ ಗಡಿ ರೀತಿಯಲ್ಲೇ ಮ್ಯಾನ್ಮಾರ್‌ ಜತೆಗಿನ ಗಡಿಯಲ್ಲೂ ಬೇಲಿ ಹಾಕಲು ನಿರ್ಧರಿಸಿದೆ’ ಎಂದರು.

‘ಭಾರತ–ಮ್ಯಾನ್ಮಾರ್ ಗಡಿ ಸಮೀಪ ನೆಲೆಸಿರುವ ಜನರು ಪರಸ್ಪರರ ಭೂಪ್ರದೇಶದೊಳಗೆ ಸಂಚಾರಕ್ಕೆ ಅವಕಾಶ ನೀಡುವ ಮುಕ್ತ ಸಂಚಾರ ಒಪ್ಪಂದವನ್ನು (ಎಫ್‌ಎಂಆರ್‌) ಸರ್ಕಾರ ಕೊನೆಗೊಳಿಸಲಿದೆ’ ಎಂದು ತಿಳಿಸಿದರು.

ಮ್ಯಾನ್ಮಾರ್‌ ಗಡಿಗೆ ಬೇಲಿ ಹಾಕಲು ಮತ್ತು ಎಫ್‌ಎಂಆರ್‌ ರದ್ದುಪಡಿಸಲು ಮಣಿಪುರ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಅವರು ಕೇಂದ್ರ ಸರ್ಕಾರವನ್ನು ಹಲವು ಸಲ ಒತ್ತಾಯಿಸಿದ್ದಾರೆ. ಆದರೆ ಮಿಜೋರಾಂ ಮತ್ತು ನಾಗಾಲ್ಯಾಂಡ್‌ ಸರ್ಕಾರವು ಬೇಲಿ ಹಾಕುವ ನಿರ್ಧಾರಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT