ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಮಕ್ಕಳು ಟಾರ್ಗೆಟ್ ಆದಾಗ ನಿಮ್ಮ ನಿಲುವೇನು? ಜಯಾ ಬಚ್ಚನ್‌ಗೆ ಕಂಗನಾ ಪ್ರಶ್ನೆ

Last Updated 15 ಸೆಪ್ಟೆಂಬರ್ 2020, 8:47 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯಸಭಾ ಸದಸ್ಯೆ ಹಾಗೂಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಪತ್ನಿ ಜಯಾ ಬಚ್ಚನ್‌ ಅವರನ್ನು ನಟಿ ಕಂಗನಾ ರನೌತ್‌‌ ತರಾಟೆಗೆ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ಮೃತಪಟ್ಟನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಚಿತ್ರರಂಗ ಹಾಗೂ ಡ್ರಗ್ಸ್ ಜಾಲದ ನಂಟಿನ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿವೆ.‌ ಈ ವೇಳೆಬಿಜೆಪಿಯ ಸಂಸದ ಮತ್ತು ಭೋಜ್‌ಪುರಿ ನಟ ರವಿ ಕಿಶನ್ ಅವರು ಸೋಮವಾರ, ‘ಸಿನಿಮಾ ಕ್ಷೇತ್ರದಲ್ಲಿ ಡ್ರಗ್ಸ್ ಚಟದ ಸಮಸ್ಯೆ ಇದೆ’ ಎಂದಿದ್ದರು.ಕಂಗನಾ ‘ಬಾಲಿವುಡ್’‌ ಅನ್ನು ಇತ್ತೀಚೆಗೆ ‘ಚರಂಡಿ’ಗೆ ಹೋಲಿಸಿದ್ದರು.

ಇಂದು ನಡೆದ ಸಂಸತ್‌ ಅಧಿವೇಶನದಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸದೆಯೇ ಮಾತನಾಡಿದ ಜಯಾ ಬಚ್ಚನ್‌, ‘ಅವರಿಗೆ ತುತ್ತು ನೀಡುತ್ತಿರುವ ಕೈಗಳನ್ನೇ ಅವರು ಕಚ್ಚುತ್ತಿದ್ದಾರೆ’ ಎಂದುಟೀಕಿಸಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಂಗನಾ,‘ಜಯಾ ಜೀ ನನ್ನ ಜಾಗದಲ್ಲಿ ನಿಮ್ಮ ಮಗಳು ಶ್ವೇತಾ ಇದ್ದಿದ್ದರೆ, ಅವಳು ಹದಿಹರೆಯದವಳಾಗಿದ್ದಾಗ ಮಾದಕ ವ್ಯಸನಿಯಾಗಿ, ಕಿರುಕುಳಕ್ಕೊಳಗಾಗಿದ್ದರೆ, ಅಭಿಷೇಕ್ ನಿರಂತರವಾಗಿ ಬೆದರಿಕೆ ಮತ್ತು ಕಿರುಕುಳದ ಬಗ್ಗೆ ಆರೋಪಿಸಿದ್ದರೆ ಹಾಗೂ ಒಂದು ದಿನ ನೇಣು ಬಿಗಿದುಕೊಂಡಿದ್ದರೆ ನೀವು ಆಗಲೂ ಇದೇ ಮಾತನ್ನು ಹೇಳುವಿರಾ? ನಮಗೂ ಸಹಾನುಭೂತಿ ತೋರಿಸಿ’ ಎಂದು ಟ್ವೀಟ್‌ ಮಾಡಿದ್ದಾರೆ.

‘ಒಬ್ಬ ಪ್ರತಿದ್ಧ ನೃತ್ಯನಿರ್ದೇಶಕ ಒಮ್ಮೆ, ‘ನಾವು ಅತ್ಯಾಚಾರ ಎಸಗಿದ್ದೇವೆ ಎಂದಾದರೆ, ನಾವು ಅವರಿಗೆ ಜೀವನೋಪಾಯವನ್ನೂ ಕಲ್ಪಿಸಿದ್ದೇವೆ’ ಎಂದು ಹೇಳಿದ್ದರು. ನೀವೂ ಅದನ್ನೇ ಹೇಳುತ್ತಿರುವಿರಾ? ಮಹಿಳೆಯರು ದೂರು ನೀಡಲು ಪ್ರೊಡಕ್ಷನ್‌ ಹೌಸ್‌ಗಳಲ್ಲಿ ಸರಿಯಾದ ಮಾನವ ಸಂಪನ್ಮೂಲ ವಿಭಾಗಗಳಿಲ್ಲ. ಸುರಕ್ಷತೆ ಅಥವಾವಿಮಾ ಸೌಲಭ್ಯವಿಲ್ಲ. ಪ್ರತಿದಿನವೂ ಪ್ರಾಣವನ್ನು ಪಣಕ್ಕಿಡುವವರಿಗೆ ಎಂಟು ಗಂಟೆಗಳ ಶಿಫ್ಟ್‌ ಎಂಬ ಕಟ್ಟುಪಾಡುಗಳೂ ಇಲ್ಲ’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ‘ಬಡವರಿಗೆ ಆಹಾರ ಸಾಕು’ ಎಂಬ ಮನಸ್ಥಿತಿಯನ್ನು ‘ಬಡವರಿಗೆ ಆಹಾರದ ಜೊತೆಗೆ ಗೌರವವೂ ಅಗತ್ಯ’ ಎಂದು ಬದಲಾಯಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ‘ಒಂದು ದಿನ ನಾನು ಗೌರವಾನ್ವಿತ ಪ್ರಧಾನ ಮಂತ್ರಿಯವರನ್ನು ಭೇಟಿಯಾದರೆ, ಈ ಬಗ್ಗೆ ಚರ್ಚಿಸುತ್ತೇನೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT