ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭ ಧರಿಸಿದ್ದನ್ನು ಮುಚ್ಚಿಟ್ಟು, ನವಜಾತ ಶಿಶುವನ್ನು ಬೀದಿಗೆ ಎಸೆದ ಮಹಿಳೆ

Published 3 ಮೇ 2024, 23:18 IST
Last Updated 3 ಮೇ 2024, 23:18 IST
ಅಕ್ಷರ ಗಾತ್ರ

ಕೊಚ್ಚಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಮಹಿಳೆ, ತಾನು ಗರ್ಭ ಧರಿಸಿದ್ದನ್ನು ಮುಚ್ಚಿಟ್ಟದ್ದಲ್ಲದೇ, ಜನಿಸಿದ್ದ ಶಿಶುವನ್ನು ಪೊಟ್ಟಣವೊಂದರಲ್ಲಿ ಹಾಕಿ, ತಾನು ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ ಮುಂದಿನ ಬೀದಿಯಲ್ಲಿ ಎಸೆದ ಘಟನೆ ಕೊಚ್ಚಿಯಲ್ಲಿ ಶುಕ್ರವಾರ ನಡೆದಿದೆ.

ಅಮೆಜಾನ್‌ ಕಂಪನಿ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ಬಳಸುವ ಪೊಟ್ಟಣದಲ್ಲಿ ಮಹಿಳೆ ಮಗುವನ್ನು ಇರಿಸಿ, ಎಸೆದಿದ್ದರು. ಪೊಟ್ಟಣದ ಮೇಲಿದ್ದ ವಿಳಾಸದ ಆಧಾರದ ಮೇಲೆ 23 ವರ್ಷದ ಮಹಿಳೆಯನ್ನು ಪತ್ತೆ ಹಚ್ಚಿರುವ ಪೊಲೀಸರು, ಆಕೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೊಚ್ಚಿಯ ಐಷಾರಾಮಿ ವಸತಿ ಪ್ರದೇಶವಾದ ಪನಂಪಿಳ್ಳಿ ನಗರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪೌರಕಾರ್ಮಿಕರು, ಬೀದಿ ಬದಿ ಶಿಶುವಿನ ಮೃತದೇಹ ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  

‘ಶುಕ್ರವಾರ ಬೆಳಗಿನ 5ರ ಸುಮಾರಿಗೆ ತಾನಿರುವ ಫ್ಲ್ಯಾಟ್‌ನ ಸ್ನಾನದಕೋಣೆಯಲ್ಲಿ ಮಗುವಿಗೆ ಜನ್ಮ ನೀಡಿದೆ. ಆತಂಕಕ್ಕೆ ಒಳಗಾಗಿ ನವಜಾತ ಶಿಶುವನ್ನು ಪೊಟ್ಟಣದಲ್ಲಿ ಹಾಕಿ, ಎಸೆದಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಮಹಿಳೆ ತಿಳಿಸಿದ್ದಾಳೆ’ ಎಂದು ನಗರ ಪೊಲೀಸ್‌ ಕಮಿಷನರ್ ಎಸ್‌.ಶ್ಯಾಮಸುಂದರ್‌ ಹೇಳಿದ್ದಾರೆ.

‘ಮಹಿಳೆಯ ಪಾಲಕರು ಆಕೆಯೊಂದಿಗೆ ವಾಸಿಸುತ್ತಿದ್ದು, ಆಕೆ ಗರ್ಭಿಣಿಯಾಗಿರುವ ಬಗ್ಗೆ ಅವರಿಗೆ ಗೊತ್ತಿರಲಿಲ್ಲ. ಸ್ನಾನದ ಕೋಣೆಯಲ್ಲಿ ಹೆರಿಗೆ ಆಗಿರುವ ಕಾರಣ, ಆ ವಿಷಯವೂ ಪಾಲಕರಿಗೆ ತಿಳಿದಿರಲಿಲ್ಲ. ಶಿಶುವಿನ ಮೃತದೇಹ ಪತ್ತೆಯಾದ ನಂತರ ಪೊಲೀಸರು ತನಿಖೆಗಾಗಿ ಅವರ ಮನೆಗೆ ತೆರಳಿದಾಗಲೇ ಪಾಲಕರಿಗೂ ವಿಷಯ ಗೊತ್ತಾಯಿತು’ ಎಂದು ಹೇಳಿದ್ದಾರೆ.

‘ಮಹಿಳೆ ಮೇಲೆ ಅತ್ಯಾಚಾರ ನಡೆದಿರುವ ಶಂಕೆ ಇದ್ದು, ಈ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆ ಆರೋಪದಡಿ ಆಕೆಯನ್ನು ಬಂಧಿಸಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT