ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಡಿಶಾ: ಮಹಿಳೆಯ ತಲೆ ಬೋಳಿಸಲು ಆದೇಶ

Published : 25 ಆಗಸ್ಟ್ 2024, 14:22 IST
Last Updated : 25 ಆಗಸ್ಟ್ 2024, 14:22 IST
ಫಾಲೋ ಮಾಡಿ
Comments

ಭುವನೇಶ್ವರ: ಸ್ಥಳೀಯರು ನಡೆಸಿದ ‘ಪಂಚಾಯಿತಿ’ಯ ಆದೇಶದ ಅನುಸಾರ ಒಡಿಶಾ ರಾಜ್ಯದ ಝಾರಸುಗುಡ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ತಲೆ ಬೋಳಿಸಿ, ಆಕೆಯ ಮೇಲೆ ಬಹಿಷ್ಕಾರ ಹೇರಲಾಗಿದೆ ಎಂಬ ದೂರು ದಾಖಲಾಗಿದೆ.

ದೂರು ಆಧರಿಸಿ ಪೊಲೀಸರು ಮಹಿಳೆಯ ಪತಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ರೌತ್‌ಬಹಾಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಮಹಿಳೆಯು ತನ್ನ ಪತಿಯ ಜೊತೆ ಆಗಸ್ಟ್‌ 9ರಂದು ಜಗಳವಾಡಿದ್ದಳು. ಜಗಳದ ಸಂದರ್ಭದಲ್ಲಿ ಆಕೆ, ಪತಿಗೆ ಹೊಡೆದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನು ಪತಿಯು ಗ್ರಾಮಸ್ಥರಿಗೆ ತಿಳಿಸಿದ್ದ.

ನಂತರ ಸ್ಥಳೀಯರು ಪಂಚಾಯಿತಿ ಸೇರಿಸಿ, ವಿಚಾರಣೆ ನಡೆಸಿದ್ದರು. ಮಹಿಳೆಯ ತಲೆ ಬೋಳಿಸಬೇಕು ಮತ್ತು ಆಕೆಗೆ ಬಹಿಷ್ಕಾರ ಹೇರಬೇಕು ಎಂದು ಪಂಚಾಯಿತಿಯು ಆದೇಶಿಸಿದೆ ಎನ್ನಲಾಗಿದೆ. ಅಲ್ಲದೆ, ಮಹಿಳೆಯು ₹5,000 ದಂಡ ಪಾವತಿಸಬೇಕು ಹಾಗೂ ಜನರಿಗೆ ಮಟನ್ ಊಟ ಹಾಕಿಸಬೇಕು ಎಂದು ಕೂಡ ಆದೇಶಿಸಿದೆ ಎನ್ನಲಾಗಿದೆ.

ಮಹಿಳೆಯ ತಲೆ ಬೋಳಿಸಿ, ಆಕೆಗೆ ಬಹಿಷ್ಕಾರ ಹೇರಿದ ನಂತರ ಆಕೆ ತನ್ನ ಮಗನ ಜೊತೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ‘ಮಹಿಳೆಯ ಪತಿ ಹಾಗೂ ಗ್ರಾಮದ ಮೂವರು ಇತರರು ಈ ಕೃತ್ಯದಲ್ಲಿ ಭಾಗಿಯಾಗಿರುವುದು ನಮಗೆ ತನಿಖೆಯಿಂದ ಗೊತ್ತಾಗಿದೆ. ಅವರನ್ನು ನಾವು ಬಂಧಿಸಿದ್ದೇವೆ’ ಎಂದು ಲೈಕೆರಾ ಪೊಲೀಸ್ ಠಾಣೆಯ ಅಧಿಕಾರಿ ದಿಲೀಪ್ ಕುಮಾರ್ ಬೆಹೆರಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT