ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Telangana Politics: ಬಿಆರ್‌ಎಸ್ ತೊರೆದು ಕಾಂಗ್ರೆಸ್‌ ಸೇರಿದ ಕಡಿಯಂ ಶ್ರೀಹರಿ

Published 31 ಮಾರ್ಚ್ 2024, 14:16 IST
Last Updated 31 ಮಾರ್ಚ್ 2024, 14:16 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲಂಗಾಣದ ಶಾಸಕ ಹಾಗೂ ಮಾಜಿ ಸಚಿವ ಕಡಿಯಂ ಶ್ರೀಹರಿ ಹಾಗೂ ಅವರ ಪುತ್ರಿ ಕಡಿಯಂ ಕಾವ್ಯಾ ಅವರು ಬಿಆರ್‌ಎಸ್‌ ತೊರೆದು ಭಾನುವಾರ ಕಾಂಗ್ರೆಸ್‌ ಸೇರ್ಪಡೆಗೊಂಡರು.

ಮುಖ್ಯಮಂತ್ರಿ ಎ.ರೇವಂತ್‌ ರೆಡ್ಡಿ ಅವರ ಸಮ್ಮುಖದಲ್ಲಿ ಇವರಿಬ್ಬರು ಪಕ್ಷಕ್ಕೆ ಸೇರಿದರು.

‘ಹಲವು ಕಾರಣಗಳಿಂದ ಜನರು ಬಿಆರ್‌ಎಸ್‌ನಿಂದ ದೂರ ಉಳಿಯುತ್ತಿದ್ದಾರೆ. ಜನರ ಸೇವೆಗೆ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಸೇರಿದ್ದೇನೆ’ ಎಂದು ಶ್ರೀಹರಿ ತಿಳಿಸಿದರು. ಬಿಆರ್‌ಎಸ್‌ ಪಕ್ಷವು ಕಾವ್ಯಾ ಅವರನ್ನು ವಾರಂಗಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಈ ಹಿಂದೆ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT