ಶ್ರೀನಗರ: ಕರ್ನಾಟಕ ವಿಧಾನಸಭಾ ಕಲಾಪದಲ್ಲಿ ಸಭಾಧ್ಯಕ್ಷ ರಮೇಶ್ ಕುಮಾರ್, ‘ನನ್ನ ಸ್ಥಿತಿ ರೇಪ್ಗೆ ಒಳಗಾದವರಂತಾಗಿದೆ’ ಎಂದು ಹೇಳಿದ್ದನ್ನು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಖಂಡಿಸಿದ್ದಾರೆ.

'ಸರ್, ನಿಮಗೆ ಅತ್ಯಾಚಾರ ಸಂತ್ರಸ್ತೆಯ ನೋವು ಅರ್ಥವಾಗಲ್ಲ.ಮಹಿಳೆಯ ಯಾವ ರೀತಿ ಆ ನೋವನ್ನು ಅನುಭವಿಸುತ್ತಾಳೆ ಎಂಬುದರ ಬಗ್ಗೆ ನಿಮಗೆ ಕಲ್ಪನೆಯೇ ಇಲ್ಲ ಬಿಡಿ.ನೀವು ನೀಡಿದ ಹೋಲಿಕೆ ದುರದೃಷ್ಟಕರ.ನಿಮ್ಮ ಮಾತಿಗೆ ಅಲ್ಲಿದ್ದಶಾಸಕರೂ ನಕ್ಕಿದ್ದು ನೋಡಿ ಇನ್ನೂ ಬೇಸರವಾಯಿತು'ಎಂದು ಪಿಡಿಬಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಹೇಳಿದ್ದಾರೆ.

ಮಂಗಳವಾರ ಆಡಿಯೋ ಪ್ರಕರಣದ ಕುರಿತು ವಿಧಾಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುವ ಚರ್ಚೆಯ ವೇಳೆ ಮಾತನಾಡಿದ ಸಭಾಧ್ಯಕ್ಷ ರಮೇಶ್ ಕುಮಾರ್, ‘ನನ್ನ ಸ್ಥಿತಿ ರೇಪ್ಗೆ ಒಳಗಾದವರಂತಾಗಿದೆ’ ಎಂದಿದ್ದರು.

ಆಡಳಿತ ಮತ್ತು ಬಿಜೆಪಿ ಸದಸ್ಯರು ಪದೇ ಪದೆ ತಮ್ಮ ಹೆಸರು ಪ್ರಸ್ತಾಪ ಮಾಡುತ್ತಿರುವುದನ್ನು ನೋಡಿ ಸಭಾಧ್ಯಕ್ಷರು ಈ ರೀತಿ ಹೇಳಿದ್ದಾರೆ. ‘ರೇಪ್ ಒಂದೇ ಸಲ ಆಗಿ ಹೋಗಿರುತ್ತದೆ. ಆದರೆ ವಿಚಾರಣೆ ವೇಳೆ ಯಾರು ಮಾಡಿದರು, ಎಲ್ಲಿ ಮಾಡಿದರು, ಹೇಗೆ ಮಾಡಿದರು, ಎಷ್ಟೊತ್ತು ಮಾಡಿದರು? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಪದೇ ಪದೇ ಕೇಳಿ ಕಿರಿಕಿರಿ ಉಂಟು ಮಾಡಲಾಗುತ್ತದೆ. ಈ ಪ್ರಕರಣದಲ್ಲಿ ನನ್ನ ಸ್ಥಿತಿಯೂ ಹಾಗೆಯೇ ಆಗಿದೆ’ ಎಂದು ರಮೇಶ್ ಕುಮಾರ್ ಹೇಳಿದಾಗ ಸದನದಲ್ಲಿ ಎಲ್ಲರೂ ನಕ್ಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.