ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಸಲು ನಿರಾಕರಿಸಿದ ಬಾಲಕಿಯನ್ನು ಆಕೆಯ ತಾಯಿ ಎದುರೇ ಇರಿದು ಕೊಂದ ಯುವಕ!

Published 17 ಆಗಸ್ಟ್ 2023, 11:12 IST
Last Updated 17 ಆಗಸ್ಟ್ 2023, 11:12 IST
ಅಕ್ಷರ ಗಾತ್ರ

ಮುಂಬೈ: ಪ್ರೀತಿ ನಿರಾಕರಿಸಿದಕ್ಕೆ 12 ವರ್ಷದ ಹುಡುಗಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ್‌ ಜಿಲ್ಲೆಯ ತೀಸ್‌ಗಾಂವ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಆರೋಪಿಯನ್ನು ಆದಿತ್ಯ ಕಾಂಬ್ಳೆ(20) ಎಂದು ಗುರುತಿಸಲಾಗಿದೆ.

ಬಾಲಕಿಯು ಟ್ಯೂಷನ್ ಮುಗಿಸಿ ತಾಯಿಯೊಂದಿಗೆ ಮನೆಗೆ ಮರಳುತ್ತಿದ್ದಾಗ ಆರೋಪಿಯು ದಾರಿಯಲ್ಲಿ ಅಡ್ಡಗಟ್ಟಿದ್ದಾನೆ. ಈ ವೇಳೆ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಬಾಲಕಿಗೆ ಒತ್ತಾಯ ಮಾಡಿದ್ದಾನೆ. ಆದರೆ ಜೊತೆಯಲ್ಲಿಯೇ ಇದ್ದ ಬಾಲಕಿಯ ತಾಯಿ ಈ ವರ್ತನೆಯನ್ನು ವಿರೋಧಿಸಿದ್ದಾರೆ.

ಈ ವೇಳೆ ಕೋಪಕೊಂಡ ಕಾಂಬ್ಳೆ ಬಾಲಕಿಯ ತಾಯಿಯನ್ನು ದೂರ ತಳ್ಳಿ ಆಕೆಯ ಎದುರಲ್ಲೇ ಬಾಲಕಿಯ ಮೇಲೆ ಚಾಕುವಿನಿಂದ ಅನೇಕ ಬಾರಿ ಇರಿದಿದ್ದಾನೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರ ಹೊತ್ತಿಗೆ ಪ್ರಾಣ ಹೋಗಿದೆ. ಘಟನೆಯ ಬಳಿಕ ಆರೋಪಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಲ್ಲಿನ ಬಿಜೆಪಿ ಶಾಸಕ ಗಣಪತಿ ಗಾಯಕ್‌ವಾಡ್, ಇದು ಹೇಯ ಕೃತ್ಯವಾಗಿದೆ. ಈ ಭಾಗದಲ್ಲಿ ಪೋಲಿಸ್ ಸಿಬ್ಬಂದಿಯ ಕೊರತೆ ಎದುರಾಗಿದೆ. ಆರೋಪಿ ಕಾಂಬ್ಳೆ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT