ಮುಂಬೈ: ತೈಲ ದರ ಏರಿಕೆಯ ವಿರುದ್ಧ ಶಿವಸೇನೆಯ ಯುವ ಘಟಕ 'ಯುವ ಸೇನೆ'ಯು ಮುಂಬೈನ ಬೀದಿಗಳಲ್ಲಿ ಬ್ಯಾನರ್ ಹಾಕಿ ಪ್ರತಿಭಟನೆ ನಡೆಸುತ್ತಿದೆ.

ಇದನ್ನೂ ಓದಿ: ಇಂಧನ ದರದ ಬಗ್ಗೆ ಅಪಪ್ರಚಾರ: ಧರ್ಮೇಂದ್ರ ಪ್ರಧಾನ್

ಗ್ಯಾಸ್, ಪೆಟ್ರೋಲ್, ಡಿಸೇಲ್‌ಗಳ ಬೆಲೆ 2015ರಲ್ಲಿ ಎಷ್ಟಿತ್ತು, 2021ರಲ್ಲಿ ಎಷ್ಟಾಗಿದೆ ಎಂಬುದರ ಪಟ್ಟಿಯುಳ್ಳ ಬ್ಯಾನರ್‌ಗಳನ್ನು ಬಾಂದ್ರಾ ಪ್ರದೇಶದ ಬೀದಿಗಳಲ್ಲಿ, ಪೆಟ್ರೋಲ್ ಬಂಕ್‌ಗಳ ಬಳಿ ಹಾಕಲಾಗಿದೆ.

ಯುವ ಸೇನೆ ಹಾಕಿರುವ ಈ ಬ್ಯಾನರ್‌ಗಳಲ್ಲಿ 'ಇದೇ ನೋಡಿ ಅಚ್ಚೇ ದಿನ್' ಎಂದು ಶೀರ್ಷಿಕೆ ನೀಡಲಾಗಿದೆ. ಈ ಮೂಲಕ ತೈಲ ದರ ಏರಿಕೆ ವಿರುದ್ಧ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದೆ.

ನೋಡಿ: Video - ಸತತ 12ನೇ ದಿನವೂ ಪೆಟ್ರೋಲ್ ಬೆಲೆ ಏರಿಕೆ: ಬೆಂಗಳೂರಿನಲ್ಲೆಷ್ಟು?

ಕಳೆದ ಹಲವು ದಿನಗಳಿಂದ ತೈಲ ದರ ಏರುಗತಿಯಲ್ಲಿ ಸಾಗುತ್ತಿದ್ದು, ಕೆಲವು ನಗರಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ₹100 ತಲುಪಿದೆ.

ಗ್ರಾಹಕರಿಗೆ ಇಂಧನವನ್ನು ಯೋಗ್ಯ ಬೆಲೆಯಲ್ಲಿ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚರ್ಚೆ ನಡೆಸಬೇಕಿದೆ ಎಂದು ಸೀತಾರಾಮನ್ ಹೇಳಿದ್ದರು.

ಇದನ್ನೂ ಓದಿ:ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ ₹93, ರಾವಣನ ಲಂಕೆಯಲ್ಲಿ ₹51: ಸ್ವಾಮಿ ಟೀಕೆ

ಪೆಟ್ರೋಲ್ ಮತ್ತು ಡೀಸೆಲ್ ದರ ಅಂತರರಾಷ್ಟ್ರೀಯ ದರ ವ್ಯವಸ್ಥೆ ಆಧರಿಸಿ ನಿರ್ಧಾರವಾಗುತ್ತಿದೆ. ಹೀಗಿರುವಾಗ, ಇಂಧನ ದರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ ಎಂದು ಅಪಪ್ರಚಾರ ಮಾಡುತ್ತಿರುವುದು ತಪ್ಪು’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.