ನವದೆಹಲಿ (ಪಿಟಿಐ): ರೈಲ್ವೆ ಇಲಾಖೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರೂ ಮುಂದಿನ ರೈಲ್ವೆ ಬಜೆಟ್‌ನಲ್ಲಿ ರೈಲು ಪ್ರಯಾಣ ದರವನ್ನು ಹೆಚ್ಚಳ ಮಾಡುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ದೇಶದಾದ್ಯಂತ ರೈಲು ಪ್ರಯಾಣದರಲ್ಲಿ ಶೇ10ರಷ್ಟು ಏರಿಕೆ ಮಾಡಿದರೆ ಅದು 2000 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಸಂಗ್ರಹಿಸಬಹುದು. ಆದರೆ ರೈಲ್ವೆ ಇಲಾಖೆಯ ಒಟ್ಟು ವೆಚ್ಚ ಮತ್ತು ಆದಾಯಕ್ಕೆ ಹೋಲಿಸಿದರೆ ಇದು ತುಂಬಾ ಸಣ್ಣ ಮೊತ್ತವಾಗಲಿದೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ಹೇಳಿವೆ.

ಆದಾಗ್ಯೂ, ಸರಕು ಸಾಗಣೆ ದರದಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಬಹುದು. ರಸ್ತೆ ಮೂಲಕ ಸರಕು ಸಾಗಣೆ ಸಂಸ್ಥೆಗಳು ಸತತವಾಗಿ ತೀವ್ರ ಸ್ಪರ್ಧೆ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ದರ ಏರಿಕೆಯೂ ತುಂಬಾ ಕನಿಷ್ಠವಾಗಲಿದೆ ಎಂದು ಮೂಲಗಳು ತಿಳಿಸಿವೆ.

2010-11ರ ಅವಧಿಯಲ್ಲಿ ರೈಲ್ವೆಯು ಸರಕು ಸಾಗಣೆಯಿಂದ 94,765 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದೂ ತಿಳಿಸಿವೆ. ‘ಟ್ರೈನ್ ಸೆಟ್’ ಅಂದರೆ ರೈಲ್ವೆ ಎಂಜಿನ್ ಹಾಗೂ ಬೋಗಿಗಳು ಪರಸ್ಪರ ಸೇರಿಕೊಂಡಿರುವ ಹೊಸ ಶ್ರೇಣಿಯ ರೈಲುಗಳನ್ನು ದೇಶದಲ್ಲಿ ಪರಿಚಯಿಸುವ ವಿಚಾರವನ್ನು ಬಜೆಟ್ ಒಳಗೊಳ್ಳಲಿರುವ ಸಾಧ್ಯತೆ ಇದೆ.

ಈ ಬಗ್ಗೆ ರೈಲ್ವೆ ಸಚಿವಾಲಯದಲ್ಲಿ ಪ್ರಸ್ತಾವನೆ ಇದೆ. ಆದರೆ, ಇದು ದುಬಾರಿ ಮತ್ತು ನಮ್ಮಲ್ಲಿರುವ ರೈಲ್ವೆ ಸಂಪರ್ಕಜಾಲಕ್ಕೆ ಹೊಂದಿಕೊಳ್ಳಲಾರದು ಎಂಬ ಕಾರಣಕ್ಕೆ ದೇಶದ ಕೆಲವು ರೈಲ್ವೆ ವಿಭಾಗಗಳು ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ ಎಂದು ಸಚಿವಾಲಯದ ಆಂತರಿಕ ಮೂಲಗಳು ತಿಳಿಸಿವೆ.

ಫ್ರಾನ್ಸ್‌ನ ಟಿಜಿವಿ, ಜರ್ಮನಿಯ ಐಸಿಇ ಮತ್ತು ಜಪಾನಿನಲ್ಲಿರುವ ಶಿಂಕನ್‌ಸೆನ್‌ಗಳನ್ನು ಹೋಲುವ ಟ್ರೈನ್ ಸೆಟ್‌ಗಳನ್ನು ಆಮದು ಮಾಡಿಕೊಳ್ಳುವ ಪ್ರಸ್ತಾವನೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.