ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀನಾ ಬೋರಾ ಹತ್ಯೆ: ಇಂದ್ರಾಣಿ ಮುಖರ್ಜಿ ಜಾಮೀನು ಅರ್ಜಿ ವಜಾ

Last Updated 7 ಸೆಪ್ಟೆಂಬರ್ 2018, 12:46 IST
ಅಕ್ಷರ ಗಾತ್ರ

ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣದ ಆರೋ‍ಪಿ ಇಂದ್ರಾಣಿ ಮುಖರ್ಜಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿನ ಸಿಬಿಐ ನ್ಯಾಯಾಲಯ ಶುಕ್ರವಾರ ತಳ್ಳಿ ಹಾಕಿದೆ.

ಅನಾರೋಗ್ಯ ಮತ್ತು ಕಾರಾಗೃಹದಲ್ಲಿ ತನಗೆ ಜೀವ ಬೆದರಿಕೆ ಇದೆ ಎಂಬ ಕಾರಣ ನೀಡಿ ಜಾಮೀನು ನೀಡುವಂತೆ ಆಗಸ್ಟ್‌ನಲ್ಲಿ ಇಂದ್ರಾಣಿ ಅರ್ಜಿ ಸಲ್ಲಿಸಿದ್ದರು.

‘ಹೊರಗೆ ಇರುವುದಕ್ಕಿಂತ ಕಾರಾಗೃಹದಲ್ಲಿ ಇರುವುದೇ ಹೆಚ್ಚು ಸುರಕ್ಷಿತ’ ಎಂದು ಹೇಳಿರುವ ನ್ಯಾಯಾಲಯ ಅರ್ಜಿ ತಿರಸ್ಕರಿಸಿತು. ಅನಾರೋಗ್ಯ ಎಂಬ ಕಾರಣ ಉತ್ಪ್ರೇಕ್ಷೆಯಿಂದ ಕೂಡಿದೆ ಎಂದು ನ್ಯಾಯಾಧೀಶ ಜೆ.ಸಿ.ಜಾಂಗ್‌ದಾಳೆ ಹೇಳಿದ್ದಾರೆ.

ಇಂದ್ರಾಣಿ ಅವರನ್ನು ಜೈಲಿನ ಸೆಲ್‌ನಲ್ಲೇ ಭದ್ರತೆಯಿಂದ ಇಡಬೇಕು ಮತ್ತು ದಿನದ ಇಪ್ಪತ್ತನಾಲ್ಕು ಗಂಟೆ ಪಹರೆ ಒದಗಿಸಬೇಕು ಎಂಬ ಸಿಬಿಐ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT