ಬೆಂಗಳೂರು: ಶಾಲೆ ಹಾಗೂ ಪದವಿ ಪೂರ್ವ ಹಂತಗಳಲ್ಲೇ ಹೊರಗುಳಿದ ಕಾರಣ ರಾಜ್ಯದ 37 ಲಕ್ಷ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಉನ್ನತ ಶಿಕ್ಷಣದ ಮೇಲಿನ ರಾಷ್ಟ್ರೀಯಮಟ್ಟ ಸಮೀಕ್ಷೆಗಾಗಿ (ಎಐಎಸ್‌ಎಚ್‌ಇ) ಕೇಂದ್ರ ಸರ್ಕಾರ 2020-21ನೇ ಶೈಕ್ಷಣಿಕ ವರ್ಷಕ್ಕೆ ರಾಜ್ಯ ಸರ್ಕಾರದಿಂದ ಪಡೆದ, ಉನ್ನತ ಶಿಕ್ಷಣದಲ್ಲಿ ಕರ್ನಾಟಕದ ಒಟ್ಟು ದಾಖಲಾತಿ ಅನುಪಾತದ (ಜಿಇಆರ್) ಅಂಕಿಅಂಶಗಳಿಂದ ಈ ಮಾಹಿತಿ ದೊರೆ ತಿದೆ. ಕರ್ನಾಟಕದಲ್ಲಿ ಹೆಚ್ಚಿನ ವಿದ್ಯಾರ್ಥಿ ಗಳು ದಾಖಲಾತಿಯಿಂದ ಹೊರಗುಳಿದ ಕಾರಣ ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತ ಕುಂಠಿತವಾಗಿದೆ.

ಕಾಲೇಜಿಗೆ ತೆರಳಲು ಅರ್ಹ ಇರುವ ಒಟ್ಟು ಜನಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆಯಲು ದಾಖಲಾದ ವಿದ್ಯಾರ್ಥಿಗಳ ಸಂಖ್ಯೆಯೇ ಜಿಇಆರ್. 18ರಿಂದ 23 ವಯೋಮಾನದವರನ್ನು ಗುರುತಿಸಿ ಇದರ ಲೆಕ್ಕಾಚಾರ ಹಾಕಲಾಗಿದೆ. ವೈದ್ಯಕೀಯ, ತಾಂತ್ರಿಕ, ಡಿಪ್ಲೊಮಾ ಹಾಗೂ ಇತರ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ವಿದ್ಯಾರ್ಥಿಗಳ ಸಂಖ್ಯೆಯನ್ನು ಈ ವಿಶ್ಲೇಷಣೆಗೆ ಪರಿಗಣಿಸಲಾಗಿದೆ.

ಹುಟ್ಟಿದ ವರ್ಷವನ್ನು ಆಧರಿಸಿ 10ನೇ ತರಗತಿ ದಾಖಲಾತಿ ದತ್ತಾಂಶಗಳನ್ನು ತೆಗೆದುಕೊಂಡು ಹೊರಗುಳಿದ ವಿದ್ಯಾರ್ಥಿಗಳನ್ನು ಲೆಕ್ಕ ಹಾಕಲಾಗಿದೆ. ಉದಾಹರಣೆಗೆ, 1992ರಲ್ಲಿ ಜನಿಸಿದ ವಿದ್ಯಾರ್ಥಿಯು 2007ರಲ್ಲಿ 10ನೇ ತರಗತಿ, 2009ರಲ್ಲಿ ದ್ವಿತೀಯ ಪಿಯುಗೆ ಬರಬೇಕು. 2015ರಲ್ಲಿ ಆತ ತನ್ನ 23ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

ಮಕ್ಕಳ ಜನ್ಮ ದಾಖಲೆಗಳ ಆಧಾರದಲ್ಲಿ 2007ರಿಂದ 2012ರ ಮಧ್ಯೆ ರಾಜ್ಯದ 56.29 ಲಕ್ಷ ವಿದ್ಯಾರ್ಥಿಗಳು 10ನೇ ತರಗತಿ ಪೂರ್ಣಗೊಳಿಸಿರಬೇಕು. ಆದರೆ, 22.59 ಲಕ್ಷ ವಿದ್ಯಾರ್ಥಿಗಳು ಪೂರ್ಣಗೊಳಿಸಿಲ್ಲ. 2008ರಿಂದ 2014ರ ನಡುವೆ 6.27 ಲಕ್ಷ ವಿದ್ಯಾರ್ಥಿಗಳು ಪ್ರಥಮ ಪಿಯುನಿಂದ ದ್ವಿತೀಯ ಪಿಯುಗೆ ಪ್ರವೇಶ ಪಡೆದಿಲ್ಲ. ದ್ವಿತೀಯ ಪಿಯು ಅಂತಿಮ ಪರೀಕ್ಷೆಯಲ್ಲಿ 8.15 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಈ ಪ್ರಕಾರ ಒಟ್ಟಾರೆ 37.02 ಲಕ್ಷ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿಲ್ಲ.

‘ಪರೀಕ್ಷೆ ತೆಗೆದುಕೊಂಡ ಶೇ 40ರಷ್ಟು ವಿದ್ಯಾರ್ಥಿಗಳು 10 ಹಾಗೂ 12ನೇ ತರಗತಿಯಲ್ಲಿ ಅನುತ್ತೀರ್ಣರಾಗುತ್ತಾರೆ. ಇದು ಉನ್ನತ ಶಿಕ್ಷಣ ದಾಖಲಾತಿಯ ಮೇಲೆ ಪರಿಣಾಮ ಬೀರುತ್ತಿದೆ. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜತೆ ಚರ್ಚಿಸಿದ್ದೇವೆ. ಶಾಲಾ ಹಂತದಲ್ಲೇ ಅಗತ್ಯ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ’ ಎನ್ನುತ್ತಾರೆ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ.

‘ಮಕ್ಕಳು ಶಾಲೆಯಿಂದ ಹೊರಗುಳಿ
ಯಲು ಸಾಮಾಜಿಕ-ಆರ್ಥಿಕ ಅಂಶಗಳು ಕಾರಣವಾಗುತ್ತವೆ. 8ನೇ ತರಗತಿವರೆಗೆ ಅನ್ವಯವಾಗುವ ಆರ್‌ಟಿಇ ಕಾಯ್ದೆಯನ್ನು 12ನೇ ತರಗತಿವರೆಗೂ ವಿಸ್ತರಿಸಬೇಕು. ರಾಜ್ಯದಲ್ಲಿ 48 ಸಾವಿರ ಪ್ರಾಥಮಿಕ ಶಾಲೆಗಳಿವೆ. ಪ್ರೌಢಶಾಲೆಗಳು 5 ಸಾವಿರ ದಾಟಿಲ್ಲ. ಇದು ಸಹ ಹಿನ್ನಡೆಗೆ ಕಾರಣ’ ಎನ್ನುವುದು ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಅವರ ಅಭಿಪ್ರಾಯ.

ಜಿಇಆರ್‌ನಲ್ಲೂ ನ್ಯೂನತೆ: ‘ಸರ್ಕಾರದ ಅಂಕಿಅಂಶಗಳ ಪ್ರಕಾರ ಉನ್ನತ ಶಿಕ್ಷಣ ತೊರೆದವರು 20 ಲಕ್ಷ ದಾಟಿಲ್ಲ.
ಜಿಇಆರ್ ನಿರ್ಧರಿಸಲು 18-23 ವಯೋ
ಮಾನದವರನ್ನು ಪರಿಗಣಿಸಬೇಕು ಎಂಬ
ಕೇಂದ್ರ ಸರ್ಕಾರದ ನಿಲುವು ದೋಷ
ಪೂರಿತವಾಗಿದೆ. ಜಿಇಆರ್ ಲೆಕ್ಕ ಹಾಕು
ವಾಗ ಎಲ್ಲಾ ಕೋರ್ಸ್‌ಗಳ ವಿದ್ಯಾರ್ಥಿ
ಗಳನ್ನು ಪರಿಗಣಿಸುತ್ತೇವೆ. ಹೆಚ್ಚಿನ ವಿದ್ಯಾರ್ಥಿಗಳು 21ನೇ ವಯಸ್ಸಿನಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸುತ್ತಾರೆ. ಉದ್ಯೋಗವನ್ನು ಪಡೆಯುತ್ತಾರೆ. ಹಲವು
ವರ್ಷಗಳ ನಂತರ ಉನ್ನತ ಶಿಕ್ಷಣಕ್ಕೆ
ಪ್ರವೇಶ ಪಡೆಯುತ್ತಾರೆ. ಎಲ್ಲರನ್ನೂ
ವಯಸ್ಸಿನ ಮೇಲೆ ನಿರ್ಧರಿಸಲಾಗದು’
ಎನ್ನುವುದು ಅಧಿಕಾರಿಗಳ ವಿವರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.