ಪಾವಗಡ: ತಾಲ್ಲೂಕಿನ ರಂಗಸಮುದ್ರದ ತಿಪ್ಪೇರುದ್ರಸ್ವಾಮಿ ದೇಗುಲದಲ್ಲಿ ಜಾತ್ರೆ ಪ್ರಯುಕ್ತ ವಿತರಿಸಿದ್ದ ಪ್ರಸಾದ ಸೇವಿಸಿ 230ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ.

ಗ್ರಾಮದಲ್ಲಿ ಮಂಗಳವಾರ ಸಂಜೆ ಜಾತ್ರೆಯ ಕಡೆ ದಿನವಾಗಿದ್ದರಿಂದ ಸುಮಾರು 300 ಭಕ್ತರಿಗೆ ದೇಗುಲದಲ್ಲಿ ಪುಳಿಯೊಗರೆ, ಮೊಸರನ್ನವನ್ನು
ವಿತರಿಸಲಾಗಿತ್ತು.

ರಾತ್ರಿ ಹೊಟ್ಟೆನೋವು, ಭೇದಿಯಿಂದ ಬಳಲುತ್ತಿದ್ದವರನ್ನು ಚಿಕಿತ್ಸೆಗಾಗಿ ಪಟ್ಟಣ ಮತ್ತು ಲಿಂಗದಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಹಶೀಲ್ದಾರ್ ಟಿ.ಕೆ. ತಿಪ್ಪೂರಾವ್ ಮತ್ತು ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಗ್ರಾಮದಲ್ಲಿ ಹೆಚ್ಚುವರಿ ವೈದ್ಯರನ್ನು ನಿಯೋಜಿಸಲಾಗಿದೆ.

‘ಪ್ರಸಾದದಲ್ಲಿ ವಿಷದ ಅಂಶ ಇತ್ತು ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆಹಾರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಸ್ಪಷ್ಟ ಕಾರಣ ತಿಳಿಯಲಿದೆ’ ಎಂದು ತಿಪ್ಪೂರಾವ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.