ಬೆಂಗಳೂರು: ‘ಕರ್ನಾಟಕ ಆಡಳಿತ ಸುಧಾರಣಾ ಆಯೋಗ–2’ ಅನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಆಯೋಗದ ಅಧ್ಯಕ್ಷರನ್ನಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರನ್ನು ನೇಮಿಸಲಾಗಿದೆ. ಮಧ್ಯಂತರ ವರದಿಯನ್ನು ಒಂದು ವರ್ಷದಲ್ಲಿ ಮತ್ತು ಅಂತಿಮ ವರದಿಯನ್ನು 2 ವರ್ಷದೊಳಗೆ ನೀಡಬೇಕು ಎಂದು ಸೂಚಿಸಲಾಗಿದೆ.

ಆಯೋಗದ ರಚನೆ ಉದ್ದೇಶ:

*ಹಾರನಹಳ್ಳಿ ರಾಮಸ್ವಾಮಿ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಅನುಷ್ಠಾನದ ಪರಿಶೀಲನೆ.

*ಇಲಾಖೆಗಳ ಪುನರ್ ರಚನೆ, ಸರ್ಕಾರದ ಎಲ್ಲ ಹಂತಗಳಲ್ಲಿನ ಸಿಬ್ಬಂದಿ ಬಲದ ಸಮರ್ಪಕ ಹೊಂದಾಣಿಕೆಗೆ ಶಿಫಾರಸು ಮಾಡುವುದು.

*ತಂತ್ರಜ್ಞಾನದಿಂದಾಗಿ ಹಲವು ಇಲಾಖೆಗಳಲ್ಲಿ ಅನಗತ್ಯವಾಗಿರುವ ಹುದ್ದೆಗಳನ್ನು ಗುರುತಿಸುವುದು, ಇಲಾಖೆ, ನಿಗಮ, ಮಂಡಳಿಗಳನ್ನು ವಿಲೀನಗೊಳಿಸುವ ಸಾಧ್ಯತೆ ಬಗ್ಗೆ ಸೂಚಿಸುವುದು.

*ಸರ್ಕಾರಿ ಸ್ವಾಮ್ಯದ ಉದ್ಯಮ, ಮಂಡಳಿ, ನಿಗಮಗಳ ಪ್ರಸ್ತುತತೆ, ಈಗ ಅಸ್ತಿತ್ವದಲ್ಲಿರುವ ಆಡಳಿತ ಮತ್ತು ಆಡಳಿತ ವ್ಯವಸ್ಥೆಯ ಸಮಗ್ರ ಅಧ್ಯಯನ ಮತ್ತು ಮೌಲ್ಯಮಾಪನ ಮಾಡಿ 21 ನೇ ಶತಮಾನದ ಮುಂದಿನ ದಶಕಗಳ ಅಗತ್ಯಗಳ ಪೂರೈಕೆಗೆ ಸೂಕ್ತ ಆಡಳಿತ ವ್ಯವಸ್ಥೆ ಮತ್ತು ರಚನಾತ್ಮಕ ಶಿಫಾರಸುಗಳನ್ನು ನೀಡುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.