ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷದ ದೀಪಾವಳಿಯ ಮೊದಲ ದಿನಕ್ಕಿಂತ ಈ ವರ್ಷದ ದೀಪಾವಳಿಯ ಮೊದಲ ದಿನ ವಾಯು ಮಾಲಿನ್ಯ ಶೇ 37ರಷ್ಟು ಕಡಿಮೆಯಾಗಿದ್ದರೆ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಶೇ 13ರಷ್ಟು ಇಳಿಕೆಯಾಗಿದೆ.

ದೀಪಾವಳಿಯ ಮೊದಲ ದಿನ ಅ.20ರಂದು ಬೀದರ್ನಲ್ಲಿ ಅತಿಹೆಚ್ಚು ವಾಯು ಮಾಲಿನ್ಯ (ವಾಯು ಗುಣಮಟ್ಟ ಇಂಡೆಕ್ಸ್– ಎಕ್ಯೂಐ) ದಾಖಲಾಗಿದೆ. ಕಳೆದ ವರ್ಷಕ್ಕಿಂತ ಶೇ 42ರಷ್ಟು ಹೆಚ್ಚಾಗಿದೆ. ಧಾರವಾಡ, ಶಿವಮೊಗ್ಗ, ಬೆಳಗಾವಿ ನಂತರದ ಸ್ಥಾನದಲ್ಲಿವೆ.

ಯಾದಗಿರಿ ವಾಯು ಮಾಲಿನ್ಯ (24 ಎಐಕ್ಯೂ) ಅತ್ಯಂತ ಕಡಿಮೆಯಾಗಿದ್ದು, ಎಕ್ಯೂಐನಲ್ಲಿ ಶೇ 188ರಷ್ಟು ಕಡಿಮೆಯಾಗಿದೆ. ಉತ್ತರ ಕನ್ನಡ, ರಾಮನಗರ, ಗದಗ, ದಾವಣಗೆರೆ, ಮೈಸೂರು, ಕೊಡಗು ನಂತರದ ಸ್ಥಾನದಲ್ಲಿವೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ–ಅಂಶಗಳು ತಿಳಿಸಿವೆ.

ಶಬ್ದ ಮಾಲಿನ್ಯ ಸಾಮಾನ್ಯ ದಿನ (ಅ.13) ಹಾಗೂ ದೀಪಾವಳಿಯ ಮೊದಲ ದಿನ ಕಳೆದ ದೀಪಾವಳಿಯ ಮೊದಲ ದಿನಕ್ಕಿಂತ ರಾಜ್ಯದಲ್ಲಿ ಸರಾಸರಿ ಶೇ 5ರಷ್ಟು ಹೆಚ್ಚಾಗಿದೆ. ಶಬ್ದ ಮಾಲಿನ್ಯದ ಸಾಮಾನ್ಯ ಮಾಪನ 75 ಡೆಸಿಬಲ್ ಆಗಿದ್ದು, 2025 ಅಕ್ಟೋಬರ್ 13ರಂದು 73.96 ಡೆಸಿಬಲ್ ದಾಖಲಾಗಿತ್ತು. ದೀಪಾವಳಿಯ ಮೊದಲ ದಿನ ಅ.20ರಂದು 77.73 ಡೆಸಿಬಲ್ ದಾಖಲಾಗಿದೆ.

ಬೆಂಗಳೂರಿನಲ್ಲೂ ಕಡಿಮೆ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪಿಸಿರುವ ಬೆಂಗಳೂರಿನ 11 ಕೇಂದ್ರಗಳಲ್ಲಿ ಎಕ್ಯೂಐ ದಾಖಲಿಸಲಾಗಿದೆ. ಅ.13ಕ್ಕೆ ಹೋಲಿಸಿದರೆ ದೀಪಾವಳಿಯ ಮೊದಲ ದಿನ ಅ.20ರಂದು ಸರಾಸರಿ ಶೇ 7ರಷ್ಟು ಕಡಿಮೆ ವಾಯು ಮಾಲಿನ್ಯ ದಾಖಲಾಗಿದೆ. 2024 ದೀಪಾವಳಿಯ ಮೊದಲ ದಿನಕ್ಕೆ ಹೋಲಿಸಿದರೆ ಶೇ 98ರಷ್ಟು ಕಡಿಮೆ ಮಾಲಿನ್ಯ ದಾಖಲಾಗಿದೆ.

ಪೀಣ್ಯದಲ್ಲಿ ಶೇ 52ರಷ್ಟು (ಎಕ್ಯೂಐ–62), ಕಸ್ತೂರಿನಗರದಲ್ಲಿ ಶೇ 14 (ಎಕ್ಯೂಐ–72), ನಗರ ರೈಲ್ವೆ ನಿಲ್ದಾಣದಲ್ಲಿ ಶೇ 6ರಷ್ಟು (ಎಕ್ಯೂಐ– 104) ವಾಯು ಮಾಲಿನ್ಯ ಸಾಮಾನ್ಯ ದಿನಕ್ಕಿಂತ ಹೆಚ್ಚಾಗಿದೆ.

ಯಶವಂತಪುರ ಪೊಲೀಸ್ ಠಾಣೆ (ಶೇ 10), ದೊಮ್ಮಲೂರು (ಶೇ 6), ವೈಟ್ಫೀಲ್ಡ್ (ಶೇ 5), ಚರ್ಚ್ ಸ್ಟ್ರೀಟ್ (ಶೇ 1), ಪೀಣ್ಯದಲ್ಲಿ (ಶೇ1) ಶಬ್ದ ಮಾಲಿನ್ಯದಲ್ಲಿ ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.