ಬೆಂಗಳೂರು: ಬೇಲೇಕೇರಿ ಬಂದರಿಗೆ ಅಕ್ರಮವಾಗಿ ಅದಿರು ಸಾಗಾಟ ಮಾಡಿದ ಪ್ರಕರಣದ ಮರು ತನಿಖೆ ನಡೆಸಿ, ಎರಡು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಾಲಯವು ಲೋಕಾಯುಕ್ತ ಎಸ್ಐಟಿಯ ಎಡಿಜಿಪಿಗೆ ನಿರ್ದೇಶಿಸಿದೆ. ಇದರಿಂದ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಮಾಜಿ ಸಚಿವ ಆನಂದ್ ಸಿಂಗ್ಗೆ ಮತ್ತೆ ಸಂಕಷ್ಟ ಎದುರಾಗಿದೆ.

2009ರ ಜನವರಿ 1ರಿಂದ 2010ರ ಮೇ 31ರ ಅವಧಿಯಲ್ಲಿ ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಗಣಿ ಯಾರ್ಡ್ಗಳಿಂದ ಬೇಲೇಕೇರಿ ಬಂದರಿಗೆ ಅಕ್ರಮವಾಗಿ 30,284 ಟನ್ ಕಬ್ಬಿಣದ ಅದಿರು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಸೆಪ್ಟೆಂಬರ್ 11ರಂದು ಈ ಆದೇಶ ನೀಡಿದೆ.

ಪ್ರಕರಣದಲ್ಲಿ ಎಸ್ಐಟಿಯ ಲೋಪಗಳನ್ನು ಗುರುತಿಸಿರುವ ನ್ಯಾಯಾಲಯ, ಆರೋಪಿ ಸ್ಥಾನದಲ್ಲಿರುವ ಎಸ್.ಬಿ.ಮಿನರಲ್ಸ್ನ ಸಹ ಪಾಲುದಾರರಾದ ಆನಂದ್ ಸಿಂಗ್ ಸೇರಿ ಇತರರನ್ನು ಕೈ ಬಿಟ್ಟ ಕ್ರಮವನ್ನು ಪ್ರಶ್ನಿಸಿದೆ.

‘ಸಂಡೂರಿನ ಜೈಸಿಂಗ್ಪುರ ಯಾರ್ಡ್ನಿಂದ ಬೇಲೇಕೇರಿ ಬಂದರಿಗೆ ಅಕ್ರಮವಾಗಿ ಸಾಗಾಟ ಮಾಡಿದ್ದ 12 ಸಾವಿರಕ್ಕೂ ಅಧಿಕ ಟನ್ ಅದಿರು ಸಾಗಾಟದಲ್ಲಿ ನಡೆದ ಅವ್ಯವಹಾರ, ವಂಚನೆಯಲ್ಲಿ ಮೆಸರ್ಸ್ ಎಸ್.ಬಿ.ಮಿನರಲ್ಸ್ ಶಾಮೀಲಾಗಿದೆ. ಆದರೆ, ತನಿಖೆ ನಡೆಸಿರುವ ಎಸ್ಐಟಿ, ಪ್ರಕರಣದಲ್ಲಿ ಬಿ.ಎಸ್.ಜಯರಾಜ್ ಸಿಂಗ್ ಹಾಗೂ ಕಂಪನಿಯನ್ನು ಆರೋಪಿಗಳನ್ನಾಗಿ ಪರಿಗಣಿಸಿದೆ. ಕಂಪನಿಯ ಸಹ ಪಾಲುದಾರರಾದ ಬಿ.ಪಿ.ಆನಂದ್ ಸಿಂಗ್ ಅಲಿಯಾಸ್ ಆನಂದ್ ಕುಮಾರ್ ಸಿಂಗ್ ಮತ್ತು ಅವರ ಸಹೋದರರ ಪಾತ್ರದ ಬಗ್ಗೆ ತನಿಖೆಯನ್ನೇ ನಡೆಸಿಲ್ಲ’ ಎಂದು ಆದೇಶದಲ್ಲಿ ತಿಳಿಸಿದೆ.

‘ಭಾರತೀಯ ಪಾಲುದಾರಿಕೆ ಕಾಯ್ದೆಯ ಕಲಂ 25ರ ಅನ್ವಯ ಯಾವುದೇ ಕಂಪನಿಯ ಪ್ರತಿ ವ್ಯವಹಾರ, ವಹಿವಾಟಿಗೂ ಎಲ್ಲಾ ಪಾಲುದಾರರು ಹೊಣೆಗಾರರು ಎಂದು ಸ್ಪಷ್ಟವಾಗಿ ತಿಳಿಸಿದೆ. ಆದರೆ, ಎಸ್ಐಟಿ ತನಿಖಾ ತಂಡವು ಎಸ್.ಬಿ.ಮಿನರಲ್ಸ್ನ ಸಹ ಪಾಲುದಾರರು ಅಕ್ರಮದಲ್ಲಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರೂ ಪೂರ್ಣ ಪ್ರಮಾಣದ ತನಿಖೆ ನಡೆಸದೇ, ಕೈ ಬಿಟ್ಟು ಲೋಪ ಎಸಗಿದೆ’ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಬಳ್ಳಾರಿಯ ವ್ಯಾಸನಕೆರೆ ಗಣಿಯಿಂದ ಬೇಲೇಕೇರಿಗೆ 16,987 ಟನ್ ಅದಿರು ಅಕ್ರಮವಾಗಿ ಸಾಗಾಟ ಮಾಡಿದ ಪ್ರಕರಣದಲ್ಲಿ ಆನಂದ್ ಸಿಂಗ್ ಸೇರಿ ಇತರೆ ಆರೋಪಿಗಳನ್ನು ಖುಲಾಸೆಗೊಳಿಸಿ, ಕಳೆದ ಮಾರ್ಚ್ನಲ್ಲಿ ವಿಶೇಷ ನ್ಯಾಯಾಲಯ ಆದೇಶಿಸಿತ್ತು.

ಪ್ರಕರಣವೇನು:

2009ರ ಜನವರಿ 1ರಿಂದ 2010ರ ಮೇ 31ರ ಅವಧಿಯಲ್ಲಿ ಬೇಲೇಕೇರಿ ಬಂದರಿಗೆ 30,284 ಟನ್ ಕಬ್ಬಿಣದ ಅದಿರು ಅಕ್ರಮವಾಗಿ ಸಾಗಾಟ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದ ಸಂಬಂಧ ಎಸ್ಐಟಿ ತನಿಖೆ ನಡೆಸಿತ್ತು.

ಬಿ.ಎಸ್.ಜಯರಾಜ್ ಸಿಂಗ್, ಉದಯ್ ಜೆ.ದೇಸಾಯ್ ಸೇರಿ 19 ಆರೋಪಿಗಳು ಹಾಗೂ ಎಸ್.ಬಿ.ಮಿನರಲ್ಸ್ ಸೇರಿ ಐದು ಪ್ರತ್ಯೇಕ ಕಂಪನಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ತಮ್ಮ ವಿರುದ್ಧ ಹೊರಿಸಿರುವ ದೋಷಾರೋಪಗಳಿಂದ ಮುಕ್ತಗೊಳಿಸುವಂತೆ ಉದಯ್ ಜೆ.ದೇಸಾಯ್ ಸೇರಿ 21 ಮಂದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿ, ಪ್ರಕರಣದ ಮರುತನಿಖೆಗೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.