ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಿಂದ ಶಿಫಾರಸು, ಚಿಕಿತ್ಸಾ ವೆಚ್ಚದಲ್ಲಿ ಶೇ 30 ರಷ್ಟು ಮಾತ್ರ ಹಣ ಪಾವತಿ ಸೇರಿ ವಿವಿಧ ಕಾರಣಗಳಿಂದ ರಾಜ್ಯದಲ್ಲಿ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ (ಎಬಿ–ಎಆರ್ಕೆ) ಯೋಜನೆಯಡಿ ಚಿಕಿತ್ಸೆ ಪಡೆಯಲು ಎಪಿಎಲ್ ಕುಟುಂಬದ ಸದಸ್ಯರು ನಿರಾಸಕ್ತಿ ತೋರಿದ್ದಾರೆ. ಈವರೆಗೆ ಯೋಜನೆಯಡಿ ಚಿಕಿತ್ಸೆ ಪಡೆದವರಲ್ಲಿ ಶೇ 4ರಷ್ಟು ಮಂದಿ ಮಾತ್ರ ಎಪಿಎಲ್ ಕುಟುಂಬದ ಫಲಾನುಭವಿಗಳಾಗಿದ್ದಾರೆ.

ಯೋಜನೆಯಡಿ ಚಿಕಿತ್ಸೆಗೆ ಇರುವ ತೊಡಕುಗಳೇ ನಿರಾಸಕ್ತಿಗೆ ಕಾರಣವಾಗಿವೆ. ಎಪಿಎಲ್ ಕುಟುಂಬದ ಸದಸ್ಯರಿಗೆ ಚಿಕಿತ್ಸಾ ವೆಚ್ಚದಲ್ಲಿ ಶೇ 30ರಷ್ಟು ಹಣವನ್ನು ಮಾತ್ರ ಪಾವತಿಸಲಾಗುತ್ತಿದೆ. ಇದರ ಪ್ರಯೋಜನ ಪಡೆಯಬೇಕಾದರೆ ಫಲಾನುಭವಿಗಳು ಮೊದಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗಬೇಕು. ಅಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ಬೇರೆ ಆಸ್ಪತ್ರೆಗೆ ಶಿಫಾರಸು ಆಧಾರದಲ್ಲಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇದರಿಂದ ಚಿಕಿತ್ಸೆ ವಿಳಂಬವಾಗುವ ಜತೆಗೆ ರೋಗಿಯ ಸ್ಥಿತಿ ಮತ್ತಷ್ಟು ಹದಗೆಡಲಿದೆ. ಆದ್ದರಿಂದ ಯೋಜನೆಯಡಿ ದೊರೆಯುತ್ತಿದ್ದ ಅಲ್ಪ ನೆರವಿಗೆ ಎಪಿಎಲ್ ಕುಟುಂಬಸ್ಥರು ಆಸಕ್ತಿ ತೋರುತ್ತಿಲ್ಲ. ಈವರೆಗೆ ಚಿಕಿತ್ಸೆ ಒದಗಿಸಲಾದ 1.30 ಕೋಟಿ ಪ್ರಕರಣಗಳಲ್ಲಿ 1.25 ಕೋಟಿ ಪ್ರಕರಣಗಳು ಬಿಪಿಎಲ್ ಕುಟುಂಬದ ಸದಸ್ಯರಾದರೆ, 4.94 ಲಕ್ಷ ಪ್ರಕರಣಗಳಲ್ಲಿ ಮಾತ್ರ ಚಿಕಿತ್ಸೆ ಪಡೆದವರು ಎಪಿಎಲ್ ಕುಟುಂಬದವರಾಗಿದ್ದಾರೆ.

‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆ 2018ರಲ್ಲಿ ಆರಂಭವಾಗಿದೆ. ಯೋಜನೆಯಡಿ ಬಿಪಿಎಲ್ ಕುಟುಂಬದವರಿಗೆ ವರ್ಷಕ್ಕೆ ₹ 5 ಲಕ್ಷದವರೆಗೆ ಆರೋಗ್ಯ ವಿಮೆಗೆ ಅವಕಾಶವಿದೆ. ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿದ್ದು, ಅವು ‘ಆಯುಷ್ಮಾನ್ ಭಾರತ್’ ಯೋಜನೆ ಅಡಿ ಬರಲಿವೆ. 20 ಲಕ್ಷಕ್ಕೂ ಅಧಿಕ ಎಪಿಎಲ್ ಕುಟುಂಬಗಳನ್ನು ‘ಆರೋಗ್ಯ ಕರ್ನಾಟಕ’ ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ. ಎಪಿಎಲ್ ಕುಟುಂಬದ ಸದಸ್ಯರಿಗೆ ಗರಿಷ್ಠ ₹1.50 ಲಕ್ಷ ಚಿಕಿತ್ಸಾ ವೆಚ್ಚ ನಿಗದಿ ಮಾಡಿದ್ದು, ಶೇ 30ರಷ್ಟು ಹಣವನ್ನು ಪಾವತಿಸಲಾಗುತ್ತದೆ.

ಶಿಫಾರಸು ಅಡ್ಡಿ: ಯೋಜನೆಯಡಿ 171 ತುರ್ತು ಚಿಕಿತ್ಸೆಗಳನ್ನು ಸೇರ್ಪಡೆ ಮಾಡಲಾಗಿದೆ. ರಸ್ತೆ ಅಪಘಾತ ಸೇರಿ ವಿವಿಧ ತುರ್ತು ಸಂದರ್ಭದಲ್ಲಿ ಮಾತ್ರ ನೋಂದಾಯಿತ ಖಾಸಗಿ ಆಸ್ಪತ್ರೆಗೂ ನೇರವಾಗಿ ದಾಖಲಾಗಬಹುದಾಗಿದೆ. ಉಳಿದ ಪ್ರಕರಣಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ಶಿಫಾರಸು ಅಗತ್ಯ. ಅದೇ ಸಹಕಾರ ಇಲಾಖೆ ಅನುಷ್ಠಾನ ಮಾಡಿರುವ ಯಶಸ್ವಿ ಯೋಜನೆಯಲ್ಲಿ ನೋಂದಾಯಿತ ಸದಸ್ಯರು ನೇರವಾಗಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಈ ಕಾರಣದಿಂದ ಎಪಿಎಲ್ ಕುಟುಂಬದ ಸದಸ್ಯರು ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆಯಡಿ ಚಿಕಿತ್ಸೆಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ.

‘ಯೋಜನೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಉಚಿತವಾಗಿ ನೀಡುವ ಕಾರ್ಡ್ ಹೊಂದಿರದಿದ್ದರೂ ಪಡಿತರ ಚೀಟಿ ಇದ್ದಲ್ಲಿ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ರಾಜ್ಯದಲ್ಲಿ ಯೋಜನೆ ಅನುಷ್ಠಾನ ಮಾಡುತ್ತಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ಅಧಿಕಾರಿಯೊಬ್ಬರು ತಿಳಿಸಿದರು.

Highlights - ಅಂಕಿ–ಅಂಶಗಳು 2,965 ಯೋಜನೆಯಡಿ ನೋಂದಾಯಿತ ಸರ್ಕಾರಿ ಆಸ್ಪತ್ರೆಗಳು 588 ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳು

Quote - ಯೋಜನೆಯಡಿ ಶಿಫಾರಸಿನಂತಹ ಕೆಲ ಗೊಂದಲಗಳನ್ನು ನಿವಾರಿಸಿ ಗುಣಮಟ್ಟದ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ. ದುಬಾರಿ ವೆಚ್ಚದ ಚಿಕಿತ್ಸೆಗಳನ್ನೂ ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ

Cut-off box - ವೆಚ್ಚ ₹ 10 ಸಾವಿರ ಕೋಟಿ: ಎಪಿಎಲ್ ಬಳಕೆ ₹120 ಕೋಟಿ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿರ್ವಹಣೆ ಮಾಡುತ್ತಿದ್ದು 1650 ಚಿಕಿತ್ಸಾ ಪ್ಯಾಕೇಜ್ಗಳು ಒಳಗೊಂಡಿವೆ. ಯೋಜನೆಯಡಿ ಈವರೆಗೆ ಚಿಕಿತ್ಸೆಗೆ ಒಟ್ಟು ₹ 10885 ಕೋಟಿ ವೆಚ್ಚ ಮಾಡಲಾಗಿದೆ. ಈ ಚಿಕಿತ್ಸಾ ಮೊತ್ತದಲ್ಲಿ ₹ 10764 ಕೋಟಿಯನ್ನು ಬಿಪಿಎಲ್ ಕುಟುಂಬದ ಸದಸ್ಯರ ಚಿಕಿತ್ಸೆಗೆ ಬಳಿಸಿದರೆ ₹ 120 ಕೋಟಿ ಮಾತ್ರ ಎಪಿಎಲ್ ಕುಟುಂಬದ ಸದಸ್ಯರಿಗೆ ಚಿಕಿತ್ಸೆ ಸಂಬಂಧಿಸಿದಂತೆ ಟ್ರಸ್ಟ್ ಭರಿಸಿದೆ. ಬೆನ್ನುಹುರಿ ವಿರೂಪಕ್ಕೆ ಸಂಬಂಧಿಸಿದ ಚಿಕಿತ್ಸೆ ಗಿಲ್ಲೈನ್-ಬರ್ರೆ ಸಿಂಡ್ರೋಮ್ (ಜಿಬಿಎಸ್) ಕಾಯಿಲೆಗೆ ನೀಡುವ ‘ಇಂಟ್ರಾವೀನಸ್ ಇಮ್ಯುನೋಗ್ಲೋಬಿನ್’ (ಐವಿಐಜಿ) ಥೆರಪಿಯಂತಹ ಚಿಕಿತ್ಸೆಗಳನ್ನು ಯೋಜನೆಯಡಿ ಇತ್ತೀಚೆಗೆ ಸೇರ್ಪಡೆ ಮಾಡಲಾಗಿದೆ. ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಿಗೂ ಚಿಕಿತ್ಸೆಗೆ ಅನುಸಾರ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಹಣ ಬಿಡುಗಡೆ ಮಾಡುತ್ತಿದೆ. ಈ ಹಣವನ್ನು ಆಸ್ಪತ್ರೆಗಳ ಅಭಿವೃದ್ಧಿ ಹಾಗೂ ವೈದ್ಯರು ವೈದ್ಯಕೀಯ ಸಿಬ್ಬಂದಿಗೆ ಪ್ರೋತ್ಸಾಹ ಧನ ಒದಗಿಸಲು ಬಳಸಿಕೊಳ್ಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.