ಬೆಂಗಳೂರು: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿನ ಅಧ್ಯಯನ ಪೀಠಗಳ ಸ್ಥಿತಿಗತಿ ಕುರಿತು ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಓ.ಅನಂತರಾಮಯ್ಯ ಅವರು ಸಲ್ಲಿಸಿದ ವರದಿಯನ್ನು ಪರಿಶೀಲಿಸಲು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ತ್ರಿಸದಸ್ಯ ಸಮಿತಿ ರಚಿಸಿ, ಸರ್ಕಾರ ಆದೇಶ ಹೊರಡಿಸಿದೆ.

ಸಾಹಿತಿಗಳಾದ ನಟರಾಜ ಹುಳಿಯಾರ್, ವಸುಂಧರಾ ಭೂಪತಿ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲಾಗಿರುವ ವಿವಿಧ ಅಧ್ಯಯನ ಪೀಠಗಳು ನಾಮಕಾವಾಸ್ತೆಗೆ ಎನ್ನುವಂತಾಗಿವೆ. ಅನುದಾನ ಕೊರತೆ, ವಿಶ್ವವಿದ್ಯಾಲಯಗಳ ನಿರಾಸಕ್ತಿ ಮತ್ತಿತರ ಕಾರಣಗಳಿಂದ ಬಹಳಷ್ಟು ಪೀಠಗಳು ನಿಷ್ಕ್ರಿಯಾಗಿವೆ. ಅವುಗಳ ಚಟುವಟಿಕೆ, ಸ್ಥಿತಿಗತಿ ಕುರಿತು ವರದಿ ನೀಡಲು ಅನಂತರಾಮಯ್ಯ ಅವರನ್ನು ನೇಮಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.