ಅವನು (ಜನಾರ್ದನ ರೆಡ್ಡಿ) ನೀಚ, ರಾಕ್ಷಸ. ಜೀವನದಲ್ಲಿ ನಿಜ ಹೇಳಿದವನಲ್ಲ. ಅದಕ್ಕಾಗಿಯೇ ಬೀದಿಗೆ ಬಂದು ಇಷ್ಟು ಗಲಾಟೆ ಮಾಡಿದ್ದಾನೆ. ಅವನಿಗೆ ಅಂತ್ಯ ಹಾಡಿಯೇ ಹಾಡುತ್ತೇವೆ. ಅವನಿಗೆ ಶಿಕ್ಷೆ ಆಗುವುದು ನಿಜ
ನಾರಾ ಭರತ್ ರೆಡ್ಡಿ, ಶಾಸಕ
ಜನಾರ್ದನ ರೆಡ್ಡಿ ಮನೆಯನ್ನು ನುಚ್ಚುನೂರು, ಪುಡಿ ಪುಡಿ, ಭಸ್ಮ ಮಾಡುತ್ತೇನೆ, ಮುಗಿಸಿ ಬಿಡುತ್ತೇನೆ ಎನ್ನುವ ಧಾಟಿಯಲ್ಲಿ ಶಾಸಕ ಭರತ್ ರೆಡ್ಡಿ ಮಾತನಾಡಿದ್ದಾರೆ. ಇದು ಪ್ರಚೋದನೆಯಲ್ಲದೆ ಮತ್ತಿನ್ನೇನು? ದ್ವೇಷ ಭಾಷಣ ಮಸೂದೆ ಜಾರಿಗೆ ತರಲು ಹೊರಟಿರುವ ಮುಖ್ಯಮಂತ್ರಿ, ಗೃಹ ಸಚಿವರು ತಮ್ಮ ಪಕ್ಷದ ಶಾಸಕರ ಮಾತುಗಳನ್ನು ಆಲಿಸಿದಲ್ಲಿ ದ್ವೇಷ ಭಾಷಣ ಕಾಯ್ದೆಯ ಮೊದಲ ಅಪರಾಧಿಯೇ ತಮ್ಮ ಪಕ್ಷದ ಶಾಸಕರಾಗುತ್ತಾರೆ.
- ಬಿ.ವೈ ವಿಜಯೇಂದ್ರ, ರಾಜ್ಯ ಬಿಜೆಪಿ ಅಧ್ಯಕ್ಷ
‘ನಮ್ಮ ಸಿಬ್ಬಂದಿ ಬಂದೂಕು ಪ್ರಯೋಗಿಸಿಲ್ಲ. ಮೃತನ ದೇಹದಲ್ಲಿ ಸಿಕ್ಕ ಗುಂಡು ಮತ್ತು ವಶಕ್ಕೆ ಪಡೆದಿರುವ ಬಂದೂಕುಗಳನ್ನು ಹೋಲಿಕೆ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ