ವಿಮ್ಸ್‌ನ ಶವಾಗಾರದ ಎದುರು ಬಳ್ಳಾರಿ ಹೆಚ್ಚುವರಿ ಎಸ್‌ಪಿ ರವಿಕುಮಾರ್ ಅವರೊಂದಿಗೆ ಚರ್ಚೆ ನಡೆಸುತ್ತಿರುವ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಚಿಕ್ಕಪ್ಪ ಪ್ರತಾಪ್ ರೆಡ್ಡಿ
ಗುಂಡೇಟು ತಗುಲಿ ಸಾವಿಗೀಡಾಗುವುದಕ್ಕೂ ಮೊದಲು ಘರ್ಷಣೆಯಲ್ಲಿ ಭಾಗಿಯಾಗಿರುವ ರಾಜಶೇಖರ
ನಗರದ ವಾಲ್ಮೀಕಿ ವೃತ್ತದಲ್ಲಿ ಭದ್ರತೆ ಮುಂದುವರಿದಿರುವುದು
ಬಳ್ಳಾರಿ ನಗರದ ಸಿರುಗುಪ್ಪ ರಸ್ತೆಯ ಅವ್ವಂಬಾವಿಯ ಘಟನಾ ಸ್ಥಳದಲ್ಲಿ ಸೋಮವಾರ ರಿಶೀಲನೆ ನಡೆಸುತ್ತಿರುವ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ

ಮರಣೋತ್ತರ ಪರೀಕ್ಷೆ ಎರಡು ಬಾರಿ ನಡೆಸುವ ಅಗತ್ಯವೇನಿತ್ತು. ಭರತ್ ರೆಡ್ಡಿ ಅವರ ತಂದೆ ಕ್ರಿಮಿನಲ್. ಅವರ ಆದೇಶದ ಮೇರೆಗೆ ಹೀಗೆ ಮಾಡಲಾಗಿದೆ. ಘಟನೆಯ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ತನಿಖೆ ಮಾಹಿತಿ ಸರ್ಕಾರ ಹಂಚಿಕೊಳ್ಳಬೇಕು
ಜನಾರ್ದನ ರೆಡ್ಡಿ ಶಾಸಕ
ಮರಣೋತ್ತರ ಪರೀಕ್ಷೆ ಮೂರು–ನಾಲ್ಕು ಬಾರಿ ನಡೆದಿದೆ. ಗುಂಡು ಮೊದಲ ಬಾರಿಗೆ ಸಿಕ್ಕಿಲ್ಲ. ಹಿರಿಯ ಅಧಿಕಾರಿಗಳು ಸೇರಿ ಮತ್ತೆ ಪರೀಕ್ಷೆ ನಡೆಸಿದಾಗ ಗುಂಡು ಸಿಕ್ಕಿದೆ. ಗುಂಡು ಹೊರಗೆ ತೆಗೆಯದೇ ಜನಾರ್ದನ ರೆಡ್ಡಿ ಅವರನ್ನು ಸಿಲುಕಿಸಲು ಪ್ರಯತ್ನಿಸಲಾಗಿತ್ತು.
ಬಿ. ಶ್ರೀರಾಮುಲು ಮಾಜಿ ಸಚಿವ
ಬಳ್ಳಾರಿ ದೊಂಬಿಯಲ್ಲಿ ಪ್ರಭಾವಿಗಳ ಪಾತ್ರವಿದೆ. ಖ್ಯಾತನಾಮರನ್ನು ಬಂಧಿಸಿದರೆ ಕಾನೂನು ಮತ್ತು ಸುವ್ಯವಸ್ಥೆ ಪ್ರಶ್ನೆ ಎದುರಾಗುತ್ತದೆ. ಈ ಕಾರಣಕ್ಕೆ ಅಂಥವರನ್ನು ಬಂಧಿಸಿಲ್ಲ.
ಹಿರಿಯ ಪೊಲೀಸ್ ಅಧಿಕಾರಿ