ಬೆಂಗಳೂರು: ‘ಬಾನು ಮುಷ್ತಾಕ್ ಅವರು ಚಾಮುಂಡಿ ಬೆಟ್ಟ ಹತ್ತಬಾರದು. ಅವರಿಗೆ ನೀಡಿರುವ ಆಹ್ವಾನವನ್ನು ಕೂಡಲೇ ವಾಪಸ್ ಪಡೆಯಬೇಕು’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ದಸರಾ ಮಹೋತ್ಸವವು ಮಹಿಷಾಸುರನನ್ನು ಸಂಹಾರ ಮಾಡಿದ ಚಾಮುಂಡೇಶ್ವರಿಯ ವಿಜಯದ ಸಂಕೇತ. ಅದನ್ನು ಒಪ್ಪದವರಿಗೆ ಆಹ್ವಾನ ನೀಡುವ ಮೂಲಕ ಈ ಆಚರಣೆಗೆ ಮತ್ತು ದೇವಸ್ಥಾನಕ್ಕೆ ಅಪಮಾನ ಮಾಡುವ ಕೆಲಸವನ್ನು ಸರ್ಕಾರ ಮಾಡಿದೆ’ ಎಂದು ದೂರಿದರು.

‘ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುವ ಹಳದಿ ಮತ್ತು ಕೆಂಪು ಬಣ್ಣದ ಧ್ವಜ ಹಾಗೂ ಭುವನೇಶ್ವರಿ ತಾಯಿಯ ಪರಿಕಲ್ಪನೆಯನ್ನು ಒಪ್ಪದ ಬಾನು ಮುಷ್ತಾಕ್ ಅವರು ದುಷ್ಟರ ಸಂಹಾರ ಮಾಡಿದ ಚಾಮುಂಡೇಶ್ವರಿ ದೇವಿಯನ್ನು ಹೇಗೆ ಒಪ್ಪಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಬಾನು ಮುಷ್ತಾಕ್ ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದವರು ಮತ್ತು ಮೂರ್ತಿ ಪೂಜೆ ಒಪ್ಪದವರು. ಒಂದು ವೇಳೆ ಅವರು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮತ್ತು ದೀಪ ಹಚ್ಚುವ ಕೆಲಸ ಮಾಡುತ್ತಾರೆ ಎಂದಾದರೆ ಉದ್ಘಾಟನೆಗೆ ಬರಲಿ. ಅದಕ್ಕೆ ನಮ್ಮ ವಿರೋಧವಿಲ್ಲ’ ಎಂದರು.

‘2023ರ ಜನ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ್ದ ಬಾನು ಮುಷ್ತಾಕ್ ಅವರು ಕನ್ನಡ ಭುವನೇಶ್ವರಿಯನ್ನು ಅರಿಶಿನ– ಕುಂಕುಮದ ಬಣ್ಣದ ಬಾವುಟ ಮಾಡಿಬಿಟ್ಟಿದ್ದೀರಿ. ನಾನು ಎಲ್ಲಿ ನಿಲ್ಲಬೇಕು ಎಂದು ಪ್ರಶ್ನಿಸಿದ್ದರು. ಕನ್ನಡ ಧ್ವಜವನ್ನೇ ಒಪ್ಪದವರು ಚಾಮುಂಡೇಶ್ವರಿಯನ್ನು ಹೇಗೆ ಒಪ್ಪುತ್ತಾರೆ’ ಎಂದು ಅವರು ಪ್ರಶ್ನಿಸಿದರು.

‘ಹೈದರಾಲಿ, ಟಿಪ್ಪು ಕಾಲದಲ್ಲಿ ದಸರಾ ನಡೆದಿರಬಹುದು. ಆದರೆ, ಅವರು ಚಾಮುಂಡೇಶ್ವರಿಗೆ ಪೂಜೆ ಮಾಡಿದ್ದಾರಾ? ಭುವನೇಶ್ವರಿಗೆ ವಿರೋಧ ಮಾಡುವವರನ್ನು ಸಹಿಸಲು ಸಾಧ್ಯವಿಲ್ಲ. ಕುವೆಂಪು ಅವರು ಕೂಡ ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಎಷ್ಟು ದಿನ ಓಲೈಕೆ ರಾಜಕಾರಣ ಮಾಡುತ್ತಾರೆ. ನವರಾತ್ರಿ ದುರ್ಗೆಗೆ ಸಂಬಂಧಿಸಿದ್ದು, ಒಂಬತ್ತು ದಿನಗಳ ಆರಾಧನೆ ಮಾಡುತ್ತೇವೆ’ ಎಂದು ಶೋಭಾ ಹೇಳಿದರು.

ದೀಪಾ ಭಾಸ್ತಿ ಬಿಟ್ಟಿದ್ದೇಕೆ: ವಿಜಯೇಂದ್ರ

‘ಬಾನು ಮುಷ್ತಾಕ್ ಅವರು ಹಿಂದೂ ಸಂಸ್ಕೃತಿ, ಪರಂಪರೆ, ಆಚಾರ–ವಿಚಾರಗಳನ್ನು ಒಪ್ಪಿ, ಅದರ ಬಗ್ಗೆ ನಂಬಿಕೆ ಇಟ್ಟು ಬರುವುದಾದರೆ ಸ್ವಾಗತಿಸುತ್ತೇವೆ. ಆದರೆ, ದೀಪಾ ಭಾಸ್ತಿ ಅವರನ್ನು ಬಿಟ್ಟಿದ್ದೇಕೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ. ‘ಬಾನು ಮುಷ್ತಾಕ್ ಮತ್ತು ಕೊಡಗಿನ ದೀಪಾ ಇಬ್ಬರಿಗೆ ಸೇರಿ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಬಂದಿದೆ. ಬಾನು ಜತೆಗೆ ದೀಪಾ ಅವರನ್ನೂ ಆಹ್ವಾನಿಸಬಹುದಿತ್ತು. ದೀಪಾ ಅವರನ್ನು ಕರೆಯಬೇಕೆಂದು ಸಿದ್ದರಾಮಯ್ಯ ಅವರಿಗೆ ಏಕೆ ಅನಿಸಲಿಲ್ಲ? ಕೊಡಗಿನ ಬಗ್ಗೆ ಆಸಕ್ತಿ ಕಡಿಮೆಯೇ’ ಎಂದು ಅವರು ಪ್ರಶ್ನಿಸಿದರು.

‘ಬಾನು ವಿರೋಧಿಸುವವರಿಗೆ ಏನು ಹೇಳಬೇಕು?’

‘ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ವಿರೋಧಿಸುವವರ ಮಾತಿಗೆ ಏನು ಹೇಳಬೇಕು? ಧಾರ್ಮಿಕ ಸಾಮಾಜಿಕವಾಗಿ ಎಲ್ಲರೂ ಒಂದೇ ಎಂದು ನಮ್ಮ ಸಂವಿಧಾನದ ಪೀಠಿಕೆಯಲ್ಲಿಯೇ ಇದೆ. ದಸರಾ ಸಾಂಸ್ಕೃತಿಕ ಜೀವನ ಅಭಿವ್ಯಕ್ತಿಗೊಳಿಸುವ ಹಬ್ಬ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.

‘ದಸರಾ ಎನ್ನುವುದು ಧರ್ಮದ ಆಚರಣೆಯಲ್ಲ. ಧರ್ಮದ ವಿಚಾರದ ಚರ್ಚೆ ಜನರಿಗೆ ಬಿಟ್ಟಿದ್ದು. ಬಾನು ಮುಷ್ತಾಕ್ ಅವರು ಇಡೀ ದೇಶಕ್ಕೆ ಕಿರೀಟ ಅಲ್ಲವೇ? ನೀವು ಅವರನ್ನು ಯಾವ ರೀತಿ ನೋಡುತ್ತೀರಾ? ಯಾಕೆ ಅವರನ್ನು ಪ್ರತ್ಯೇಕ ಮಾಡುತ್ತೀರಾ? ದೇಶಕ್ಕೆ ಕನ್ನಡ ನಾಡಿಗೆ ಅವರು ಗೌರವ ತಂದು ಕೊಟ್ಟವರು. ನಾಡಹಬ್ಬಕ್ಕೆ ಸರ್ವರೂ ಸಹಭಾಗಿಗಳು. ಸಾಂಸ್ಕೃತಿಕವಾಗಿ ಆಚರಿಸುವ ನಾಡ ಹಬ್ಬಕ್ಕೆ ಸಂವಿಧಾನಾತ್ಮಕವಾಗಿ ಆಯ್ಕೆ ಮಾಡಿದ್ದೇವೆ. ಇದರ ಬಗ್ಗೆ ಯಾಕೆ ಅಪಸ್ವರ’ ಎಂದು ಬಿಜೆಪಿ ನಾಯಕರನ್ನು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.