ಬೆಂಗಳೂರು: ‘ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಣ ಮಾಡದೇ ಇದ್ದರೆ ರಾಜ್ಯದ ಆರ್ಥಿಕ ಸ್ಥಿತಿ ಹದಗೆಡಲಿದೆ. ಸುಳ್ಳು ಹೇಳುವುದನ್ನು ಬಿಟ್ಟು ಹಣಕಾಸಿನ ನಿರ್ವಹಣೆಗೆ ಆದ್ಯತೆ ನೀಡಬೇಕು. ಇಲ್ಲದೇ ಇದ್ದರೆ ಹಣಕಾಸು ನಿರ್ವಹಣೆ ವೈಫಲ್ಯದ ಕುಖ್ಯಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರ ಗುರಿಯಾಗಬೇಕಾದೀತು’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.

ಬಜೆಟ್ ಮೇಲಿನ ಚರ್ಚೆಯಲ್ಲಿ ಬುಧವಾರ ಮಾತನಾಡಿದ ಅವರು, ‘ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ರಾಜ್ಯ ಸರ್ಕಾರ ತಂತಿ ಮೇಲೆ ನಡೆಯುವ ಪರಿಸ್ಥಿತಿ ಇದೆ. ಗ್ಯಾರಂಟಿಗಳಿಗೆ ಹೆಚ್ಚಿನ ಆದಾಯ ತರುವ ಕೆಲಸ ಮಾಡಬೇಕು. ರಾಜ್ಯದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡದೇ ಗ್ಯಾರಂಟಿ ಹೆಸರಿನಲ್ಲಿ ಕೇವಲ ಕಲ್ಯಾಣ ಕಾರ್ಯಗಳಿಗೆ ಹಣ ಖರ್ಚು ಮಾಡಲಾಗುತ್ತಿದೆ. ಕಾಯಕವಿಲ್ಲದೇ ದಾಸೋಹ ಮಾಡುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ’ ಎಂದರು.

‘ಸಿದ್ದರಾಮಯ್ಯ 1 ಮತ್ತು ಸಿದ್ದರಾಮಯ್ಯ 2 ನಡುವೆ ಬಹಳ ವ್ಯತ್ಯಾಸವಿದೆ. 1994ನಲ್ಲಿ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದರು. ಆಗ ಕೊರತೆ ಬಜೆಟ್ ಇತ್ತು. ಅವರು ಯೋಜನಾ ಗಾತ್ರ ಕಡಿಮೆ ಮಾಡಿ, ಬಜೆಟ್ ಮಂಡಿಸಿ ಆರ್ಥಿಕ ಶಿಸ್ತು ತಂದರು. ಆದರೆ, ಸಿದ್ದರಾಮಯ್ಯ 2 ಅವಧಿಯಲ್ಲಿ ಬಡವರ ಕಾರ್ಯಕ್ರಮ ಮಾಡಲು ಆದಾಯ ಕೂಡಿಸಿಕೊಂಡು ಬಂಡವಾಳ ವೆಚ್ಚಕ್ಕೆ ತೊಂದರೆ ಆಗದಂತೆ ಗ್ಯಾರಂಟಿಗಳನ್ನು ಜಾರಿ ಮಾಡಿದ್ದರೆ ತೊಂದರೆ ಇರುತ್ತಿರಲಿಲ್ಲ. ಅವರ ಬಜೆಟ್ ಪ್ರಕಾರ ಯೋಜನೆ ಮತ್ತು ಯೋಜನೇತರ ಬದ್ಧತಾ ವೆಚ್ಚ ಶೇ 103ರಷ್ಟಿದೆ. ಅಭಿವೃದ್ಧಿಗೆ ಬಂಡವಾಳ ಎಲ್ಲಿದೆ’ ಎಂದು ಬೊಮ್ಮಾಯಿ ಪ್ರಶ್ನಿಸಿದರು.

‘ಆದಾಯದ ಶೇ 61ರಷ್ಟು ಯೋಜನೇತರ ಬದ್ಧತಾ ವೆಚ್ಚವಾಗಲಿದೆ. ಸಾಲ ತೆಗೆದುಕೊಂಡು ಸಾಲ ತೀರಿಸಲು ಹೆಚ್ಚು ಹಣ ಹೋಗುತ್ತಿರುವುದರಿಂದ ಬಂಡವಾಳವೆಚ್ಚಕ್ಕೆ ₹ 55 ಸಾವಿರ ಕೋಟಿ ಮಾತ್ರ ಸಿಗಲಿದೆ. ಈ ವರ್ಷ ₹ 1.05 ಲಕ್ಷ ಕೋಟಿ ಸಾಲ ಮಾಡಿದರೂ ಆದರೆ, ಅದರಲ್ಲಿ ಬಂಡವಾಳ ವೆಚ್ಚಕ್ಕೆ ಕೇವಲ ₹ 1 ಸಾವಿರ ಕೋಟಿ ಹೋಗುತ್ತದೆ. ಇದರಿಂದ ಅಭಿವೃದ್ಧಿಗೆ ಅನುಕೂಲವಾಗುವುದಿಲ್ಲ’ ಎಂದು ವಿವರಿಸಿದರು.

ಶೇ 54ರಷ್ಟು ಮಾತ್ರ ಖರ್ಚು: ‘ಕಳೆದ ಬಜೆಟ್ನಲ್ಲಿ ಘೋಷಿಸಿದ ಅನುದಾನದಲ್ಲಿ ಶೇ 54ರಷ್ಟು ಮಾತ್ರ ಖರ್ಚಾಗಿದೆ. ಅಲ್ಪ ಸಂಖ್ಯಾತ ಇಲಾಖೆ, ಹಿಂದುಳಿದ ವರ್ಗ ಇಲಾಖೆಗಳಲ್ಲಿ ಶೇ 48, ಎಸ್ಸಿಎಸ್ಪಿ, ಟಿಎಸ್ಪಿಯಲ್ಲಿ ಶೇ 50, ಕೃಷಿ ಶೇ 55, ಆರೋಗ್ಯ ಶೇ 59, ಉನ್ನತ ಶಿಕ್ಷಣ ಶೇ 65, ಬೃಹತ್ ಕೈಗಾರಿಕೆ ಶೇ 69, ಲೋಕೋಪಯೋಗಿ ಇಲಾಖೆ ಶೇ 59ರಷ್ಟು ಮಾತ್ರ ವೆಚ್ಚವಾಗಿದೆ’ ಎಂದರು.

‘ಹಣಕಾಸಿನ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಾಮಾಜಿಕ ನ್ಯಾಯವನ್ನು ಕೊಡಲು ಸರ್ಕಾರದಿಂದ ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರಿ ನೌಕರರ ಪಿಂಚಣಿ ವಿಚಾರದಲ್ಲಿ ಎನ್ಪಿಎಸ್ ಬದಲಿಸಿ, ಒಪಿಎಸ್ ಮಾಡುವ ವಿಚಾರದಲ್ಲಿ ಸ್ಪಷ್ಟತೆ ತೋರಿಸಲಿ, ಒಪಿಎಸ್ ಜಾರಿ ಮಾಡಲು ಮುಖ್ಯಮಂತ್ರಿ ಸಿದ್ಧರಿದ್ದಾರಾ’ ಎಂದೂ ಪ್ರಶ್ನಿಸಿದರು.

Quote - 7ನೇ ವೇತನ ಆಯೋಗದ ವರದಿ ಜಾರಿಯಾದರೆ ಇನ್ನೂ ₹ 20 ಸಾವಿರ ಕೋಟಿ ಬೇಕಾಗುತ್ತದೆ. ಬಜೆಟ್ನಲ್ಲಿ ಅದಕ್ಕೆ ಹಣ ಇಟ್ಟಿಲ್ಲ. ಇದೇ ರೀತಿ ಗ್ಯಾರಂಟಿಗಳಿಗೆ ಹಣ ನೀಡುತ್ತ ಹೋದರೆ ಅಭಿವೃದ್ಧಿಗೆ ಹಣ ಎಲ್ಲಿಂದ ಬರುತ್ತದೆ ಬಸವರಾಜ ಬೊಮ್ಮಾಯಿ ಬಿಜೆಪಿ ಶಾಸಕ

Cut-off box - ‘ಆದಾಯವಿಲ್ಲದೆ ಅಭಿವೃದ್ಧಿ ಹೇಗೆ ಸಾಧ್ಯ?’ ‘ಕಳೆದ ವರ್ಷ ₹ 1.75 ಲಕ್ಷ ಕೋಟಿ ತೆರಿಗೆ ಸಂಗ್ರಹ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ₹ 1.61 ಲಕ್ಷ ಕೋಟಿ ಮಾತ್ರ ಸಂಗ್ರಹ ಆಗಿದೆ. ₹ 14 ಸಾವಿರ ಕೋಟಿ ಬಂಡವಾಳ ಸಂಗ್ರಹ ಕೊರತೆಯಾಗಿದೆ. ನಮ್ಮ ಸರ್ಕಾರ ಹಿಂದಿನ ಫೆಬ್ರುವರಿಯಲ್ಲಿ ಮಂಡಿಸಿದ ಬಜೆಟ್ನಲ್ಲಿ ₹ 1.64 ಲಕ್ಷ ಕೋಟಿ ಗುರಿ ಇಟ್ಟುಕೊಂಡಿದ್ದೆವು. ಅದನ್ನೇ ಸಂಗ್ರಹಿಸಲು ಇವರಿಗೆ ಸಾಧ್ಯ ಆಗಿಲ್ಲ. ಮುಂದಿನ ವರ್ಷ ₹ 1.89 ಲಕ್ಷ ಕೋಟಿ ಎಂದು ಅಂದಾಜಿಸಿದ್ದಾರೆ. ಆದಾಯ ಸಂಗ್ರಹವೇ ಇಲ್ಲದೆ ಆರ್ಥಿಕ ಪರಿಸ್ಥಿತಿ ನಿರ್ವಹಿಸಿದರೆ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು. ‘ಯಾವುದೇ ಪೂರ್ವ ತಯಾರಿ ಇಲ್ಲದೇ ಒಂದೇ ವರ್ಷದಲ್ಲಿ ಗ್ಯಾರಂಟಿಗಳಿಗೆ ₹ 52 ಸಾವಿರ ಕೋಟಿ ಖರ್ಚು ಮಾಡಿದರೆ ಅಭಿವೃದ್ಧಿ ಮೇಲೆ ಹೊಡೆತ ಬೀಳುತ್ತದೆ. ಎರಡು ಮೂರು ವರ್ಷ ಯೋಜನೆಗಳು ಅನುಷ್ಠಾನಗೊಳ್ಳದಿದ್ದರೆ ರಾಜ್ಯ ಹತ್ತು ವರ್ಷ ಹಿಂದೆ ಹೋಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.