ಬೆಂಗಳೂರು: ಕೊರೊನಾ ಸೊಂಕು ಹಬ್ಬುವುದನ್ನು ತಡೆಯುವ ಸಲುವಾಗಿ ಬಿಬಿಎಂಪಿಯು ಸಾರ್ವಜನಿಕರಿಗಾಗಿ ಕೆಲವೊಂದು ಸಲಹಾಸೂತ್ರಗಳನ್ನು ಬಿಡುಗಡೆ ಮಾಡಿದೆ. ಸಾಮಾಜಿಕ ಚಟುವಟಿಕೆಯಿಂದ ದೂರವಿರಬೇಕು, ಜನರಿಂದ ಆದಷ್ಟು ಅಂತರ ಕಾಯ್ದುಕೊಳ್ಳಬೇಕು ಹಾಗೂ ಪಿ.ಜಿ.ಗಳನ್ನು ತೊರೆಯುವುದು ಒಳಿತು ಎಂದು ಪಾಲಿಕೆ ಕಿವಿಮಾತು ಹೇಳಿದೆ.

ಈ ಕುರಿತು ಪಾಲಿಕೆಯ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಅವರು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ, ಮಾರಾಟ ಮಳಿಗೆಗಳಿಗೆ, ಉದ್ಯಾನಗಳನ್ನು ಬಳಸುವವರಿಗೆ, ಪಿ.ಜಿ. ಹಾಗೂ ಹಾಸ್ಟೆಲ್ಗಳಿಗೆ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ಪ್ರತ್ಯೇಕ ಸಲಹೆಗಳನ್ನು ನೀಡಿದ್ದಾರೆ.

ಪಾಲಿಕೆ ಬಿಡುಗಡೆ ಮಾಡಿರುವ ಸಲಹಾ ಸೂತ್ರಗಳು

ಪಿ.ಜಿ./ಹಾಸ್ಟೆಲ್ ಸ್ವಚ್ಛತೆ ಕಾಪಾಡದಿದ್ದರೆ ಕ್ರಮ

-ಪೇಯಿಂಗ್ ಗೆಸ್ಟ್ (ಪಿ.ಜಿ) ವಸತಿಗಳಲ್ಲಿ ಹಾಗೂ ಹಾಸ್ಟೆಲ್ಗಳಲ್ಲಿ ಉಳಿದುಕೊಂಡಿರುವವರು ಮನೆಗೆ ಮರಳುವುದು ಸೂಕ್ತ.

-ಪಿ.ಜಿ. ಅಥವಾ ಹಾಸ್ಟೆಲ್ಗಳಲ್ಲಿ ಉಳಿದುಕೊಳ್ಳುವುದು ಅನಿವಾರ್ಯವಾದರೆ ವೈಯಕ್ತಿಕ ಸ್ವಚ್ಛತೆ ಕಾಪಾಡುವ ಬಗ್ಗೆ ಗಮನ ಹರಿಸಬೇಕು

-ಪಿ.ಜಿ. ವಸತಿಗಳಲ್ಲಿ / ಹಾಸ್ಟೆಲ್ಗಳನ್ನು ಆಗಾಗ ಸ್ವಚ್ಚಗೊಳಿಸುವುದು ಮಾಲೀಕರ/ ವ್ಯವಸ್ಥಾಪಕರ ಕಡ್ಡಾಯ ಜವಾಬ್ದಾರಿ. ವಾರ್ಡ್ ಅಥವಾ ನಿಲಯಪಾಲಕರಿಗೆ ಸ್ವಚ್ಛತೆ ಕಾಪಾಡುವ ಮಹತ್ವದ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು

-ಕೊಠಡಿಯಲ್ಲಿ ವಾಸಿಸುವವರ ಸಂಖ್ಯೆ ಮಿತಿಮೀರಬಾರದು. ಇದರಿಂದ ಅಲ್ಲಿ ಉಳಿದುಕೊಳ್ಳುವವರಿಗೆ ಅನನುಕೂಲವಾಗುವುದಲ್ಲದೇ, ಇದು ಸೋಂಕು ಹಬ್ಬುವುದಕ್ಕೂ ಕಾರಣವಾಗಬಲ್ಲುದು

-110 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ಕೊಠಡಿಗಳಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಉಳಿದುಕೊಳ್ಳುವಂತಿಲ್ಲ

-ಪಿ.ಜಿ. / ಹಾಸ್ಟೆಲ್ಗಳಲ್ಲಿ ಉಳಿದುಕೊಂಡಿರುವವರನ್ನು ಈ ಮೇಲಿನ ಕಾರಣಗಳಿಗಾಗಿ, ಬಲವಂತವಾಗಿ ಬಿಡಿಸುವುದಕ್ಕೆ ಮಾಲೀಕರಿಗೆ ಅಧಿಕಾರ ಇಲ್ಲ. ಪರ್ಯಾಯ ವ್ಯವಸ್ಥೆ ಕಂಡುಕೊಳ್ಳುವುದಕ್ಕೆ ಅವರಿಗೆ ಸಮಯಾವಕಾಶ ನೀಡಬೇಕು.

-ಸ್ವಚ್ಛತೆ ಕಾಪಾಡುವುದಕ್ಕೆ ಸಂಬಂಧಿಸಿದ ಈ ಮೇಲಿನ ನಿರ್ದೇಶನಗಳನ್ನು ಪಾಲಿಸದ ಕಾರಣ ಕೊರೊನಾ ಸೋಂಕು ಹಬ್ಬಿದರೆ, ಪಿ.ಜಿ/ ಹಾಸ್ಟೆಲ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು

ಒಂದು ಮಾಸ್ಕನ್ನು 8 ಗಂಟೆಗಿಂತ ಹೆಚ್ಚು ಸಮಯ ಬಳಸದಿರಿ

-ಪದೇ ಪದೇ ಸೋಪಿನಿಂದ ಕೈ ತೊಳೆಯುವುದರಿಂದ, ಸೋಂಕು ಹರಡುವುದನ್ನು ಪ್ರಾಥಮಿಕ ಹಂತದಲ್ಲಿಯೇ ತಡೆಗಟ್ಟಬಹುದು. ಮುಖ್ಯವಾಗಿ, ಸೊಂಕಿತ ಜಾಗವನ್ನು ಕೈ ಯಿಂದ ಸಂಪರ್ಕಿಸಿ, ಕೈತೊಳೆಯದೇ ಮುಖ, ಬಾಯಿ, ಮೂಗು ಮತ್ತು ಕಣ್ಣುಗಳನ್ನು ಮುಟ್ಟಿದಾಗ ಸೋಂಕು ವ್ಯಕ್ತಿಯನ್ನು ಪ್ರವೇಶಿಸುವುದು.

-ಮನೆಯಲ್ಲಿರುವ ಮಕ್ಕಳು ಮತ್ತು ಹಿರಿಯ ನಾಗರಿಕರ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಿ, ಸ್ವಚ್ಛತೆಯನ್ನು ಕಾಪಾಡಬೇಕು.

-ಎಲ್ಲರೂ ಮುಖಗವಸು (ಮಾಸ್ಕ್) ಧರಿಸಬೇಕಾಗಿಲ್ಲ. ನೆಗಡಿ, ಕೆಮ್ಮು ಹಾಗೂ ರೋಗಪೀಡಿತರು ಇತರರಿಗೆ ಸೊಂಕು ಹರಡದಂತೆ ತಡೆಯಲು ಮಾಸ್ಕ್ ಧರಿಸುವುದು ಸೂಕ್ತ.

-ಮುಖಗವಸನ್ನು ಸತತ 8 ಗಂಟೆಗಿಂತ ಹೆಚ್ಚು ಕಾಲ ಉಪಯೋಗಿಸಬಾರದು. ಮಾಸ್ಕ್ ಸಿಗದಿದ್ದರೆ ಸೋಂಕು ಪೀಡಿತರು ಕೆಮ್ಮುವಾಗ ಅಥವಾ ಸೀನುವಾಗ ಸ್ವಚ್ಛವಾದ ಕರವಸ್ತ್ರವನ್ನು ಉಪಯೋಗಿಸಿ. ಅದನ್ನು ಕುದಿಯುವ ನೀರಿನಲ್ಲಿ ಅದ್ದಿ, ಸ್ವಚ್ಛವಾಗಿ
ತೊಳೆದು ಪುನಃ ಬಳಸಬಹುದು.

-ಪೌಷ್ಠಿಕ ಆಹಾರದ ಸೇವನೆಯಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಆದ್ದರಿ೦ದ, ಬೀದಿ ಬದಿಗಳಲ್ಲಿ ಮಾರುವ ಆಹಾರ ಪದಾರ್ಥಗಳನ್ನು ಸೇವಿಸದೇ, ಮನೆಯಲ್ಲೇ ತಯಾರಿಸಿದ ಪೌಷ್ಠಿಕ ಆಹಾರ ಪದಾರ್ಥಗಳನ್ನು ಸೇವಿಸುವುದು ಸೂಕ್ತ.

-ಜಾತ್ರೆ, ಸಂತೆ, ಮಾರುಕಟ್ಟೆ ಮತ್ತು ಇತರೆ ಜನಜಂಗುಳಿ ಇರುವ ಸ್ಥಳಗಳಿ೦ದ ಸಾಧ್ಯವಾದಷ್ಟು ದೂರವಿರಿ.

-ಕುದಿಸಿ ಆರಿಸಿದ. ನೀರನ್ನೇ ಕುಡಿಯಿರಿ.

-ಜ್ವರ, ಕೆಮ್ಮು ನೆಗಡಿ ಮತ್ತು ಉಸಿರಾಟದ ತೊಂದರೆಯ ಲಕ್ಷಣಗಳು ಕಂಡುಬಂದಲ್ಲಿ
ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಅಥವಾ ವೈದ್ಯರನ್ನು ಸಂಪರ್ಕಿಸಿ.

-ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ104 ಸಂಪರ್ಕಿಸಿ.

-ಕೊರೊನಾ ಸೋಂಕು ತಗುಲಿದ ವ್ಯಕ್ತಿಗಳೂ ಗುಣಮುಖರಾಗುತ್ತಾರೆ. ವೃದ್ಧರು, ಹಸುಗೂಸುಗಳು, ರೋಗನಿರೋಧಕ ಶಕ್ತಿ ಕಡಿಮೆ ಇರುವವರು, ಮಧುಮೇಹ ಸಮಸ್ಯೆ ತೀವ್ರವಾಗಿರುವವರು, ಕ್ಯಾನ್ಸರ್ ರೋಗಿಗಳು, ದೀರ್ಘಕಾಲದಿಂದ ರೋಗಗಳಿಂದ ಬಳಲುತ್ತಿರುವವರು ಗುಣಮುಖರಾಗುವಾಗ ವಿಳಂಬವಾಗಬಹುದು.

-ಅಂಗನವಾಡಿಗೆ ಹೋಗುವ ಮಕ್ಕಳಿಗೆ ನೀಡುವ ಪೂರಕ ಪೌಷ್ಠಿಕ ಆಹಾರವನ್ನು ಮನೆಗೆ ತಲುಪಿಸಲಾಗುತ್ತದೆ

-ಸಾರ್ವಜನಿಕ ಸ್ಥಳಗಳಲ್ಲಿ ಉಗುಳದಿರಿ

-ವದಂತಿಗಳಿಂದ ದೂರವಿರಿ

ಉದ್ಯಾನ: ನಡುವೆ ಅಂತರವಿರಲಿ– ಜಿಮ್ ಬಳಕೆ ಬೇಡ

ಬಿಬಿಎಂಪಿಯು ಎಲ್ಲ ವ್ಯಾಯಾಮಶಾಲೆ (ಜಿಮ್) ಕ್ರೀಡಾ ಸೌಕರ್ಯಗಳು ಹಾಗೂ ಇತರ ಸೌಕರ್ಯಗಳನ್ನು ಮುಚ್ಚಿರುವುದರಿಂದ ಜನರಿಗೆ ಅನನುಕೂಲವಾಗಿರುವುದು ಸಹಜ. ಸೋಂಕು ಹಬ್ಬುವುದನ್ನು ತಡೆಯಲು ಈ ಕ್ರಮ ಅನಿವಾರ್ಯ. ಉದ್ಯನದ ಬಳಸುವುದಾದರೆ ಈ ಕೆಳಗಿನ ಕೆಲವು ಸಲಹೆ ಪಾಲಿಸಿರಿ

-ಉದ್ಯಾನಗಳಲ್ಲಿರುವ ಬಯಲು ವ್ಯಾಯಾಮಶಾಲೆಗಳ (ಓಪನ್ ಜಿಮ್) ಪರಿಕರಗಳನ್ನು ಬಳಸದಿರಿ. ಇವುಗಳ ಲೋಹದ ಮೇಲ್ಮೈ ಸೊಂಕು ಹಬ್ಬಿಸುವುದಕ್ಕೆ ಕಾರಣವಾಗಬಲ್ಲುದು. ಇವುಗಳನ್ನು ಮುಟ್ಟುವವರಿಗೂ ಸೋಂಕು ತಗಲುವ ಅಪಾಯವಿದೆ.

-ಉದ್ಯಾನಗಳಲ್ಲಿ ಗುಂಪುಗೂಡುವುದನ್ನು, ಜನರ ಜೊತೆ ಬೆರೆಯುವುದನ್ನು ತಪ್ಪಿಸಿ. ಇಂತಹ ಚಟುವಟಿಕೆಗಳು ನಿಯಂತ್ರಣ ಕ್ರಮದ ಉದ್ದೇಶವನ್ನೇ ವಿಫಲಗೊಳಿಸಬಲ್ಲವು

-ಸಾಮಾಜಿಕ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ಳಿರಿ

-ಆರೋಗ್ಯ ಕಾಪಾಡಲು ಮನೆಯಲ್ಲೇ ಮಾಡಬಹುದಾದ ವ್ಯಾಯಾಮ ಅಥವಾ ಯೋಗ ಮುಂತಾದವುಗಳ ಬಗ್ಗೆ ಸ್ಮಾರ್ಟ್ಫೋನ್ಗಳ ಮೂಲಕ ಅಥವಾ ಇಂಟರ್ನೆಟ್ನಲ್ಲಿ ಮಾಹಿತಿ ಪಡೆದು, ಅವುಗಳನ್ನು ಅನುಸರಿಸಬಹುದು.

ಮಳಿಗೆಗಳಲ್ಲಿ ಜನಜಂಗುಳಿಗೆ ಅವಕಾಶ ಕಲ್ಪಿಸದಿರಿ

-ಮಾರಾಟ ಮಳಿಗೆಗಳು ಭಾರಿ ಸಂಖ್ಯೆಯಲ್ಲಿ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಸಮಯಾಧಾರಿತ ಮಾರಾಟ ಉತ್ತೇಜಕ ಕೊಡುಗೆ (ಟೈಮ್ ಬೌಂಡ್ ಸೇಲ್ಸ್ ಪ್ರಮೋಷನ್) ನೀಡುವುದನ್ನು ಸೀಮಿತ ಅವಧಿವರೆಗೆ ಕಡ್ಡಾಯವಾಗಿ ನಿಷೇಧಿಸಲಾಗಿದೆ

-ಮಾರಾಟ ಮಳಿಗೆಗಳಲ್ಲಿ ಜನಜಂಗುಳಿ ಉಂಟಾಗುವುದನ್ನು ನಿಯಂತ್ರಿಸಲು ಸೀಮಿತ ಅವಧಿಗೆ ಟೋಕನ್ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಬಹುದು. ನಿರ್ಬಂಧ ಜಾರಿಯಲ್ಲಿದ್ದರೂ ಜನರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಏಕೈಕ ಉದ್ದೇಶದಿಂದ ಮಾರಾಟ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂಬುದನ್ನು ಮಾಲೀಕರು ಗಮನದಲ್ಲಿಟ್ಟುಕೊಳ್ಳಬೇಕು.

-ಮಳಿಗೆಗಳಲ್ಲಿ ಅಲ್ಲಲ್ಲಿ ಆಲ್ಕೋಹಾಲ್ ಆಧರಿತ ಸೋಂಕು ನಿವಾರಕ ದ್ರಾವಣಗಳನ್ನು ಇಡಬೇಕು

-ರೈಲಿಂಗ್ಗಳು, ಬಾಗಿಲುಗಳ ಹಿಡಿಗಳು, ನೆಲಗಳು, ಬಿಲ್ಲಿಂಗ್ ಟೇಬಲ್ಗಳು/ ಕೌಂಟರ್ಗಳನ್ನು ಜನ ಮುಟ್ಟುವ ಸಾಧ್ಯತೆ ಹೆಚ್ಚು. ಇಂತಹವುಗಳನ್ನು ಆಗಾಗ ಸೋಡಿಯಂ ಹೈಪೋಕ್ಲೋರೈಟ್, ಬ್ಲೀಚಿಂಗ್ ಪೌಡರ್ ಅಥವಾ ಇತರ ಪರಿಣಾಮಕಾರಿ ಸೊಂಕು ನಿವಾರಕ ಬಳಸಿ ಸ್ವಚ್ಛಗೊಳಿಸುತ್ತಿರಬೇಕು

-ಮಳಿಗೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವ ಹಾಗೂ ಸ್ವಚ್ಛತೆ ಕಾಪಾಡುವ ಬಗ್ಗೆ ತರಬೇತಿ ನೀಡಬೇಕು

-ಜ್ವರ, ಕೆಮ್ಮು, ನೆಗಡಿ, ಅಥವಾ ಶ್ವಾಸಕೋಶದ ಸಮಸ್ಯೆ ಹೊಂದಿರುವ ಸಿಬ್ಬಂದಿಗೆ ಕಡ್ಡಾಯವಾಗಿ ರಜೆ ನೀಡಬೇಕು. ಹಾಗೂ ತಕ್ಷಣವೇ ವೈದ್ಯಕೀಯ ತಪಾಸಣೆಗೆ ಒಳಗಾಗುವಂತೆ ಸೂಚನೆ ನೀಡಬೇಕು

-ಗ್ರಾಹಕರು ಯಾವುದೇ ಉತ್ಪನ್ನಗಳನ್ನು ಮುಟ್ಟುವುದಕ್ಕೆ ಅವಕಾಶ ನೀಡದಿರುವುದು ಒಳ್ಳೆಯದು. ಅಗತ್ಯ ಬಿದ್ದರೆ ಉತ್ಪನ್ನಗಳ ಆಯ್ಕೆಗೆ ಸಿಬ್ಬಂದಿ ಅವರಿಗೆ ನೆರವಾಗಬಹುದು.

-ಬಿಲ್ಲಿಂಗ್ ಕೌಂಟರ್ಗಳ ಬಳಿ ಜನಜಂಗುಳಿ ಉಂಟಾಗದಂತೆ ನೋಡಿಕೊಳ್ಳಬೇಕು. ಕೌಂಟರ್ಗಳಲ್ಲಿ ಗ್ರಾಹಕರಿಗೆ ನೆರವಾಗಲು ಸಾಕಷ್ಟು ಸಂಖ್ಯೆಯಲ್ಲಿ ಸಿಬ್ಬಂದಿ ಇರುವಂತೆ ಮಳಿಗೆಯ ಮಾಲೀಕರು ಅಥವಾ ಆಡಳಿತ ಮಂಡಳಿ ನೋಡಿಕೊಳ್ಳಬೇಕು. ವಾರಾಂತ್ಯಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಬೇಕು.

-ಸರ್ಕಾರ ಬಿಡುಗಡೆ ಮಾಡಿರುವ ಮುನ್ನೆಚ್ಚರಿಕಾ ಮಾಹಿತಿಗಳನ್ನು ಮುದ್ರಿಸಿ ಅಲ್ಲಲ್ಲಿ ಪ್ರಕಟಿಸಬೇಕು (ಇದಕ್ಕೆ ಫ್ಲೆಕ್ಸ್ ಬ್ಯಾನರ್ ಬಳಸಬಾರದು).

ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಸೂಚನೆಗಳು

-ಸೋಂಕು ಹಬ್ಬದಂತೆ ಅಪಾರ್ಟ್ಮೆಂಟ್ ಸಮುಚ್ಚಯಗಳ ಹಾಗೂ ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (ಆರ್ಡಬ್ಲ್ಯುಎ) ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಪಾಲಿಕೆ ಸೂಚಿಸಿದೆ.

-ವಸತಿ ಸಮುಚ್ಚಯದಲ್ಲಿ ಯಾವುದೇ ಸಮಾರಂಭ ಹಮ್ಮಿಕೊಳ್ಳುವಂತಿಲ್ಲ

-ಅಂಗಳ, ರೈಲಿಂಗ್ಸ್, ಮೇಲ್ಮೈಗಳನ್ನು ಆಗಾಗ ಸೋಡಿಯಂ ಹೈಪೋಕ್ಲೋರೈಟ್. ಬ್ಲೀಚಿಂಗ್ ಪೌಡರ್ ಅಥವಾ ಇತರ ಪರಿಣಾಮಕಾರಿ ಸೊಂಕು ನಿವಾರಕ ಬಳಸಿ ಸ್ವಚ್ಛಗೊಳಿಸುತ್ತಿರಬೇಕು. ಶುಚಿತ್ವ ಕಾಪಾಡಲು ಅತ್ಯಂತ ಹೆಚ್ಚಿನ ಕಾಳಜಿ ವಹಿಸಬೇಕು

-ಮನೆ ಕೆಲಸದವರ ಬಗ್ಗೆ ಅತ್ಯಂತ ಕಾಳಜಿ ವಹಿಸಬೇಕು. ಸಾಬೂನು/ ಸೋಂಕುನಿವಾರಕ ದ್ರವಾನ/ ಸಾಬೂನಿನ ದ್ರಾವಣಗಳನ್ನು ಒದಗಿಸಿ ಅವರು ಆಗಾಗ ಕಯತೊಳೆದುಕೊಳ್ಳುವಂತೆ ಉತ್ತೇಜಿಸಬೇಕು.

-ವಾಯುವಿಹಾರಕ್ಕೆ, ಜಾಗಿಂಗ್ಗೆ ಬಳಸುವ ದಾರಿ, ಉದ್ಯಾನಗಳನ್ನು ಬಳಸುವಾಗ ಜನರ ನಡುವೆ ಕನಿಷ್ಠ 1 ಮೀ. ಅಂತರ ಕಾಪಾಡುವುದಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲಿ ಜನ ಗುಂಪು ಸೇರುವುದಕ್ಕೆ ಅವಕಾಶ ಕಲ್ಪಿಸಿದರೆ ನಿರ್ಬಂಧ ಕ್ರಮಗಳ ಆಶಯವೇ ಬುಡಮೇಲಾಗುತ್ತದೆ.

-ಜಿಮ್, ಕ್ರೀಡಾ ಸೌಲಭ್ಯ, ಈಜುಕೊಳ, ಮನರಂಜನಾ ತಾಣ ಹಾಗೂ ಕ್ಲಬ್ ಸೌಕರ್ಯಗಳನ್ನು ಮುಚ್ಚಬೇಕು

-ವಠಾರದೊಳಗೆ ಬೇಸಿಗೆ ಶಿಬಿರ ಹಾಗೂ ಹೊರಾಂಗಣ ಚಟುವಟಿಕೆ ಹಮ್ಮಿಕೊಳ್ಳುವಂತಿಲ್ಲ.

-ಲಿಫ್ಟ್ಗಳೂ ಸೋಂಕು ಹಬ್ಬಿಸುವ ತಾಣಗಳಾಗಬಹುದು.

-ಆರ್ಡಬ್ಲ್ಯುಎಗಳು ಅವುಗಳನ್ನು ಆಗಾಗ ಸ್ವಚ್ಛಗೊಳಿಸಲು ಕ್ರಮಕೈಗೊಳ್ಳಬೇಕು

-ಲಿಫ್ಟ್ನ ಒತ್ತುಗುಂಡಿಗಳನ್ನು ಆಗಾಗ ಶುಚಿಗೊಳಿಸಬೇಕು

-ಪ್ರತಿ ಬಾರಿ ಲಿಫ್ಟ್ ಬಳಸುವ ಮುನ್ನ ಸಾಬೂನಿನ ದ್ರಾವಣ ಅಥವಾ ಸೋಂಕು ನಿವಾರಕ ದ್ರಾವಣದಿಂದ ಕೈ ತೊಳೆಯಬೇಕು

-ಲಿಫ್ಟ್ ಗುಂಡಿಗಳನ್ನು ಮುಟ್ಟಿದ ಬಳಿಕ ಕೈತೊಳೆಯದೆ ಕಣ್ಣು, ಮೂಗು ಅಥವಾ ಮುಖವನ್ನು ಮುಟ್ಟಬಾರದು

-ವದಂತಿ ಹಬ್ಬಿಸುವುದನ್ನು ಹತ್ತಿಕ್ಕಬೇಕು. ವದಂತಿಗಳು ನಿವಾಸಿಗಳಿಗೆ ಅಥವಾ ಸಮುದಾಯದವರಿಗೆ ನೋವು ಅಥವಾ ಸಮಸ್ಯೆ ತಂದೊಡ್ಡುತ್ತವೆ. ಸಂದೇಹ ನಿವಾರಣೆಗೆ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಿ

-ವಠಾರದಲ್ಲಿ ಯಾರಿಗಾದರೂ ಕೊರೊನಾ ಸೋಂಕು ಪತ್ತೆಯಾದರೆ ಅವರಿಗೆ ‘ಪ್ರತ್ಯೇಕ ವಾಸ’ದ ವ್ಯವಸ್ಥೆ ಕಲ್ಪಿಸುವುದಕ್ಕೆ ಯೋಜನೆ ರೂಪಿಸಬೇಕು. ಈ ಕುರಿತು ಆರೋಗ್ಯಾಧಿಕಾರಿಗಳಿಗೆ ನಿಮ್ಮ ನೆರವಿನ ಅಗತ್ಯವಿದೆ

-ಸರ್ಕಾರ ಬಿಡುಗಡೆ ಮಾಡಿರುವ ಮುನ್ನೆಚ್ಚರಿಕಾ ಮಾಹಿತಿಗಳನ್ನು ಮುದ್ರಿಸಿ ಅಲ್ಲಲ್ಲಿ ಪ್ರಕಟಿಸಬೇಕು (ಇದಕ್ಕೆ ಫ್ಲೆಕ್ಸ್ ಬ್ಯಾನರ್ ಬಳಸಬಾರದು). ‘ಪ್ರತ್ಯೇಕ ವಾಸ’ಕ್ಕೆ ಶಿಫಾರಸುಗೊಂಡವರು ಅವರ ಮನೆಯಲ್ಲೇ ಇರುವಂತೆ ಹಾಗೂ ವಠಾರದಲ್ಲಿ ಅಥವಾ ನಗರದಲ್ಲಿ ಓಡಾಡದಂತೆ ನೋಡಿಕೊಳ್ಳುವುದು ಆರ್ಡಬ್ಲ್ಯುಎ ಹೊಣೆ. ಪ್ರತ್ಯೇಕ ವಾಸಕ್ಕೆ ಶಿಫಾರಸು ಮಾಡಿದವರ ವಿವರಗಳನ್ನು ಆರೋಗ್ಯ ಅಧಿಕಾರಿಗಳು ಆರ್ಡಬ್ಲ್ಯುಎ ಜೊತೆ ಹಂಚಿಕೊಳ್ಳುತ್ತಾರೆ. ಸೋಂಕು ಹೊಂದಿರುವ ಶಂಕಿತರು ಪ್ರತ್ಯೇಕ ವಾಸದ ನಿಬಂಧನೆ ಪಾಲಿಸದೇ ಇದ್ದರೆ ಸೋಂಕು ಇಡೀ ಸಮುದಾಯಕ್ಕೆ ಹಬ್ಬುವ ಅಪಾಯವಿದೆ.

ನಿವಾಸಿಗಳಿಗೆ ಸೂಚನೆಗಳು

-ಯಾವುದೇ ನಿವಾಸಿ 14 ದಿನಗಳಿಂದ ಈಚೆಗೆ ವಿದೇಶ ಪ್ರವಾಸ ಕೈಗೊಂಡಿದ್ದಲ್ಲಿ ಅವರು ಸಹಾಯವಾಣಿ 104ಕ್ಕೆ ಮಾಹಿತಿ ನೀಡಬೇಕು. ಅವರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು

-ಮನೆಯಲ್ಲೇ 14 ದಿನ ಪ್ರತ್ಯೇಕ ವಾಸ ಮಾಡಬೇಕು

-ಜ್ವರ, ನೆಗಡಿ, ಕೆಮ್ಮು, ಉಸಿರಾಟ ಸಮಸ್ಯೆ ಮುಂತಾದ ಗಂಭೀರ ಶ್ವಾಸಕೋಶ ಸಮಸ್ಯೆ ಕಾಣಿಸಿಕೊಂಡರೆ ನಂತರದ ಆರೈಕೆಗೆ ಆರೋಗ್ಯ ಇಲಾಖೆ ನೆರವು ನೀಡುತ್ತದೆ

-ಶಂಕಿತರ ಜೊತೆ ಸಂಪರ್ಕ ಹೊಂದಿದ್ದವರ ವಿವರವನ್ನೂ ಆರೋಗ್ಯ ಇಲಾಖೆ ಹಂಚಿಕೊಳ್ಳಬೇಕು. ಅವರಿಗೂ ಪ್ರತ್ಯೇಕ ವಾಸ ಹಾಗೂ ವಿಶೇಷ ನಿಗಾ ಅಗತ್ಯ

-ಕ್ಯಾನ್ಸರ್, ತೀವ್ರ ಮಧುಮೇಹದಿಂದ ಬಳಲುವವರು, ರೋಗನಿರೋಧಕ ಶಕ್ತಿ ದುರ್ಬಲಗೊಂಡಿರುವವರು ಮನೆಯೊಳಗೇ ಇರುವುದು ಒಳಿತು. ಪೌಷ್ಠಿಕ ಆಹಾರ ಸೇವಿಸಬೇಕು. ಔಷಧಗಳನ್ನು ನಿಯಮಿತವಾಗಿ ಸೇವಿಸುವುದನ್ನು ತಪ್ಪಿಸಬಾರದು. ಪದೇ ಪದೇ ಕೈತೊಳೆಯುವುದು, ಜನಜಂಗುಳಿಯಿಂದ ದೂರವಿರುವ ಪರಿಪಾಟ ಬೆಳೆಸಿಕೊಳ್ಳಬೇಕು

ಮಕ್ಕಳ ಬಗ್ಗೆ ಇರಲಿ ಕಾಳಜಿ

-ಮಕ್ಕಳು ಹೊರಗಡೆ ಗುಂಪಾಗಿ ಆಡುವುದನ್ನು ತಪ್ಪಿಸಿ

-ಮಕ್ಕಳು ಮನೆಯೊಳಗೇ ವಿವಿಧ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ನೋಡಿಕೊಳ್ಳಿ

-ಬೇರೆಯವರಿಂದ ಅಂತರ ಕಾಪಾಡುವ ಬಗ್ಗೆ, ಕೆಮ್ಮುವಾಗ ಪಾಲಿಸಬೇಕಾದ ಶಿಷ್ಟಾಚಾರ ಹಾಗೂ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮಹತ್ವದ ಬಗ್ಗೆ ಮಕ್ಕಳಿಗೂ ತಿಳಿವಳಿಕೆ ನೀಡಿ. ಅವರು ಆರೋಗ್ಯಯುತ ಹವ್ಯಾಸ ರೂಡಿಸಿಕೊಳ್ಳುವಂತೆ ಮಾಡಿ.

-ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹಾಗೂ ರೋಗನಿರೋಧಕ ಶಕ್ತಿಯನ್ನು ಗಳಿಸುವಲ್ಲಿ ಪೌಷ್ಠಿಕ ಆಹಾರದ ಪಾತ್ರ ಮಹತ್ವದ್ದು. ಹಾಗಾಗಿ ಮಕ್ಕಳಿಗೆ ಮನೆಯಲ್ಲೇ ತಯಾರಿಸಿದ ಆಹಾರ ನೀಡಿ.

* ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ, ತರಬೇತಿಗಳಿಗೆ ಕಳುಹಿಸಬೇಡಿ. ಅವರು ಆನ್ಲೈನ್ ಮೂಲಕ ಸಿಗುವ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬಹುದು.

-ಕೊರೊನಾ ಸೋಂಕು ಹರಡುತ್ತಿರುವ ಬಗ್ಗೆ ಮಕ್ಕಳಿಗೂ ತಿಳಿಸಿ ಹೇಳುವ ಮೂಲಕ ಅವರ ಚಟುವಟಿಕೆ ನಿರ್ಬಂಧಿಸಿರುವ ಅಗತ್ಯದ ಬಗ್ಗೆ ಮನವರಿಕೆ ಮಾಡಿಸಿ

-ದೂರದ ಊರುಗಳಿಗೆ ಪ್ರಯಾಣ ಬೆಳೆಸುವುದನ್ನು ಆದಷ್ಟು ಕಡಿಮೆ ಮಾಡಿ. ಅಗತ್ಯ ಬಿದ್ದರೆ ಮಾತ್ರ ಪ್ರಯಾಣಿಸಿ

ಸಭೆ ಸಮಾರಂಭಗಳಿಂದ ದೂರವಿರಿ

-ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಭೆ ಸಮಾರಂಭಗಳಲ್ಲಿ ಸೊಂಕು ಹಬ್ಬುವ ಅಪಾಯ ಹೆಚ್ಚು. ಇಂತಹ ಕಡೆ ಸೊಂಕಿನ ಮೂಲವನ್ನು ಕಂಡುಹಿಡಿಯುವುದು ಕಷ್ಟ. ಹಾಗಾಗಿ ಇಂತಹ ಸಭೆ ಸಮಾರಂಭಗಳಿಂದ ದೂರವಿರಿ.

-ಹುಟ್ಟುಹಬ್ಬ, ಕಿಟ್ಟಿಪಾರ್ಟಿ, ಔತಣಕೂಟಗಳು ನಿಮ್ಮ ಕುಟುಂಬದವರ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸಬಲ್ಲವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.