ಮಂಗಳೂರು:‘ ಐಪಿಎಲ್ ಸಂಘಟಿಸುವವರು ಸಾವಿರಾರು ಕೋಟಿ ರೂಪಾಯಿಯ ಮಾಲೀಕರು. ವಿಜಯೋತ್ಸವದ ಸಂದರ್ಭದಲ್ಲಿ ನೂಕುನುಗ್ಗಲಿನಿಂದ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಬಿಸಿಸಿಐ ತಲಾ ₹ 1 ಕೋಟಿ ಕೊಡಬೇಕು. ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

ಇಲ್ಲಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಆರ್ಸಿಬಿ ರಾಜ್ಯದ ಅಥವಾ ರಾಷ್ಟ್ರದ ಕ್ರಿಕೆಟ್ ತಂಡ ಅಲ್ಲ. ವಿಜಯೋತ್ಸವದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಎಲ್ಲರೂ ದುಃಖದಲ್ಲಿದ್ದಾರೆ. ಹಾಗಾಗಿ ಹೆಚ್ಚೇನೂ ಹೇಳಲು ಬಯಸುವುದಿಲ್ಲ’ ಎಂದರು.
.‘ಆರ್ಸಿಬಿ ಸಂಭ್ರಮ’ದ ಕಾಲ್ತುಳಿತಕ್ಕೆ ಯಾರೂ ಹೊಣೆ ಅಲ್ಲವಂತೆ! UDR ಕೇಸ್ ದಾಖಲು!.ಸಿಎಂ ಮೊಮ್ಮಗನಿಗೆ ಆಟೋಗ್ರಾಫ್ ಕೊಡಿಸಲು ವಿಧಾನಸೌಧದ ಮುಂದೆ ಆರ್ಸಿಬಿ ಶೋ: ಪ್ರತಾಪ.
ಸರ್ಕಾರದ ಏನು ಮಾಡಿದೆ ಅಥಾವಾ ಏನು ಮಾಡಿಲ್ಲ ಎಂಬುದನ್ನು ಜವಾಬ್ದಾರಿ ಸ್ಥಾನದಲ್ಲಿ ಇದ್ದು ನಾನು ಹೇಳಲು ಆಗದು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಈ ಬಗ್ಗೆ ತಿಳುವಳಿಕೆ ಕೊಡಬೇಕು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗರಿಷ್ಠ 35 ಸಾವಿರ ಜನ ಮಂದಿ ಸೇರುವಷ್ಟು ಮಾತ್ರ ಸಾಮರ್ಥ್ಯವಿದೆ. ಉಚಿತ ಪ್ರವೇಶ ಎಂದು ತಿಳಿದು ಅಲ್ಲಿಗೆ 3 ಲಕ್ಷ ಜನ ತೆರಳಿದ್ದಾರೆ. ನಮ್ಮಲ್ಲಿ ಸಾವಿರಕ್ಕೆ ಒಬ್ಬರಂತೆ ಪೊಲೀಸ್ ಸಿಬ್ಬಂದಿ ಇದ್ದಾರೆ. ಎಲ್ಲೋ ಒಂದು ಕಡೆ ಹೆಚ್ಚು ಕಮ್ಮಿ ಆಗಿದೆ’ ಎಂದರು.

‘11 ಮಂದಿಯ ಸಾವಿಗೆ ಯಾರು ಹೊಣೆ ಎಂದು ಸರ್ಕಾರ ತಿಳಿಸಬೇಕು. ದುರ್ಘಟನೆ ಸಂಭವಿಸಿದ್ದು ಸರ್ಕಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಲ್ಲ. ವಿಧಾನಸೌಧದ ಬಳಿ ಯಾವುದೇ ದುರ್ಘಟನೆ ಸಂಭವಿಸಿಲ್ಲ. ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸುವಾಗ ಸ್ವಲ್ಪ ಯೋಚನೆ ಮಾಡಬೇಕಿತ್ತು. ಕ್ರಿಕೆಟ್ ಅಭಿಮಾನಿಗಳು ಕೂಡಾ ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಆಯೋಚಿಸಬೇಕಿತ್ತು. ಸಾವು ಸಂಭವಿಸಿದ್ದು ಗೊತ್ತಾದ ಬಳಿಕ ವಿಜೋತ್ಸವವನ್ನು ನಿಲ್ಲಿಸಬೇಕಾಗಿತ್ತು’ ಎಂದು ಅಭಿಪ್ರಾಯಪಟ್ಟರು.

‘ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಳ್ಳುವ ಅಧಿಕಾರ ಹೈಕೋರ್ಟ್ಗೆ ಇದೆ. ಎಲ್ಲ ವಿಚಾರಗಳಲ್ಲೂ ಇದೇ ತರಹ ಮಾಡಿದರೆ ಒಳ್ಳೆಯದು’ ಎಂದರು.
.ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ: ಆರ್ಸಿಬಿ.RCB Victory Parade | ಆರ್ಸಿಬಿ ಅಭಿಮಾನದ ಹುಚ್ಚು ಉನ್ಮಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.