ಮೈಸೂರು: ‘ರಾಜ್ಯ ಸರ್ಕಾರದದ ಬೇಜವಾಬ್ದಾರಿಯಿಂದಾಗಿ ಸಂಭ್ರಮಾಚರಣೆ ಕಾರ್ಯಕ್ರಮವು ಶೋಕಾಚರಣೆಯಾಗಿ ಮಾರ್ಪಾಡಾಯಿತು’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಕಿಡಿಕಾರಿದರು.

ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ಒರಟು ವ್ಯಕ್ತಿ ಅಂದುಕೊಂಡಿದ್ದೆ. ಅವರು ಸಂವೇದನೆ ಇಲ್ಲದ ನಿರ್ಭಾವುಕ ಮನುಷ್ಯ ಎಂಬುದು ಬುಧವಾರ ಗೊತ್ತಾಯಿತು. ಅವರೊಬ್ಬ ನಿರ್ಭಾವುಕ, ನಿರ್ಲಜ್ಜ ವ್ಯಕ್ತಿ. ಮುಖ್ಯಮಂತ್ರಿಯ ಮೊಮ್ಮಗ, ಸಚಿವರು, ಅಧಿಕಾರಿಗಳ ಮಕ್ಕಳು ಆರ್ಸಿಬಿ ತಂಡದವರೊಂದಿಗೆ ಫೋಟೊಗ್ರಾಫ್–ಆಟೊಗ್ರಾಫ್ ತೆಗೆದುಕೊಳ್ಳಲೆಂದು ವಿಧಾನಸೌಧದ ಮುಂದೆ ಕಾರ್ಯಕ್ರಮ ನಡೆಸಲಾಯಿತು’ ಎಂದು ದೂರಿದರು.

‘ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರಿಗೆ ಭದ್ರತೆಯ ಪಾಠ ಮಾಡಿದ್ದ ಸಚಿವರಾದ ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ ಈಗ ಎಲ್ಲಿ ಹೋದರು? ಆದಿತ್ಯನಾಥ ಕೋಟ್ಯಂತರ ಜನರು ಬಂದರೂ ಕುಂಭಮೇಳವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ರಾಜ್ಯ ಸರ್ಕಾರದವರು 60ಸಾವಿರ ಜನರನ್ನು ನಿಭಾಯಿಸುವುದಕ್ಕೂ ಆಗಲಿಲ್ಲ. ಕಾಂಗ್ರೆಸ್ಗೆ ಎಷ್ಟು ದರಿದ್ರ ಬಂದಿದೆ ಎಂದರೆ, ಆರ್ಸಿಬಿ ಗೆಲುವಲ್ಲಿ ಪ್ರಚಾರ ಪಡೆಯಲು ಜನರನ್ನು ಬಲಿ ಕೊಟ್ಟಿತು’ ಎಂದು ಆರೋಪಿಸಿದರು.

‘ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆರ್ಸಿಬಿ ತಂಡದೊಂದಿಗೆ ಶಾಲು, ಕೂಲಿಂಗ್ ಗ್ಲಾಸ್ ಹಾಕಿಕೊಂಡು ಪೋಸು ಕೊಟ್ಟಿದ್ದೇ ಕೊಟ್ಟಿದ್ದು. ಅದನ್ನು ಬಿಟ್ಟು ಯಾವ ತಯಾರಿಯೂ ನಡೆದಿರಲಿಲ್ಲ. ವಿರಾಟ್ ಕೊಹ್ಲಿ ಫೋನ್ ಮಾಡಿ ಇವತ್ತೇ ಬಂದ್ ಬಿಡ್ತಿನಿ ಕಾರ್ಯಕ್ರಮ ಮಾಡಿ ಅಂದಿದ್ರಾ? ಫೈನಲ್ ಮರು ದಿನವೇ ಕಾರ್ಯಕ್ರಮ ನಡೆಸುವ ಒತ್ತಡವೇನಿತ್ತು? ರೋಡ್ ಶೋ ಮಾಡಿದ್ದರೆ ಲಕ್ಷಾಂತರ ಜನ ನೋಡುತ್ತಿದ್ದರು. ಸರ್ಕಾರಕ್ಕೆ ಕನಿಷ್ಠ ಸಾಮಾನ್ಯ ಜ್ಞಾನ ಇದ್ದಿದ್ದರೆ ಕಾಲ್ತುಳಿತದಂತಹ ಘಟನೆ ನಡೆಯುತ್ತಿರಲಿಲ್ಲ’ ಎಂದರು.

‘ಜಮೀರ್ ಮಗ, ರಿಜ್ವಾನ್ ಮಗ, ಮುಖ್ಯ ಕಾರ್ಯದರ್ಶಿಮಗಳು, ಸಿದ್ದರಾಮಯ್ಯ ಮೊಮ್ಮಗನಿಗಾಗಿ ವಿಧಾನಸೌಧದ ಮುಂದೆ ಕಾರ್ಯಕ್ರಮ ಮಾಡಿದ್ರಾ? ಆಂಧ್ರಪ್ರದೇಶದಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಕಾಲ್ತುಳಿತ ಪ್ರಕರಣದಲ್ಲೇ ಪೊಲೀಸರು ಬಂಧಿಸಿದರು. ಈಗ ಇಲ್ಲಿ ಮುಖ್ಯಮಂತ್ರಿ ಅರೆಸ್ಟ್ ಆಗುತ್ತಾರಾ, ಡಿಸಿಎಂ ಅರೆಸ್ಟ್ ಆಗುತ್ತಾರಾ? ಗೃಹ ಸಚಿವರ ತಲೆದಂಡ ಆಗುತ್ತಾ? ಈ ಘಟನೆಗೆ ಯಾರು ಹೊಣೆ ಹೇಳಿ’ ಎಂದು ಕೇಳಿದರು.

‘ತಿಪ್ಪೆ ಸಾರಿಸಲು ತನಿಖೆಗೆ ಆದೇಶಿಸಲಾಗಿದೆ. ಇದರಿಂದ ಯಾವ ಪ್ರಯೋಜನವೂ ಇಲ್ಲ. ಕರ್ನಾಟಕ ಪೊಲೀಸ್ ಇಲಾಖೆಗೆ ಕಳಂಕ ತರುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ’ ಎಂದು ದೂರಿದರು.
.ನಿನ್ನೆ ನಮ್ಮ ಮೆಟ್ರೊದಲ್ಲಿ ಭಾರಿ ಜನ ಸಂಚಾರ! ‘RCB ಸಂಭ್ರಮ’ಕ್ಕೆ ಬಂದವರೇ ಹೆಚ್ಚು.ಸಂಪಾದಕೀಯ | RCB ತಂಡಕ್ಕೆ ಸನ್ಮಾನ: ಕಾಲ್ತುಳಿತದ ಸಂಪೂರ್ಣ ಹೊಣೆ ಸರ್ಕಾರ ಹೊರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.