ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಮೀಸಲಾತಿಗಾಗಿ ಹೋರಾಟ ನಡೆಸಿದ ಪಂಚಮಸಾಲಿ ಸಮಾಜದವರ ಮೇಲೆ ಲಾಠಿಚಾರ್ಜ್ ಮಾಡಿದ ವಿಷಯ ಗುರುವಾರ ಮತ್ತೆ ಪ್ರತಿಧ್ವನಿಸಿತು. ಬೆಳಗಾವಿ ಸಮೀಪದ ಹಿರೇಬಾಗೇವಾಡಿಯ ಟೋಲ್‌ನಾಕಾ ಬಳಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೆದ್ದಾರಿ ಬಂದ್ ಮಾಡಿದರು. ಪಂಚಮಸಾಲಿ ಸಮಾಜದವರೇ ಆದ ಒಬ್ಬ ಶಾಸಕರೇ ಕುಮ್ಮಕ್ಕು ನೀಡಿ ಲಾಠಿಚಾರ್ಜ್ ಮಾಡಿಸಿದ್ದಾರೆ ಎಂದೂ ಸ್ವಾಮೀಜಿ ಗಂಭೀರ ಆರೋಪ ಮಾಡಿದರು. ಕೊಂಡಿ ಮಂಚಣ್ಣ ಇದ್ದ, ಮಲ್ಲಪ್ಪಶೆಟ್ಟಿ ಅಂಥವರು ಇನ್ನೂ ಇದ್ದಾರೆ. ತಮ್ಮ ಸಚಿವ ಸ್ಥಾನಕ್ಕಾಗಿ ಗೋಲಿಬಾರ್ ಬೇಕಾದರೂ ಮಾಡಿಸಲಿ ಎಂದೂ ಅವರು ಕಿಡಿ ಕಾರಿದರು.