ಪ್ರಜಾವಾಣಿ ವಾರ್ತೆ

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ಯೋಜನೆಯ ಮೂರನೇ ಹಂತದ ಕಾರಿಡಾರ್–1 ಮತ್ತು ಕಾರಿಡಾರ್–2ರಲ್ಲಿ ಡಬ್ಬಲ್ ಡೆಕರ್ ರೈಲು ಮತ್ತು ಎತ್ತರಿಸಿದ ರಸ್ತೆ ಮಾರ್ಗ ನಿರ್ಮಾಣಕ್ಕೆ ₹9,700 ಕೋಟಿ ವೆಚ್ಚ ಭರಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಕಾರಿಡಾರ್–1ರ ಜೆ.ಪಿ.ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ ಮತ್ತು ಕಾರಿಡಾರ್–2ರ ಹೊಸಹಳ್ಳಿಯಿಂದ ಕಡಬಗೆರೆಯವರೆಗೆ ಒಟ್ಟು 44.65 ಕಿ.ಮೀ.ನಷ್ಟು ಉದ್ದದ ಮೆಟ್ರೊ ರೈಲು ಮಾರ್ಗ ನಿರ್ಮಾಣವಾಗಲಿದೆ. ಈ ಮಾರ್ಗದ ಜತೆಗೆ ಡಬ್ಬಲ್ ಡೆಕರ್ ಮಾದರಿಯಲ್ಲಿ ಒಟ್ಟು 37.121 ಕಿ.ಮೀ.ನಷ್ಟು ಉದ್ದದ ಎತ್ತರಿಸಿದ ರಸ್ತೆ ನಿರ್ಮಿಸಲು ಸಂಪುಟ ಅನುಮೋದನೆ ನೀಡಿದೆ.

ಎತ್ತರಿಸಿದ ರಸ್ತೆಯ ಜತೆಗೆ, ಅಲ್ಲಲ್ಲಿ ಪ್ರವೇಶ ಮತ್ತು ನಿರ್ಗಮನ ರ್ಯಾಂಪ್ಗಳನ್ನು ನಿರ್ಮಿಸಲಾಗುತ್ತದೆ. ನಿರ್ಮಾಣ ವೆಚ್ಚ, ಹೆಚ್ಚುವರಿ ಭೂಸ್ವಾಧೀನ ವೆಚ್ಚ, ಈಗಾಗಲೇ ಇರುವ ಕೆಲ ಮೇಲ್ಸೇತುವೆಗಳ ತೆರವು ಕಾಮಗಾರಿ ಸೇರಿ ಒಟ್ಟು ₹9,700 ಕೋಟಿ ವೆಚ್ಚವಾಗಲಿದೆ. ಪ್ರಸ್ತಕ ಹಣಕಾಸು ವರ್ಷದಲ್ಲಿ ಮೆಟ್ರೊ ಕಾಮಗಾರಿಗಾಗಿ ₹4,000 ಕೋಟಿ ತೆಗೆದಿರಿಸಿದ್ದು, ಅದನ್ನು ಈ ಯೋಜನೆಗೆ ಬಳಕೆ ಮಾಡಲು ಒಪ್ಪಿಗೆ ನೀಡಲಾಗಿದೆ.

ಮೆಟ್ರೊ ರೈಲು ಮಾರ್ಗದ ನಿರ್ಮಾಣ ವೆಚ್ಚವನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಭರಿಸಲಿದೆ. ಮುಂದಿನ ಹಣಕಾಸು ವರ್ಷಗಳಲ್ಲೂ ಅಗತ್ಯ ಅನುದಾನವನ್ನು ಒದಗಿಸಲಾಗುತ್ತದೆ. 2030ರ ಅಂತ್ಯದ ವೇಳೆಗೆ ಯೋಜನೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತವಾಗಿಸುವ ಗುರಿ ಹಾಕಿಕೊಳ್ಳಲಾಗಿದೆ.

ಕಾರಿಡಾರ್–1 ಯೋಜನೆ ಕಾರ್ಯಗತವಾದ ನಂತರ ಬೆಂಗಳೂರು ದಕ್ಷಿಣ ಭಾಗದಿಂದ ಹೆಬ್ಬಾಳ ಮಾರ್ಗವಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಮತ್ತು ತ್ವರಿತ ಸಂಪರ್ಕ ಒದಗಿಸಲಿದೆ. ಕಾರಿಡಾರ್–2 ಬಳಕೆಗೆ ಮುಕ್ತವಾದರೆ, ಫೆರಿಫೆರಲ್ ವರ್ತುಲ ರಸ್ತೆಯಿಂದ ನಗರದ ವಿಜಯನಗರ ಭಾಗಕ್ಕೆ ನೇರ ಮತ್ತು ಸಿಗ್ನಲ್ಮುಕ್ತ ರಸ್ತೆ ಸಂಪರ್ಕ ಸಾಧ್ಯವಾಗಲಿದೆ.

ಡಬ್ಬಲ್ ಡೆಕರ್ ಮಾರ್ಗದ ಮಾದರಿ

* 28.486 ಕಿ.ಮೀ.ಕಾರಿಡಾರ್–1ರ ಎತ್ತರಿಸಿದ ರಸ್ತೆಯ ಉದ್ದ 8.635 ಕಿ.ಮೀ.ಕಾರಿಡಾರ್–2ರ ಎತ್ತರಿಸಿದ ರಸ್ತೆಯ ಉದ್ದ ನೆಲಮಟ್ಟದ ರಸ್ತೆ. ಈಗ ಇರುವ ರಸ್ತೆಗಳನ್ನು ಉಳಿಸಿಕೊಳ್ಳಲಾಗುತ್ತದೆ. ಎತ್ತರಿಸಿದ ರಸ್ತೆ ಎರಡು ಪಥಗಳು ಮೆಟ್ರೊ ಪಿಲ್ಲರ್ ಮೆಟ್ರೊ ರೈಲು ಮಾರ್ಗ

* ಹಳದಿ ಮಾರ್ಗದಲ್ಲಿ ನಿರ್ಮಿಸಲಾದ ಎತ್ತರಿಸಿದ ರಸ್ತೆಯಲ್ಲಿ 3 ಕಿ.ಮೀ. ಅಂತರದಲ್ಲಿ ಯಾವುದೇ ಪ್ರವೇಶ ಅಥವಾ ನಿರ್ಗಮನ ರ್ಯಾಂಪ್ಗಳಿಲ್ಲ. ಕಾರಿಡಾರ್–1 ಮತ್ತು 2ರ ಎತ್ತರಿಸಿದ ಮಾರ್ಗದಲ್ಲಿ ಅಲ್ಲಲ್ಲಿ ಪ್ರವೇಶ ಮತ್ತು ನಿರ್ಗಮನ ರ್ಯಾಂಪ್ಗಳನ್ನು ನಿರ್ಮಿಸಲಾಗುತ್ತದೆ

* ಈ ಎರಡೂ ಕಾರಿಡಾರ್ಗಳಲ್ಲಿ ಹಲವು ಮೇಲ್ಸೇತುವೆಗಳು ಮತ್ತು ಗ್ರೇಡ್ ಸಪರೇಟರ್ಗಳು ಇವೆ. ಅವುಗಳನ್ನು ಉಳಿಸಿಕೊಂಡೇ ಡಬ್ಬಲ್ ಡೆಕರ್ ಮಾರ್ಗ ವಿನ್ಯಾಸ ಮಾಡಲಾಗುತ್ತದೆ

* ಹಳೆಯ ಮೇಲ್ಸೇತುವೆ ಬಳಿ ಡಬ್ಬಲ್ ಡೆಕರ್ ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನದ ವೆಚ್ಚ ಹೆಚ್ಚಾದರೆ ಮೇಲ್ಸೇತುವೆ ತೆರವು ಮಾಡಲು ಅನುಮತಿ ನೀಡಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.