ಬೆಂಗಳೂರು: ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕು ಭೀಮಗಡ ಅಭಯಾರಣ್ಯದ ಅರಣ್ಯವಾಸಿಗಳ ಸ್ಥಳಾಂತರದಲ್ಲಿ ಅಕ್ರಮ ನಡೆದಿರುವುದು ಅರಣ್ಯ ಇಲಾಖೆ ಪತ್ತೆ ಮಾಡಿದೆ.

ಭೀಮಗಡ ಅಭಯಾರಣ್ಯ ವ್ಯಾಪ್ತಿ ಗವಾಳಿ ಗ್ರಾಮದ ತಳೇವಾಡಿ ಮಜಿರೆಯಲ್ಲಿ ಈ ಅಕ್ರಮ ನಡೆದಿದೆ.

ಇಲ್ಲಿ ಸ್ಥಳಾಂತರಕ್ಕೆ ಅರ್ಜಿ ಸಲ್ಲಿಸಿದ್ದ 57 ಕುಟುಂಬಗಳ ಪೈಕಿ 32 ಕುಟುಂಬಗಳು ಸ್ಥಳಾಂತರಗೊಳ್ಳಲು ಒಪ್ಪಿಗೆ ನೀಡಿದ್ದು, 27 ಕುಟುಂಬಗಳಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ. ಆದರೆ, ಪರಿಹಾರ ಪಡೆದಿರುವ ಕುಟುಂಬಗಳ ಪೈಕಿ ಹಲವು ಕುಟುಂಬಗಳು ಪರಿಹಾರ ಪಡೆಯಲು ಕಾನೂನು ಪ್ರಕಾರ ಅನರ್ಹ ಎಂಬುದು ತಡವಾಗಿ ಇಲಾಖೆಯ ಗಮನಕ್ಕೆ ಬಂದಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ತಳೇವಾಡಿಯ ಸರ್ವೇ ಸಂಖ್ಯೆ 49,49,50,52 ರಲ್ಲಿ 8.17 ಹೆಕ್ಟೇರ್ ಜಮೀನನ್ನು ಹಾಸನ ಜಿಲ್ಲೆಯ ಎಂ.ಎಂ.ಸುರೇಶ್ ಎಂಬುವರಿಗೆ ಪರಿಹಾರಾತ್ಮಕ ಅರಣ್ಯೀಕರಣ ಉದ್ದೇಶಕ್ಕಾಗಿ ಪರಭಾರೆ ಮಾಡಿದ್ದು, ಈ ಜಮೀನಿನಲ್ಲಿ ವಾಸವಿರುವ ಕುಟುಂಬಗಳಿಗೂ ಪರಿಹಾರದ ಮೊತ್ತ ತಲಾ ₹10 ಲಕ್ಷ ನೀಡಲಾಗಿದೆ. ಕಾನೂನಿನ ಪ್ರಕಾರ ಇದಕ್ಕೆ ಅವಕಾಶವಿಲ್ಲ ಎಂದು ಮೂಲಗಳು ಹೇಳಿವೆ.

ಅರಣ್ಯ ಸಂರಕ್ಷಣಾ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಪರಿಹಾರಾತ್ಮಕ ಅರಣ್ಯೀಕರಣಕ್ಕಾಗಿ ಅರಣ್ಯೇತರ ಭೂಮಿ ಖರೀದಿಗೆ ಅವಕಾಶವಿದೆ. ಈ ಜಮೀನು (ಮಜಿರೆ) ಪರಿಹಾರಾತ್ಮಕ ಅರಣ್ಯೀಕರಣ ಉದ್ದೇಶಕ್ಕೆ ಖರೀದಿಸಲು ಯೋಗ್ಯವಾಗಿದೆ ಎಂದು ಬೆಳಗಾವಿ ಡಿಸಿಎಫ್ ಅವರೇ ಪ್ರಮಾಣಪತ್ರ ನೀಡಿದ್ದಾರೆ. ಆದರೆ, ನಂತರ ಆ ಭೂಮಿಯನ್ನು ‘ಅರಣ್ಯವಾಸಿಗಳ ಮನೆ’ ಎಂದು ದಾಖಲೆಗಳಲ್ಲಿ ತೋರಿಸಿ, ಸುಮಾರು ₹1 ಕೋಟಿ ಪರಿಹಾರ ನೀಡಲಾಗಿದೆ. ಇದು ಅಕ್ರಮ ಎಂದು ಮೂಲಗಳು ಹೇಳಿವೆ.

ಪರಿಹಾರ ಪಡೆದ ಕುಟುಂಬಗಳಲ್ಲಿ ಪೈಕಿ ಹಲವು ಕುಟುಂಬಗಳು ಗ್ರಾಮಠಾಣ ವ್ಯಾಪ್ತಿಯಲ್ಲಿವೆ. ಇವರಲ್ಲಿ ಕೆಲವೇ ಮಂದಿಗೆ ಮಾತ್ರ ಸ್ವಂತ ಜಮೀನು ಇದೆ. ಪರಿಹಾರ ನೀಡುವ ಸಂದರ್ಭದಲ್ಲಿ ಅಭಯಾರಣ್ಯದಲ್ಲಿ ಜಮೀನು ಹೊಂದಿರುವ ಹಾಗೂ ನಿಜಕ್ಕೂ ಸ್ಥಳಾಂತರಗೊಳ್ಳಬೇಕಿದ್ದ 30 ಕ್ಕೂ ಹೆಚ್ಚು ಕುಟುಂಬಗಳಿಗೆ ಪರಿಹಾರವೇ ಸಿಕ್ಕಿಲ್ಲ ಎಂದು ತಿಳಿಸಿವೆ.

‘ಈ ಅವಾಂತರಕ್ಕೆಲ್ಲ ಬೆಳಗಾವಿಯ ಹಿಂದಿನ ಡಿಸಿಎಫ್ ಮರಿಯಾ ಕ್ರಿಸ್ತರಾಜು ಅವರ ನಿರ್ಧಾರಗಳೇ ಕಾರಣ. ಸ್ಥಳಾಂತರಕ್ಕೆ ಗ್ರಾಮಸಭೆಯ ಒಪ್ಪಿಗೆ ಪಡೆಯದೇ, ‘ಅರಣ್ಯ ಹಕ್ಕು ಕಾಯ್ದೆ 2006’ ರ ಅಡಿ ಪ್ರಕ್ರಿಯೆ ನಡೆಸದೇ ಜಿಲ್ಲಾಧಿಕಾರಿಗಳ ಸಮಿತಿ ಮುಂದೆ ಪ್ರಸ್ತಾವ ಮಂಡಿಸಿದ್ದರು. ಇದಕ್ಕೆ ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡಿದ್ದರು. ಆದರೆ, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಫಲಾನುಭವಿಗಳಿಗೆ ಚೆಕ್ ವಿತರಿಸಲು ಬರುತ್ತಾರೆ ಎಂಬ ಮಾಹಿತಿ ಸಿಕ್ಕಿದ ತಕ್ಷಣ ತರಾತುರಿಯಲ್ಲಿ ನೇರಸಾ ಗ್ರಾಮ ಪಂಚಾಯತ್ನಲ್ಲಿ ಗ್ರಾಮಸಭೆ ನಡೆಸಲಾಯಿತು’ ಎಂದು ಮೂಲಗಳು ತಿಳಿಸಿವೆ.

ಕಳೆದ ಮೇ 17 ರಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ತಲಾ ₹10 ಲಕ್ಷ ಪರಿಹಾರದ ಚೆಕ್ ವಿತರಿಸಿದ್ದರು.

ಉತ್ತರಕನ್ನಡ ಜಿಲ್ಲೆಯ ಕಾಳಿ ಹುಲಿ ಮೀಸಲು ಪ್ರದೇಶದಲ್ಲಿ ಅರಣ್ಯವಾಸಿಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಕಾಂಪಾ ನಿಧಿ ದುರ್ಬಳಕೆ ಆರೋಪದ ತನಿಖೆಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಲಾಗಿದೆ. ಇದೀಗ ಭೀಮಗಡದ ಪ್ರಕರಣ ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.