ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ₹88.9 ಕೋಟಿ ಅಕ್ರಮ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಹಿಂದಿನ ಪ್ರಧಾನ ವ್ಯವಸ್ಥಾಪಕ ಬಿ.ಕೆ.ನಾಗರಾಜಪ್ಪ ಮತ್ತು ಹಿಂದಿನ ವ್ಯವಸ್ಥಾಪಕ ನಿರ್ದೇಶಕಿ ಆರ್.ಲೀಲಾವತಿ ವಿರುದ್ಧ ಇ.ಡಿಯು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ.

‘ಬಿ.ಕೆ.ನಾಗರಾಜಪ್ಪ ಮತ್ತು ಆರ್.ಲೀಲಾವತಿ ಅವರು ತಾವು ಅಧಿಕಾರಲ್ಲಿದ್ದಾಗ ಫಲಾನುಭವಿಗಳ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ತಮ್ಮ ಆಪ್ತರು ಮತ್ತು ಸಂಬಂಧಿಗಳ ಖಾತೆಗಳಿಗೆ ಕೋಟ್ಯಂತರ ರೂಪಾಯಿ ವರ್ಗಾಯಿಸಿಕೊಂಡಿದ್ದರು’ ಎಂದು ನ್ಯಾಯಾಲಯಕ್ಕೆ ವಿವರ ಸಲ್ಲಿಸಿದೆ. ‘ನಾಗರಾಜಪ್ಪ ಅವರ ಪಾಲುದಾರಿಕೆ ಇರುವ ‘ನ್ಯೂ ಕ್ರೀಮ್’ ‘ಆದಿತ್ಯಾ ಕಂಪನಿ’ ‘ಅನ್ನಿಕಾ ಎಂಟರ್ಪ್ರೈಸಸ್’ ‘ಹರ್ನಿತಾ ಕ್ರಿಯೇಷನ್ಸ್’ ಮತ್ತು ‘ಸೋಮೇಶ್ವರ ಎಂಟರ್ಪ್ರೈಸಸ್’ ಎಂಬ ಕಂಪನಿಗಳಿಗೆ ನಿಗಮದ ಹಣವನ್ನು ವರ್ಗಾವಣೆ ಮಾಡಿಕೊಳ್ಳಲಾಗಿದೆ.

ಆ ಹಣವನ್ನು ನಾಗರಾಜಪ್ಪ ಮತ್ತು ಇತರರು ಬಳಸಿಕೊಂಡಿದ್ದಾರೆ’ ಎಂದು ವಿವರಿಸಿದೆ. ‘ಅಕ್ರಮದ ಹಣದಿಂದ ನಾಗರಾಜಪ್ಪ ಚರಾಸ್ತಿ ಮತ್ತು ಸ್ಥಿರಾಸ್ತಿ ಖರೀದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ₹27.27 ಕೋಟಿ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ಇ.ಡಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.