ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಬೂತ್‌ ಸಮಿತಿಗಳನ್ನು ರಚಿಸಲು ಬಿಜೆಪಿ ತೀರ್ಮಾನ!

Last Updated 22 ಜನವರಿ 2023, 20:05 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಬೂತ್‌ ಸಮಿತಿಗಳನ್ನು ರಚಿಸಲು ಬಿಜೆಪಿ ತೀರ್ಮಾನಿಸಿದೆ. ಈ ಚುನಾವಣೆಯಲ್ಲಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

ಮುಸ್ಲಿಮರು ಹೆಚ್ಚು ಇರುವೆಡೆ ಬೂತ್‌ಗಳನ್ನು ತೆರೆಯಲು ಬಿಜೆಪಿಗೆ ಆ ಸಮುದಾಯದ ಕಾರ್ಯಕರ್ತರು ಸಿಗುತ್ತಿರಲಿಲ್ಲ. ಹೀಗಾಗಿ ಅಲ್ಲಿ ಬಿಜೆಪಿಗೆ ಮತಗಳು ಬೀಳುತ್ತಿರಲಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಈಗ ಅಲ್ಲಿಯೂ ಒಂದಷ್ಟು ಮತಗಳನ್ನು ಪಡೆಯಲು ಚಿಂತನೆ ನಡೆಸಿರುವುದಾಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

ರಾಜ್ಯದಲ್ಲಿ 58 ಸಾವಿರ ಮತಗಟ್ಟೆಗಳಿವೆ. ಈವರೆಗೆ 51 ಸಾವಿರ ಮತಗಟ್ಟೆಗಳ ವ್ಯಾಪ್ತಿಯಲ್ಲಿ ‘ಬೂತ್‌ ಸಮಿತಿ’ಗಳನ್ನು ರಚಿಸಲಾಗಿದೆ. ಪ್ರತಿ ಬೂತ್‌ ಸಮಿತಿಯಲ್ಲೂ ಎಸ್‌ಸಿ, ಎಸ್‌ಟಿ, ಒಬಿಸಿಯವರು ಸೇರಿ 12 ಸದಸ್ಯರಿರುತ್ತಾರೆ. 51 ಸಾವಿರ ಬೂತ್‌ ಸಮಿತಿಗಳಲ್ಲಿ 6 ಲಕ್ಷ ಸದಸ್ಯರಿದ್ದಾರೆ ಎಂದರು.

ಬೂತ್‌ ಸಮಿತಿಗಳ ಉಸ್ತುವಾರಿಗೆ ಸುಮಾರು 10 ಸಾವಿರ ಮಂದಿ ವಿಸ್ತಾರಕರನ್ನು ನೇಮಿಸಲಾಗಿದೆ. ಪ್ರತಿ ಮತದಾರರ ಪಟ್ಟಿಗೆ ಒಬ್ಬ ‘ಪೇಜ್‌ ಪ್ರಮುಖ್’ ನೇಮಿಸಲಾಗಿರುತ್ತದೆ. ಇವರು ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿ ಗರಿಷ್ಠ ಮತದಾನ ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಹೊಂದಿರುತ್ತಾರೆ. ಮತದಾನದ ಪ್ರಮಾಣ ಶೇಕಡ 65ಕ್ಕೂ ಹೆಚ್ಚು ದಾಟುವಂತೆ ನೋಡಿಕೊಳ್ಳುವುದು ಬೂತ್‌ ಸಮಿತಿಗಳ ಸದಸ್ಯರ ಕೆಲಸ ಎಂದು ಸಿದ್ದರಾಜು ವಿವರಿಸಿದರು. ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ‘ಮಿಸ್ಡ್‌ ಕಾಲ್‌’ ಮೂಲಕ ಸದಸ್ಯತ್ವದ ಅಭಿಯಾನವೂ ನಡೆಯಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT