ವಿಜಯಪುರ: ‘ಕರ್ನಾಟಕದಲ್ಲಿ ಯಡಿಯೂರಪ್ಪನವರ ಅಸ್ತಿತ್ವ ಉಳಿದಿಲ್ಲ ಎಂಬುದು ಗೃಹ ಸಚಿವ ಅಮಿತ್ ಶಾ ಅವರು ತಿಳಿದುಕೊಳ್ಳಬೇಕು, ಅಮಿತ್ ಶಾ ಅವರು ಇನ್ನೂ ಕೂಡ ಯಡಿಯೂರಪ್ಪಾಜಿ, ಯಡಿಯೂರಪ್ಪಾಜಿ.. ಎಂದರೆ ರಾಜ್ಯದಲ್ಲಿ ಬಿಜೆಪಿಗೆ ಮುಂದೆ ಬಹಳ ಹೀನಾಯವಾದ ಸೋಲಾಗುತ್ತದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ತುಂಬಿತುಳುಕುತ್ತಿದೆ. ಬಿಜೆಪಿ ಸಂಘಟನೆ ಉಳಿದುಕೊಂಡಿಲ್ಲ. ಪಕ್ಷದ ಯಾವುದೇ ಹೋರಾಟಗಳಲ್ಲೂ 10-15 ಜನ ಸಹ ಸೇರುತ್ತಿಲ್ಲ. ಮಿತ್ರಪಕ್ಷ ಜೆಡಿಎಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ರಾಜ್ಯದಲ್ಲಿ ನಾಯಕತ್ವವೇ ಸರಿಯಿಲ್ಲ’ ಎಂದು ಆರೋಪಿಸಿದರು.

‘ಕಾಂಗ್ರೆಸ್ ಸರ್ಕಾರ ಬಿಜೆಪಿ ಕಾರ್ಯಕರ್ತರ ಮೇಲೆ ನಿತ್ಯ ಕೇಸ್ಗಳನ್ನು ಹಾಕುತ್ತಿದೆ. ಪಕ್ಷದ ಕಾರ್ಯಕರ್ತರು ಹಿಂದುತ್ವದ ಸಲುವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ, ಯಡಿಯೂರಪ್ಪ ಮೊಮ್ಮಗನ ಮದುವೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜಮೀರ್ ಅಹಮದ್ ಅವರೊಂದಿಗೆ ಸಂತೋಷವಾಗಿದ್ದಾರೆ. ಇದು ಕಾರ್ಯಕರ್ತರಿಗೆ ಯಾವ ಸಂದೇಶ ನೀಡುತ್ತದೆ, ಅವರೊಂದಿಗೆ ಅಷ್ಟು ಆತ್ಮೀಯತೆ ಇದ್ದರೆ, ಬಿಜೆಪಿಯಿಂದ ಹೊರಹೋಗಿ ಕಾಂಗ್ರೆಸ್ ಸೇರಿಕೊಳ್ಳಲಿ, ಹಿಂದೂ ಕಾರ್ಯಕರ್ತರ ಬಲಿ ತೆಗೆದುಕೊಳ್ಳಬೇಡಿ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.