ಬೆಂಗಳೂರು: ಖಾಸಗಿ ವಾಹಿನಿಯೊಂದು ನಡೆಸುವ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸಿರುವ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು, ವಿಶೇಷ ಆಹ್ವಾನ ನೀಡಿದರೆ ಮೂರು–ನಾಲ್ಕು ದಿನಗಳ ಮಟ್ಟಿಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಹೋದರೆ ರಾಜಕಾರಣದಲ್ಲಿ ಕಿಡಿ ಹೊತ್ತುವಂತೆ ಮಾಡುತ್ತೇನೆ. ಆ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತನನ್ನಾಗಿ ಮಾಡಿದರೆ ಖಂಡಿತಾ ಹೋಗುತ್ತೇನೆ’ ಎಂದು ಹೇಳಿದರು.

ಕಾರ್ಯಕ್ರಮದ ನಿರೂಪಕರು 6ನೇ ಸೀಸನ್‌ಗೆ ಆಹ್ವಾನಿಸಿದ್ದರು. ಆಗ ನನಗ ಆರೋಗ್ಯ ಸರಿ ಇಲ್ಲದ ಕಾರಣ ಭಾಗವಹಿಸಲು ಆಗಿರಲಿಲ್ಲ. ಈಗ ಸಿದ್ಧನಿದ್ದೇನೆ. ರಾಜಕಾರಣ ಬಗ್ಗೆ ಶಿಕ್ಷಣ ನೀಡುತ್ತೇನೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಪ್ತರು ಸಲಹೆ ನೀಡಿದ್ದಾರೆ. ವೇದಿಕೆಯನ್ನು ಕ್ರಿಯಾಶೀಲವಾಗಿ ಬಳಸಿಕೊಳ್ಳುವ ಆದೆ ಇದೆ ಎಂದರು.

ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ ಅದರಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಹೆಚ್ಚು ದಿನಗಳನ್ನು ಬಿಗ್‌ಬಾಸ್‌ನಲ್ಲಿ ಕಳೆಯಲು ಸಾಧ್ಯವಿಲ್ಲ ಎಂದೂ ವಿಶ್ವನಾಥ್ ಹೇಳಿದರು.

ಧರ್ಮೇಗೌಡ ಅವರ ನಿಧನದಿಂದ ಖಾಲಿ ಇರುವ ಸ್ಥಾನಕ್ಕೆ ನನಗೆ ಅವಕಾಶ ನೀಡುವಂತೆ ಕೋರಿಕೆ ಸಲ್ಲಿಸಿದ್ದೇನೆ. ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೂ ತಂದಿದ್ದೇನೆ. ಸುಪ್ರೀಂಕೋರ್ಟ್‌ನ ಶಾಪದಿಂದ ವಿಮೋಚನೆ ಆಗಲು ಇದೊಂದು ಅವಕಾಶ ನೀಡಬೇಕು. ಚುನಾವಣೆ ಮೂಲಕ ಆಯ್ಕೆಗೆ ಇದೊಂದು ಅವಕಾಶವಿದೆ ಎಂದು ತಿಳಿಸಿದರು.

ಸರ್ಕಾರದಲ್ಲಿ ಯಾವುದೇ ಜವಾಬ್ದಾರಿಯನ್ನು ನೀಡಿದರೂ ಸಮರ್ಥವಾಗಿ ನಿಭಾಯಿಸಬಲ್ಲೆ. ನನಗೆ ಕನಿಷ್ಠ ಮೂರುವರೆ ವರ್ಷ ಅವಕಾಶ ನೀಡಬೇಕು. ಆಗಿರುವ ವ್ಯತ್ಯಾಸವನ್ನು ಸರಿಪಡಿಸಬೇಕು ಎಂದು ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.