ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಡಿಕೆಶಿ ಗೂಂಡಾ..ED ಅರ್ಧ ಸೆಟ್ಲ್‌ಮೆಂಟ್ ಮಾಡಿದೆ, ಇನ್ನರ್ಧ ಮಾಡಲಿದೆ'– ಈಶ್ವರಪ್ಪ

ಜಾಮೀನಿನ ಮೇಲೆ ಹೊರಗಿರುವ ಡಿಕೆಶಿ, ಮತ್ತೆ ಜೈಲಿಗೆ ಹೋಗೇ ಹೋಗುತ್ತಾರೆ. ಆಗ ಪೂರ್ಣ ಸೆಟ್ಲ್‌ಮೆಂಟ್ ಆಗುತ್ತದೆ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ತಿರುಗೇಟು
Published 11 ಫೆಬ್ರುವರಿ 2024, 12:42 IST
Last Updated 11 ಫೆಬ್ರುವರಿ 2024, 12:42 IST
ಅಕ್ಷರ ಗಾತ್ರ

ಮೈಸೂರು: ‘ನನಗೆ ಸೆಟ್ಲ್‌ಮೆಂಟ್ ಮಾಡುತ್ತೇನೆ ಎಂದು ಹೇಳಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಬ್ಬ ಗೂಂಡಾ’ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡದ್ದಾರೆ.

ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಸೆಟ್ಲ್‌ಮೆಂಟ್‌ ಮಾಡುತ್ತೇನೆ ಎಂದರೆ ಏನರ್ಥ? ಸಿನಿಮಾದಲ್ಲಿ ಹೇಳುವಂತೆ ಡೈಲಾಗ್‌ ಹೇಳಿದ್ದಾರೆ’ ಎಂದರು.

‘ನಾನು ಡಿಸಿಎಂ ಸಹೋದರ ಮತ್ತು ಸಂಸದ ಎಂಬ ದುರಹಂಕಾರದಲ್ಲಿ ಡಿ.ಕೆ. ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡಿದ್ದರು. ಕೂಡಲೇ ಅವರಿಗೆ ನೋಟಿಸ್ ನೀಡಿ ಬಂಧಿಸಬೇಕಿತ್ತು. ಆದರೆ, ನನಗೆ ನೋಟಿಸ್ ಕೊಟ್ಟಿದ್ದಾರೆ. ಶಿವಕುಮಾರ್‌ ಅವರು ನನ್ನ ವಿರುದ್ಧ ಗೂಂಡಾಗಳು ಬಳಸುವಂತಹ ಪದ ಪ್ರಯೋಗಿಸಿದ್ದಾರೆ. ಅರ್ಧ ಸೆಟ್ಲ್‌ಮೆಂಟ್ ಮಾಡಿದ್ದೇನೆ, ಪೂರ್ಣ ಮಾಡುತ್ತೇನೆ ಎಂದಿದ್ದಾರೆ’ ಎಂದರು.

‘ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರಿದ್ದರೆ ನಾನು ರಾಜಕಾರಣದಲ್ಲಿ ಇರುತ್ತಿರಲಿಲ್ಲ. ಅವರಿಗೆ ಅರ್ಧ ಸೆಟ್ಲ್‌ಮೆಂಟ್ ಈಗಾಗಲೇ ಆಗಿದ್ದು, ಜಾರಿ ನಿರ್ದೇಶನಾಲಯ ಮಾಡಿದೆ. ಇನ್ನರ್ಧ ಶೀಘ್ರದಲ್ಲೇ ಆಗುತ್ತದೆ. ಜಾಮೀನಿನ ಮೇಲೆ ಹೊರಗಿರುವ ಅವರು, ಮತ್ತೆ ಜೈಲಿಗೆ ಹೋಗೇ ಹೋಗುತ್ತಾರೆ. ಆಗ ಪೂರ್ಣ ಸೆಟ್ಲ್‌ಮೆಂಟ್ ಆಗುತ್ತದೆ’ ಎಂದು ಗುಡುಗಿದರು.

‘ರಾಜ್ಯ ಕಾಂಗ್ರೆಸ್‌ ಸರ್ಕಾರ ಬದುಕಿಲ್ಲ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT