ಇವರಿಗೆ ತಕ್ಷಣದಲ್ಲೇ ಏಕೆ ಪುನರ್ವಸತಿ ಮಾಡಬೇಕು? ಮನೆ ಇಲ್ಲದವರು ಸಾಕಷ್ಟು ಜನ ಇದ್ದಾರೆ. ಕೋಗಿಲು ಸಂತ್ರಸ್ತರು ಮಾತ್ರ ₹2.50 ಲಕ್ಷ ಕಟ್ಟಬೇಕು ಎಂದು ನಿರ್ಣಯ ಮಾಡುವ ಬದಲಿಗೆ ಎಲ್ಲರಿಗೂ ಒಂದೇ ಕಾನೂನು ಮಾಡಿ. ಬೆಂಗಳೂರಿನಲ್ಲಿ 40 ಕಡೆಗಳಲ್ಲಿ ವಸತಿ ಸಮುಚ್ಛಯ ನಿರ್ಮಾಣ ಆಗುತ್ತಿದೆ. ಎಲ್ಲ ಫಲಾನುಭವಿಗಳಿಗೂ ರಿಯಾಯಿತಿ ನೀಡಬೇಕು. ಇಡೀ ಬೆಂಗಳೂರನ್ನು ಒಂದೇ ರೀತಿ ನೋಡಬೇಕು.
ಎಸ್.ಟಿ. ಸೋಮಶೇಖರ್ ಬಿಜೆಪಿ ಉಚ್ಛಾಟಿತ ಶಾಸಕ
ರಾಜ್ಯ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಕೋಗಿಲು ಬಡಾವಣೆಯಲ್ಲಿ 15–20 ವರ್ಷಗಳಿಂದ ಜನ ವಾಸ ಇದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಎಷ್ಟು ಜನ ಅಲ್ಲಿ ಎಷ್ಟು ವರ್ಷಗಳಿಂದ ವಾಸವಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗ ಸಂತ್ರಸ್ತರಿಗೆ ಮನೆ ಕೊಡಲು ಸರ್ಕಾರ ಸಿದ್ಧವಿಲ್ಲ. ವಲಸಿಗರ ಸಂಖ್ಯೆಯನ್ನು ಉದ್ದೇಶ ಪೂರ್ವಕವಾಗಿಯೇ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ಮನೆ ಹಂಚುವ ಮೂಲಕ ಓಲೈಕೆಗೆ ಮುಂದಾಗಿದೆ.