ಬೆಂಗಳೂರು: ರಾಜ್ಯ ಬಿಜೆಪಿ ಘಟಕವುತನ್ನಶಾಸಕರಿಗಾಗಿ ದೊಡ್ಡಬಳ್ಳಾಪುರ ರಸ್ತೆಯ ಹೋಟೆಲ್‌ವೊಂದರಲ್ಲಿ 30 ಕೊಠಡಿಗಳನ್ನು ಕಾದಿರಿಸಿದೆ ಎಂದು ವರದಿಯಾಗಿದೆ.

ಈ ಕುರಿತು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್‌ಐ ಭಾನುವಾರ ರಾತ್ರಿ ವರದಿ ಪ್ರಕಟಿಸಿದೆ. ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ‘ರಮಾಡ’ ಹೋಟೆಲ್‌ನಲ್ಲಿ ರಾಜ್ಯ ಬಿಜೆಪಿಯುಎರಡು ದಿನಗಳ ಮಟ್ಟಿಗೆ 30 ಕೊಠಡಿಗಳನ್ನು ಕಾದಿರಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಬಿಜೆಪಿ ಕೊಠಡಿಗಳನ್ನು ಯಾವ ದಿನದಿಂದ ಯಾವ ದಿನಕ್ಕೆ ಕಾದಿರಿಸಿದೆ ಎಂಬುದರ ಬಗ್ಗೆ ಎಎನ್‌ಐ ಬರೆದಿಲ್ಲ. ಈ ಕುರಿತ ಮಾಹಿತಿ ಸ್ಪಷ್ಟವಾಗಿದೆ.

ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಕ್ರಾಂತಿಯ ಹಿಂದೆ ಬಿಜೆಪಿ ಇದೆ ಎಂಬ ಮಾತುಗಳು ಕೇಳಿ ಬಂದಿವೆ. ಹೀಗಿರುವಾಗಲೇ ಬಿಜೆಪಿಯು ಕೊಠಡಿ ಕಾದಿರಿಸುವುದು ಭಾರಿ ಅನುಮಾನಗಳಿಗೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.