ಬೆಳಗಾವಿ: ಆರಂಭಿಕ ಬ್ಯಾಟರ್ ಪ್ರಕಾಶ ಜಯರಾಮಯ್ಯ ದ್ವಿಶತಕದ ನೆರವಿನಿಂದ ಕರ್ನಾಟಕ ಅಂಧರ ಕ್ರಿಕೆಟ್ ತಂಡವು ಇಲ್ಲಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಮಂಗಳವಾರ ನಡೆದ ಪುರುಷರ ರಾಷ್ಟ್ರಮಟ್ಟದ ಅಂಧರ ಟಿ20 ಟೂರ್ನಿಯಲ್ಲಿ ಮಹಾರಾಷ್ಟ್ರ ತಂಡದ ವಿರುದ್ಧ 145 ರನ್ಗಳಿಂದ ಜಯಿಸಿತು.

ಸಮರ್ಥನಂ ಅಂಗವಿಕಲರ ಸಂಸ್ಥೆ, ಪ್ರಜಾವಾಣಿ, ಇಂಡಸ್ಇಂಡ್ ಬ್ಯಾಂಕ್, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್, ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಸಹಯೋಗದಲ್ಲಿ ನಡೆದ ‘ನಾಗೇಶ ಟ್ರೋಫಿ’ಯ ಲೀಗ್ ಪಂದ್ಯದಲ್ಲಿ ಆತಿಥೇಯ ತಂಡ ಸತತ ಮೂರನೇ ದಿನ ಜಯಿಸಿತು.

ಟಾಸ್ ಗೆದ್ದ ಕರ್ನಾಟಕ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪ್ರಕಾಶ (ಔಟಾಗದೆ 220 ರನ್, 84 ಎಸೆತ, 47 ಬೌಂಡರಿ) ಅಬ್ಬರದ ಬ್ಯಾಟಿಂಗ್ನಿಂದಾಗಿ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿತು. ಆರ್.ಸುನೀಲ್ (ಔಟಾಗದೆ 46 ರನ್, 16 ಎಸೆತ, 8 ಬೌಂಡರಿ) ಉತ್ತಮ ಆಟವಾಡಿದರು.

ಗುರಿ ಬೆನ್ನಟ್ಟಿದ ಮಹಾರಾಷ್ಟ್ರ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167 ರನ್ ಕಲೆಹಾಕಿತು. ರೋಹಿತ್ ಭರ್ಗುನೆ(59 ರನ್, 49 ಎಸೆತ, 5 ಬೌಂಡರಿ) ಅರ್ಧಶತಕ ಬಾರಿಸಿದರು. ಆದರೂ ಗೆಲುವಿನ ದಡ ತಲುಪಲಿಲ್ಲ.

ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ, ಪಶ್ಚಿಮ ಬಂಗಾಳ ತಂಡವು ಉತ್ತರಪ್ರದೇಶ ವಿರುದ್ಧ 7 ವಿಕೆಟ್ಗಳ ಅಂತರದಿಂದ ಗೆದ್ದಿತು. ಉತ್ತರಪ್ರದೇಶ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಪಶ್ಚಿಮ ಬಂಗಾಳ 19.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ ಗೆದ್ದಿತು.

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 20 ಓವರ್ಗಳಲ್ಲಿ 2 ವಿಕೆಟ್ಗಳಿಗೆ 312 (ಪ್ರಕಾಶ ಜಯರಾಮಯ್ಯ 220, ಆರ್.ಸುನೀಲ್ 46, ಸ್ವಪ್ನಿಲ್ ವಾಘ್ 47ಕ್ಕೆ1)

ಮಹಾರಾಷ್ಟ್ರ: 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 167(ಅಭಿಜಿತ್ ಧೋಬೆ 18, ವಿನೋದ ಮಹಾಲೆ 12, ರೋಹಿತ್ ಭರ್ಗುನೆ ಔಟಾಗದೆ 59, ಪಾಂಡುರಂಗ ಜಂಬೆ 34, ಆರ್.ಸುನೀಲ್ 8ಕ್ಕೆ1, ಎಸ್.ಕೃಷ್ಣಮೂರ್ತಿ 24ಕ್ಕೆ1, ಕೆ.ಎಸ್.ಪುನೀತ್ 9ಕ್ಕೆ1). ಫಲಿತಾಂಶ: ಕರ್ನಾಟಕ ತಂಡಕ್ಕೆ 145 ರನ್ಗಳಿಂದ ಜಯ. ಪಂದ್ಯಶ್ರೇಷ್ಠ: ಪ್ರಕಾಶ ಜಯರಾಮಯ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.