ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಟಿಯರ್ ಕಂಪನಿ ವಾಚ್ ಧರಿಸಿದ್ದು, ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲೂ ಮಾಹಿತಿ ನೀಡಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಫಿಡವಿಟ್ನಲ್ಲಿ ಡಿ.ಕೆ.ಶಿವಕುಮಾರ್ ಅವರು ಒಂದು ರೋಲೆಕ್ಸ್ ವಾಚ್ ಬೆಲೆಯನ್ನು ₹9 ಲಕ್ಷ, ಹ್ಯುಬ್ಲೋ ವಾಚ್ ಬೆಲೆಯನ್ನು ₹23,90,246 ಎಂದು ನಮೂದಿಸಿದ್ದಾರೆ. ಅವರಿಬ್ಬರ ಕೈಯಲ್ಲಿ ಇರುವ ಸಾಂಟೋಸ್ ಕಾರ್ಟಿಯರ್ ಕಂಪನಿಯ ವಾಚ್ ದರ ₹43 ಲಕ್ಷ ಇದೆ. ತೆರಿಗೆ ಸೇರಿ ₹47 ಲಕ್ಷ ಆಗುತ್ತದೆ. ಈ ವಾಚ್ನ ಮಾಹಿತಿ ಅಫಿಡವಿಟ್ನಲ್ಲಿ ಇಲ್ಲ. ಇದು ಕಳವು ಮಾಡಿದ ವಾಚ್ ಇರಬಹುದೇ? ಖರೀದಿಸಿದ್ದರೆ ಈ ಬಗ್ಗೆ ದಾಖಲೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ವಾಚ್ಗಳ ಪ್ರಿಯರು, ಅವರ ವಾಚ್ಗಳು ಕೋಟ್ಯಂತರ ಮೌಲ್ಯದ್ದಾಗಿವೆ. ಲಕ್ಷಾಂತರ ಬೆಲೆಯ ಶೂ ಖರೀದಿಸಿದ್ದಾರೆ. ಒಂದೂವರೆ ವರ್ಷಗಳ ಹಿಂದೆ ಎಂಟು ವಾಚ್ಗಳಿದ್ದವು. ಈಗ 18ರಿಂದ 19 ವಾಚ್ಗಳಿವೆ ಎಂಬ ಮಾಹಿತಿ ಸಿಕ್ಕಿದೆ. ಎಲ್ಲ ವಾಚ್ಗಳ ಖರೀದಿಯ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.