ಗಂಗಾವತಿ (ಕೊಪ್ಪಳ ಜಿಲ್ಲೆ): ‘ನರೇಂದ್ರ ಮೋದಿಸುಳ್ಳನ್ನೇಬಂಡವಾಳ ಮಾಡಿಕೊಂಡಿದ್ದಾನೆ. ಇಡೀ ದೇಶವನ್ನೇ ಲೂಟಿ ಮಾಡುತ್ತಿದ್ದಾನೆ. ದೇಶಕ್ಕೆ ಮಾರಕವಾಗಿರುವ ಈ ವ್ಯಕ್ತಿಯನ್ನು ಸೋಲಿಸಿ ಗುಜರಾತಿಗೆ ಓಡಿಸಬೇಕು’ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಏಕವಚನದಲ್ಲಿ ಹರಿಹಾಯ್ದರು.

ತಾಲ್ಲೂಕಿನ ಶ್ರೀರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,‘ಪ್ರಸ್ತುತ ಚುನಾವಣೆಯಲ್ಲಿಯೂ ಕೂಡಾ ಇವಿಎಂ ಮತ್ತು ವಿವಿ ಪ್ಯಾಟ್ ಬಗ್ಗೆ ಅನುಮಾನ ಇದೆ.ಮತದಾನದ ಬಗ್ಗೆಯೂ ಸಂಶಯ ಮೂಡುವಂತೆ ಮಾಡಿದ್ದು ಮೋದಿ ಸಾಧನೆ. ಮೋದಿ ಗೆದ್ದರೆ ಈ ದೇಶ ಸುರಕ್ಷಿತವಾಗಿರಲ್ಲ. ದೌರ್ಜನ್ಯ–ದಬ್ಬಾಳಿಕೆ ಮತ್ತಷ್ಟು ಹೆಚ್ಚಾಗುತ್ತವೆ’ ಎಂದರು.

ಪ್ರಧಾನಿ ರೇಸ್‌ನಲ್ಲಿ ಇಲ್ಲ: ‘ನಾನು ಪ್ರಧಾನಿ ರೇಸ್‌ನಲ್ಲಿ ಇರುವ ವ್ಯಕ್ತಿಯಲ್ಲ. ದೇಶಕ್ಕೆ ಸೂಕ್ತ ಪ್ರಧಾನಿಯ ಅಗತ್ಯವಿದೆ. ಆ ಕಾರಣಕ್ಕೆ ನಾವೆಲ್ಲ ಸೇರಿ ಮಹಾ ಮೈತ್ರಿಕೂಟ ರಚಿಸಿಕೊಂಡಿದ್ದೇವೆ. ರಾಹುಲ್ ಗಾಂಧಿ ಪ್ರಧಾನಿ ಸ್ಥಾನಕ್ಕೆ ಯೋಗ್ಯ ಅಲ್ಲ ಎನ್ನುತ್ತಾರೆ ಮೋದಿ. ಆದರೆ ಆ ಸ್ಥಾನಕ್ಕೆ ಅವರು ಯೋಗ್ಯರಾ’ ಎಂದು ನಾಯ್ಡು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.