ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ–3: ಆ 18 ನಿಮಿಷಗಳ ಮಹಾಯುದ್ಧ

Published 23 ಆಗಸ್ಟ್ 2023, 21:32 IST
Last Updated 23 ಆಗಸ್ಟ್ 2023, 21:32 IST
ಅಕ್ಷರ ಗಾತ್ರ

ಬೆಂಗಳೂರು: ಕೊನೆಯ ಆ 18 ನಿಮಿಷಗಳು ಇಸ್ರೊ ವಿಜ್ಞಾನಿಗಳ ಪಾಲಿಗೆ ಮಹಾಭಾರತದ 18 ದಿನಗಳ ಮಹಾಯುದ್ಧದಂತೆ ಭಾಸವಾಗಿತ್ತು. ಚಂದ್ರನ ಕಕ್ಷೆಯಿಂದ 30 ಕಿ.ಮೀ.ಗೆ ಹೋಗಿ ನಿಂತ ವಿಕ್ರಮನ ಪ್ರಯಾಣ ರೋಚಕವಾಗಿತ್ತು. ಎಲ್ಲರ ಎದೆ ಬಡಿತ ಹೆಚ್ಚಿಸಿ, ಉಸಿರು ಬಿಗಿ ಹಿಡಿಯುವಂತೆ ಮಾಡಿತ್ತು. ತಂತ್ರಜ್ಞಾನ, ವಿಜ್ಞಾನಿಗಳ ಪ್ರತಿಭೆಯ ಪಾರಮ್ಯದ ಅನಾವರಣ ಈ ಅಂತಿಮ ಕ್ಷಣ ಆಗಿತ್ತು. ಲ್ಯಾಂಡಿಂಗ್‌ಗಾಗಿ ಇಸ್ರೊ 40 ಗಂಟೆಗಳ ತಯಾರಿ ನಡೆಸಿತ್ತು. 18 ನಿಮಿಷಗಳಲ್ಲಿ ಏನೇನಾಯ್ತು. ಇಲ್ಲಿದೆ ವಿವರ–

*ಸಂಜೆ 5.47: ರಫ್‌ ಬ್ರೇಕಿಂಗ್‌ ಹಂತ –

ಲ್ಯಾಂಡರ್‌ ಕಕ್ಷೆ ಬಿಟ್ಟು ಚಂದ್ರನ ಮೇಲ್ಮೈಯಿಂದ 30 ಕಿ.ಮೀ ಎತ್ತರಕ್ಕೆ ಬಂದು ಇಳಿಯಲು ಸಜ್ಜಾಗಿ ನಿಂತಿತ್ತು. ಗಡಿಯಾರದ ಮುಳ್ಳು 5.47ಕ್ಕೆ ಬರುತ್ತಿದ್ದಂತೆ ತನ್ನ ನೆಲೆಯಿಂದ 750 ಕಿ.ಮಿ ದೂರವನ್ನು ಸಮಾನಾಂತರವಾಗಿ ಕ್ರಮಿಸಲು ಆರಂಭಿಸಿತು. ಆಗ ಅದರ ವೇಗ ಸೆಕೆಂಡಿಗೆ 1680 ಮೀಟರ್‌ಗಳಿಂದ 353 ಸೆಕೆಂಡುಗಳಿಗೆ ತಗ್ಗಿಸಲಾಯಿತು. ಕೇವಲ 690 ಸೆಕೆಂಡುಗಳಲ್ಲಿ 30 ನೇ ಕಿ.ಮೀನಿಂದ 7.4 ಕಿ.ಮೀಗೆ ತರಲಾಯಿತು. ಶೇ 20 ರಷ್ಟು ಯಾತ್ರೆ ಪೂರ್ಣಗೊಂಡಿತ್ತು.

* ಸಮಾನಾಂತರದಲ್ಲಿ ಸಾಗಿ ಬಂದು ಬಾಗಿ ಕೆಳಗೆ ಇಳಿಯುವ ತಿರುವಿನಲ್ಲಿ ವೇಗ ಇನ್ನಷ್ಟು ತಗ್ಗಿಸಲಾಯಿತು. ವಿಕ್ರಮ್‌ನ ಸೆನ್ಸರ್‌ಗಳು ಎತ್ತರ, ವೇಗದ ಲೆಕ್ಕವನ್ನು ಹಾಕುತ್ತಲೇ ಇದ್ದವು. ಇತ್ತ ಕಮಾಂಡ್‌ ಸೆಂಟರ್‌ನಲ್ಲಿ ಇಸ್ರೊ ಅತಿರಥ– ಮಹಾರಥ ವಿಜ್ಞಾನಿಗಳು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಈ ವೇಳೆಗೆ ‘ಆಲ್ಟಿಟ್ಯೂಡ್‌ ಹೋಲ್ಡ್‌’ ಹಂತವನ್ನು ಪ್ರವೇಶಿಸಿತ್ತು. ವೇಗ ಗಂಟೆಗೆ 880 ಕಿ.ಮೀ.ಗೆ ತಗ್ಗಿತ್ತು. (ಆರಂಭದ ವೇಗ ಗಂಟೆಗೆ 6,000 ಕಿ.ಮೀ ಇತ್ತು)

* ಸಂಜೆ 5.55:

ಲ್ಯಾಂಡರ್‌ನ ನಾಲ್ಕೂ ಎಂಜಿನ್‌ಗಳು ಉರಿಯಲಾರಂಭಿಸಿದವು. ಆ ವೇಳೆಗಾಗಲೇ ತನ್ನ ನಿಗದಿತ ಗುರಿಯ ಶೇ 60 ರಷ್ಟು ಪ್ರಯಾಣ ಮುಗಿಸಿತ್ತು. ಇನ್ನು 10 ಕಿ.ಮೀ ಮಾತ್ರ ಬಾಕಿ ಉಳಿದಿತ್ತು. ಫೈನ್‌ ಬ್ರೇಕಿಂಗ್‌ ಹಂತವನ್ನು ತಲುಪಿತು. ಈಗ ಲ್ಯಾಂಡರ್‌ ಒಳಗಿನ ಸೆನ್ಸರ್‌ಗಳು ಕಾರ್ಯ ಆರಂಭಿಸಿದವು. ಎತ್ತರವನ್ನು 5.2 ಕಿ.ಮೀಗೆ ಇಳಿಸಲಾಯಿತು.

*ಸಂಜೆ 5.58: ಫೈನ್‌ ಬ್ರೇಕಿಂಗ್ ಹಂತ–

ಈ ಹಂತದಲ್ಲಿ ಲ್ಯಾಂಡರ್‌ನ ಪಾರ್ಶ್ವವನ್ನು ಇಳಿಕೆಗೆ ಅನುಗುಣವಾಗಿ ಬದಲಿಸಲಾಯಿತು.

*ಸಂಜೆ 6.00:

ಲಂಬವಾಗಿ ಇಳಿಯಲು ಸಿದ್ಧತೆ. ಈ ವೇಳೆಗೆ ಚಂದ್ರನ ನೆಲದಿಂದ 800 ಮೀಟರ್‌ಗಳು ಮಾತ್ರ ಉಳಿದಿತ್ತು.

* ಸಂಜೆ 6.01:

ನೆಲದಿಂದ ಸುಮಾರು 200 ಮೀಟರ್‌ ಬಾಕಿ ಇತ್ತು. ಹೆಲಿಕಾಪ್ಟರ್‌ ಮಾದರಿಯಲ್ಲಿ ಹಾರಲಾರಂಬಿಸಿ, ಇಳಿಯಲು ಸಿದ್ಧತೆ ನಡೆಸಿಕೊಂಡಿತು. ಬಳಿಕ 150 ಮೀಟರ್‌ಗೆ ಇಳಿಯಿತು. ಈ ಹಂತದಲ್ಲಿ ಲ್ಯಾಂಡಿಂಗ್‌ ಪ್ರದೇಶದ ಸ್ಥಿತಿಗತಿಯನ್ನು ಸೆನ್ಸರ್‌ ಮೂಲಕ ತಾಜಾ ಮಾಹಿತಿ ಪಡೆದುಕೊಂಡಿತು. ಚಿತ್ರಗಳನ್ನೂ ಕ್ಲಿಕ್ಕಿಸಿಕೊಳ್ಳುತ್ತಿತ್ತು. ಎರಡು ಎಂಜಿನ್‌ಗಳನ್ನು ಉರಿಸಲಾರಂಭಿಸಿತು.

* ಸಂಜೆ 6.03:

ಹೆಲಿಕಾಪ್ಟರ್‌ನಂತೆ ಹಾರುತ್ತಲೇ 50 ಮೀಟರ್‌ಗೆ ತಲುಪಿತು

* ಸಂಜೆ 6.04 :

ನಿಗದಿಯಾದ ಸಮಯಕ್ಕೆ ನೆಲವನ್ನು ಸ್ಪರ್ಶ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT