ಬೆಂಗಳೂರು: ವೃತ್ತಿ ದುರ್ನಡತೆ ತೋರಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಇಬ್ಬರು ವಕೀಲರ ಸನ್ನದು ರದ್ದುಗೊಳಿಸಿದೆ.
‘ಮಂಗಳೂರಿನ ವಕೀಲ ಡಿ.ಪದ್ಮನಾಭ ಕುಮಾರ್ ಅವರ ಸನ್ನದು ರದ್ದುಪಡಿಸಲಾಗಿದ್ದು, ದೇಶದ ಯಾವುದೇ ನ್ಯಾಯಾಲಯ ಅಥವಾ ಪ್ರಾಧಿಕಾರದ ಮುಂದೆ ವಕೀಲಿಕೆ ಮಾಡದಂತೆ ಶಾಶ್ವತವಾಗಿ ತಡೆ ಹಿಡಿಯಲಾಗಿದೆ. ಬೆಳಗಾವಿಯ ಮತ್ತೊಬ್ಬ ವಕೀಲ ಪ್ರಭು ಶಿವಪ್ಪ ಯತ್ನಟ್ಟಿ ಅವರ ಸನ್ನದನ್ನೂ ಶಾಶ್ವತವಾಗಿ ರದ್ದುಪಡಿಸಲಾಗಿದ್ದು, ₹ 20 ಸಾವಿರ ದಂಡ ವಿಧಿಸಲಾಗಿದೆ‘ ಎಂದು ಅಧ್ಯಕ್ಷ ವಿಶಾಲ ರಘು ತಿಳಿಸಿದ್ದಾರೆ.
‘ಈ ಇಬ್ಬರ ವಿರುದ್ಧದ ವೃತ್ತಿ ದುರ್ನಡತೆ ಆರೋಪಗಳ ವಿಚಾರಣೆ ನಡೆಸಿದ ಪರಿಷತ್‌ನ ಶಿಸ್ತುಕ್ರಮ ಸಮಿತಿಯು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ‘ ಎಂದು ಪರಿಷತ್ ಕಾರ್ಯದರ್ಶಿ ಹೊರಡಿಸಿರುವ ಪ್ರಕಟಣೆಯಲ್ಲೂ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.