ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ನಾಪತ್ತೆ, ಅಪಹರಣ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇದರಲ್ಲಿ ಬಾಲಕಿಯರ ಸಂಖ್ಯೆ ಅಧಿಕವಾಗಿದೆ.

2020ರಿಂದ 2025ರ (ಜುಲೈವರೆಗೆ) ನಡುವೆ ನಾಪತ್ತೆಯಾಗಿದ್ದ 14,878 ಮಕ್ಕಳ ಪೈಕಿ 13,542 ಮಕ್ಕಳು ಪೋಷಕರ ಮಡಿಲು ಸೇರಿದ್ದಾರೆ. ನಾಪತ್ತೆ, ಅಪಹರಣಕ್ಕೆ ಒಳಗಾದ ಪ್ರಕರಣಗಳಲ್ಲಿ ಬೆಂಗಳೂರು ನಗರ ಜಿಲ್ಲೆ ಅಗ್ರಸ್ಥಾನದಲ್ಲಿದೆ. ದಾವಣಗೆರೆ, ಉಡುಪಿ, ದಕ್ಷಿಣ ಕನ್ನಡ, ಹಾವೇರಿ, ಚಿತ್ರದುರ್ಗ, ತುಮಕೂರು, ಮೈಸೂರು ನಂತರದ ಸ್ಥಾನದಲ್ಲಿವೆ.

ಗೃಹ ಇಲಾಖೆಯ ಅಂಕಿ ಅಂಶದ ಪ್ರಕಾರ, 2025ರ ಜುಲೈ ಅಂತ್ಯದವರೆಗೆ ಒಟ್ಟು 2,170 ಮಕ್ಕಳು ಕಾಣೆಯಾಗಿದ್ದಾರೆ. ಇವರಲ್ಲಿ ಬಾಲಕರ ಸಂಖ್ಯೆ 551 ಮತ್ತು ಬಾಲಕಿಯರ ಸಂಖ್ಯೆ 1,619. ಐದೂವರೆ ವರ್ಷದಲ್ಲಿ ನಾಪತ್ತೆಯಾದ 10,792 ಬಾಲಕಿಯರ ಪೈಕಿ 1,003 ಹಾಗೂ 4,086 ಬಾಲಕರ ಪೈಕಿ 333 ಮಕ್ಕಳು ಪತ್ತೆಯಾಗಿಲ್ಲ. ಈ ಪ್ರಕರಣಗಳಲ್ಲಿ ಐದು ವರ್ಷದಲ್ಲಿ 634 ಆರೋಪಿಗಳನ್ನು ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ. ಈ ಎಲ್ಲಾ ಪ್ರಕರಣಗಳನ್ನು ‘ಮಕ್ಕಳ ಕಾಣೆ/ಅಪಹರಣ’ ಪ್ರಕರಣಗಳು ಎಂದು ಗುರುತಿಸಲಾಗಿದೆ.

ಕೌಟುಂಬಿಕ ಕಲಹ, ತಂದೆ–ತಾಯಿ ಜಗಳ, ಪೋಷಕರ ವಿಚ್ಛೇದನದಿಂದ ನೊಂದು ಮಕ್ಕಳು ಮನೆ ತೊರೆಯುತ್ತಿದ್ದಾರೆ. ಹದಿಹರೆಯದವರು ಪ್ರೀತಿ, ಪ್ರೇಮದ ಬಲೆಗೆ ಸಿಲುಕಿ ಮನೆ ಬಿಟ್ಟು ಹೋಗುತ್ತಿದ್ದಾರೆ. ಇದಲ್ಲದೆ, ಬಾಲ ಕಾರ್ಮಿಕರಾಗಿ ದುಡಿಸುವುದು, ಹಣದಾಸೆ ತೋರಿಸಿ ವೇಶ್ಯಾವಾಟಿಕೆ ಜಾಲಕ್ಕೆ ತಳ್ಳುವುದು, ಅಂಗಾಂಗ ಮಾರಾಟ ದಂಧೆ, ಭಿಕ್ಷಾಟನೆಯಲ್ಲಿ ತೊಡಗಿಸಲು ಮಕ್ಕಳ ಅಪಹರಣವಾಗುತ್ತಿದೆ.

‘ನಾಪತ್ತೆಯಾದ ಮಾಹಿತಿ ಲಭಿಸಿದ ಕೂಡಲೇ ದೂರು ನೀಡಿದರೆ ಮಕ್ಕಳನ್ನು ಪತ್ತೆ ಮಾಡಬಹುದು. ಕೆಲವರು ತಡವಾಗಿ ದೂರು ನೀಡುತ್ತಾರೆ. ನಾಪತ್ತೆಯಾದ ಮೊದಲ 24 ಗಂಟೆಗಳಲ್ಲಿ (ಗೋಲ್ಡನ್ ಅವರ್) ಪೊಲೀಸರಿಗೆ ದೂರು ಸಲ್ಲಿಸಬೇಕು. ಫೋಟೊ, ಇತರೆ ಮಾಹಿತಿ ನೀಡಬೇಕು. ಇಲಾಖೆಯ ಅಧಿಕೃತ ಗ್ರೂಪ್ನಲ್ಲಿ ಮಾಹಿತಿ ಹಂಚಿಕೊಳ್ಳಲಾಗುವುದು. ಪತ್ತೆಯಾದ ಬಳಿಕ ಅವರನ್ನು ಪಾಲಕರಿಗೆ ಒಪ್ಪಿಸಲಾಗುವುದು ’ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.

‘ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾದ ಬಳಿಕೆ ನಾಪತ್ತೆಯಾಗುವ ಮಕ್ಕಳ ಸಂಖ್ಯೆ ಏರುಗತಿಯಲ್ಲಿದೆ. ನಾಪತ್ತೆಯಾದವರನ್ನು ಸಿಸಿ ಟಿವಿ ಕ್ಯಾಮೆರಾ, ಮೊಬೈಲ್ ನೆಟ್ವರ್ಕ್ ಸುಳಿವು ಆಧರಿಸಿ ಪತ್ತೆ ಮಾಡಲಾಗುತ್ತದೆ’ ಎಂದು ಹೇಳಿದರು.

ಮಕ್ಕಳ ನಾಪತ್ತೆಗೆ ಮುಖ್ಯ ಕಾರಣ?: ‘ಪೋಷಕರ ನಿರ್ಲಕ್ಷ್ಯ, ಬಡತನದ ನೋವು ಹಾಗೂ ನಗರದ ವ್ಯಾಮೋಹಕ್ಕೆ ಮನೆ ಬಿಟ್ಟು ಹೋಗುವುದು ಮಕ್ಕಳ ನಾಪತ್ತೆಗೆ ಪ್ರಮುಖ ಕಾರಣ. ಸ್ನೇಹಿತರ ಸಹವಾಸ, ದುಶ್ಚಟಗಳ ಕಾರಣದಿಂದ ಮನೆ ಬಿಡುವ ಮಕ್ಕಳೂ ಇದ್ದಾರೆ. ಪರೀಕ್ಷಾ ಭಯ ಹಾಗೂ ಅನುತ್ತೀರ್ಣಗೊಂಡಿದ್ದರಿಂದ ಪೋಷಕರಿಂದ ಏಟು ತಿನ್ನಬೇಕಾಗುತ್ತದೆ ಎಂಬ ಆತಂಕದಿಂದ ಮನೆ ಬಿಟ್ಟು ಓಡಿ ಹೋಗುತ್ತಾರೆ. ಚಿಣ್ಣರನ್ನು ಭಿಕ್ಷಾಟನೆಗೆ ಬಳಸಿಕೊಳ್ಳುವ, ಅಪಹರಣ ಮಾಡುವ ಸಿಂಡಿಕೇಟ್ಗಳು ಸಕ್ರಿಯವಾಗಿವೆ’ ಎಂಬುದು ಮಕ್ಕಳ ಹಕ್ಕುಗಳ ಹೋರಾಟಗಾರರ ಆರೋಪ.

‘ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿ’

‘ನಾಪತ್ತೆಯಾಗಿರುವ ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಪೊಲೀಸರು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಬೇಕು. ಪ್ರತಿಯೊಂದು ಮಗು 18 ವರ್ಷ ಪೂರ್ಣಗೊಳ್ಳು ವವರೆಗೆ ಕುಟುಂಬ ಮತ್ತು ಸಮಾಜದಲ್ಲಿ ಗೌರವದಿಂದ ಬದುಕಬೇಕು. ಪತ್ತೆಯಾಗದೇ ಇರುವ ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆ ಎಂಬುದನ್ನು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಗಂಭೀರವಾಗಿ ಪರಿಗಣಿಸಬೇಕು. ಪ್ರಕರಣ ದಾಖಲಾದ 120 ದಿನಗಳ ನಂತರವೂ ಮಕ್ಕಳು ಪತ್ತೆಯಾಗದಿದ್ದರೆ, ಅಂತಹ ಪ್ರಕರಣಗಳನ್ನು ಮಾನವ ಕಳ್ಳಸಾಗಣೆ ತಡೆ ಘಟಕಗಳಿಗೆ (ಎಎಚ್ಟಿಯು) ವರ್ಗಾಯಿಸಲಾಗುತ್ತದೆ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಪತ್ತೆಯಾದವರಲ್ಲಿ ಬಹಳ ಮಂದಿ ಕಳ್ಳಸಾಗಣೆಯಾಗಿ ಲೈಂಗಿಕವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಕೆಲವರು ಬಾಲಕಾರ್ಮಿಕರಾಗುತ್ತಿದ್ದಾರೆ. ಅನೇಕ ಹೆಣ್ಣು ಮಕ್ಕಳನ್ನು ವೇಶ್ಯಾವೃತ್ತಿಗೆ ತಳ್ಳಲಾಗುತ್ತಿದೆ. ಭಿಕ್ಷಾಟನೆ, ಮನೆಗೆಲಸ, ಜೀತಕ್ಕೂ ಇವರನ್ನು ಬಳಸಿಕೊಳ್ಳಲಾಗುತ್ತಿದೆ. ಅಂತಹ ಮಕ್ಕಳ ಕೈಕಾಲುಗಳನ್ನು ತಿರುಚುವ ಹಾಗೂ ಕಣ್ಣು ಕೀಳುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ’ ಎಂದು ಹೇಳಿದರು.