ಯಾದಗಿರಿ: ‘ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿದರೆ ವಿದ್ಯಾರ್ಥಿಗಳಬೌದ್ಧಿಕ ಮಟ್ಟ ಹೆಚ್ಚಿ, ನೈತಿಕತೆ ಬೆಳೆಯುತ್ತದೆ. ಗುಜರಾತ್ ರಾಜ್ಯದಂತೆ ನಮ್ಮಲ್ಲಿಯೂ ಭಗವದ್ಗೀತೆ ಬೋಧಿಸಿದರೆ ತಪ್ಪೇನಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

‘ಗುಜರಾತ್‌ನ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಲಾಗಿದೆ. ಭಗವದ್ಗೀತೆ ಬೋಧನೆಯಿಂದ ಮಕ್ಕಳಿಗೆ ಅನುಕೂಲವಾಗಲಿದೆ.ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವರಲ್ಲಿ ನೈತಿಕತೆ ಬೆಳೆಸುವ ಅಗತ್ಯವಿದೆ. ಹೀಗಾಗಿಯೇ ಈ ವಿಚಾರದಲ್ಲಿ ಅನಗತ್ಯವಾಗಿ ಗೊಂದಲ ಉಂಟು ಮಾಡಬಾರದು’ ಎಂದುಸುರಪುರ ತಾಲ್ಲೂಕಿನ ದೇವತ್ಕಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

‘ಕರ್ನಾಟಕದ ಶಾಲಾ ಪಠ್ಯದಲ್ಲಿಯೂ ಭಗವದ್ಗೀತೆ ಅಳವಡಿಸಲು ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇಲಾಖೆ ಮೊದಲು ವರದಿ ನೀಡಲಿ. ನಾನು ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ’ ಎಂದ ಅವರು, ‘ಮಕ್ಕಳವ್ಯಕ್ತಿತ್ವ ವಿಕಸನವೇ ಸರ್ಕಾರದ ಮುಖ್ಯ ಗುರಿ. ಆ ನಿಟ್ಟಿಯಲ್ಲಿ ಸೂಕ್ತ ಹೆಜ್ಜೆ ಇಡುತ್ತೇವೆ’ ಎಂದರು.

‘ಭಗವದ್ಗೀತೆ ಅಳವಡಿಸಿದರೆ ಮಾತ್ರ ಮಕ್ಕಳಲ್ಲಿ ನೈತಿಕೆ ಬೆಳೆಯುತ್ತದೆಯೇ? ಈಗ ನೈತಿಕ ಶಿಕ್ಷಣ ಸಿಗುತ್ತಿಲ್ಲವೇ’ ಎಂಬ ಪ್ರಶ್ನೆಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗರಂ ಆದ ಪ್ರಸಂಗ ನಡೆಯಿತು.

₹1,024 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ
ಯಾದಗಿರಿ: ಸುರಪುರ ತಾಲ್ಲೂಕಿನ ದೇವತ್ಕಲ್ ಗ್ರಾಮದಲ್ಲಿ ₹1,024 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವ 78 ಕಾಮಗಾರಿಗಳಿಗೆ ಶಂಕುಸ್ಥಾಪನೆ, ₹ 36 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ 24 ಕಾಮಗಾರಿಗಳ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ನೆರವೇರಿಸಿದರು.ಕಂದಾಯ ಸಚಿವ ಆರ್.ಅಶೋಕ ದೇವತ್ಕಲ್‌ನಲ್ಲಿ ಗ್ರಾಮ ವಾಸ್ತವ್ಯಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.