ನವದೆಹಲಿ: ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ನೂತನ ಅಧ್ಯಕ್ಷರಾಗಿ ಬುಧವಾರ ಆಯ್ಕೆಯಾದರು.

ನೆಹರೂ–ಗಾಂಧಿ ಕುಟುಂಬದ ಹೊರಗಿನವರೊಬ್ಬರು 24 ವರ್ಷಗಳ ಬಳಿಕ ಈ ಹುದ್ದೆಗೆ ಏರಿದ್ದಾರೆ. ಪಕ್ಷದಲ್ಲಿ ಜಗಜೀವನ ರಾಂ ಅವರ ನಂತರ ಮೊದಲ ಬಾರಿಗೆ ದಲಿತ ನಾಯಕ ರೊಬ್ಬರು ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರು ಅಧ್ಯಕ್ಷ ಸ್ಥಾನಕ್ಕೇರಿದ ಮೂರನೇ ದಲಿತ ನಾಯಕ ರಾಗಿದ್ದಾರೆ.

ಕರ್ನಾಟಕದಿಂದ ಎಸ್.ನಿಜಲಿಂಗಪ್ಪ ಅವರ ಬಳಿಕ ಖರ್ಗೆ ಅವರು ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರು ತಮ್ಮ ಎದುರಾಳಿ ಶಶಿ ತರೂರ್ ಅವರನ್ನು 6,825 ಮತಗಳ ಭಾರಿ ಅಂತರದಿಂದ ಸೋಲಿಸಿ ವಿಜಯಶಾಲಿಯಾದರು.

ಅಕ್ಟೋಬರ್ 17ರಂದು ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಒಟ್ಟು 9,385 ಮಂದಿ ಮತ ಚಲಾಯಿಸಿದ್ದರು. ಈ ಪೈಕಿ, ಖರ್ಗೆ ಅವರಿಗೆ ಶೇ 84.14 ರಷ್ಟು ಮತಗಳು ಬಿದ್ದಿವೆ. ಎದುರಾಳಿ ಶಶಿ ತರೂರ್ ಶೇ 11.42ರಷ್ಟು ಮತ ಗಳಿಸಿದ್ದಾರೆ. ಒಟ್ಟು 416 ಮತಗಳನ್ನು ಅಸಿಂಧು ಎಂದು ಘೋಷಿಸಲಾಗಿದೆ.

ಬೆಳಿಗ್ಗೆ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು. ಖರ್ಗೆ ಅವರು ಮೊದಲಿನಿಂದಲೂ ಮುನ್ನಡೆಯಲ್ಲೇ ಇದ್ದರೂ, ತರೂರ್ ಗಳಿಸಿದ ಮತಗಳ ಸಂಖ್ಯೆ ಕೂಡ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.