ಪ್ರಧಾನಿ @narendramodi ಸರ್ಕಾರ ಬೆಲೆ ನಿಯಂತ್ರಣ ಮಾಡಲಾಗದ ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಸುಳ್ಳು ಲೆಕ್ಕದ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ರಾಜ್ಯದ @BJP4Karnataka ಸರ್ಕಾರ ಕೂಡಾ ಮೋದಿಯವರ ಸುಳ್ಳುಗಳನ್ನೇ ಇಲ್ಲಿ ಬಾಯಿಪಾಠ ಒಪ್ಪಿಸುತ್ತಿದೆ.
— Siddaramaiah (@siddaramaiah) September 20, 2021
1/13#pricerises pic.twitter.com/uY78vW7ZWp
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 120 ಡಾಲರ್ ಗಿಂತ ಹೆಚ್ಚಿದ್ದರೂ ದೇಶದಲ್ಲಿ ಡೀಸೆಲ್ ಬೆಲೆ ರೂ.47, ಪೆಟ್ರೋಲ್ ಬೆಲೆ ರೂ.75ರ ಗಡಿಯೊಳಗೆ ಇತ್ತು, ಹಾಗಾಗಿ ಅಗತ್ಯ ವಸ್ತುಗಳ ಬೆಲೆ ಕಡಿಮೆಯಿತ್ತು.
— Siddaramaiah (@siddaramaiah) September 20, 2021
2/13#pricerises
2014 ರಿಂದ ಈ ವರೆಗೆ ಕಚ್ಚಾತೈಲ ದರ ಸುಮಾರು 50 ಡಾಲರ್ ಆಸುಪಾಸಿನಲ್ಲಿದ್ದರೂ ಇದರ ಲಾಭ ಗ್ರಾಹಕರಿಗೆ ಸಿಗಲಿಲ್ಲ. ಕೇಂದ್ರ @BJP4India ಸರ್ಕಾರ ಅಬಕಾರಿ ಸುಂಕ ಏರಿಕೆ ಮಾಡಿದ್ದ ಕಾರಣ ಪೆಟ್ರೋಲಿಯಂ ಉತ್ಪನ್ನಗಳ ಜೊತೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ.
— Siddaramaiah (@siddaramaiah) September 20, 2021
3/13#pricerises
ಯು.ಪಿ.ಎ ಸರ್ಕಾರದ ಅವಧಿಯಲ್ಲಿ ಡೀಸೆಲ್ ಮೇಲೆ ರೂ.3.45 ಹಾಗೂ ಪೆಟ್ರೋಲ್ ಮೇಲೆ ರೂ.9.20 ಅಬಕಾರಿ ಸುಂಕ ಇತ್ತು, @narendramodi ಆಡಳಿತದಲ್ಲಿ ಅಬಕಾರಿ ಸುಂಕ ಡೀಸೆಲ್ ಮೇಲೆ ರೂ. 31.84 ಹಾಗೂ ಪೆಟ್ರೋಲ್ ಮೇಲೆ ರೂ. 32.98 ಆಗಿದೆ. ಇದರಲ್ಲಿ ಶೇ. 50 ಕಡಿಮೆ ಮಾಡಲಿ.
— Siddaramaiah (@siddaramaiah) September 20, 2021
4/13#pricerises
ಪ್ರಧಾನಿ @narendramodi ಸರ್ಕಾರ ಡೀಸೆಲ್, ಪೆಟ್ರೋಲ್ ಅಬಕಾರಿ ಸುಂಕದ ಮೂಲಕ ರೂ. 23 ಲಕ್ಷ ಕೋಟಿ ಸಂಗ್ರಹಿಸಿದೆ. 2020-21 ರಲ್ಲಿ ಸಂಗ್ರಹಿಸಿದ ಅಬಕಾರಿ ಸುಂಕ ರೂ. 3 ಲಕ್ಷ 35 ಸಾವಿರ ಕೋಟಿ. ಕಳೆದ ಏಳು ವರ್ಷಗಳಲ್ಲಿ ಕರ್ನಾಟಕದಿಂದ ರೂ.1 ಲಕ್ಷ 20 ಸಾವಿರ ಕೋಟಿ ತೆರಿಗೆ ಸಂಗ್ರಹವಾಗಿದೆ.
— Siddaramaiah (@siddaramaiah) September 20, 2021
5/13#pricerises
ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಗೋಳನ್ನಾಗಲಿ, ವಿರೋಧ ಪಕ್ಷಗಳ ಹೋರಾಟವನ್ನಾಗಲಿ ಕೇಂದ್ರ @BJP4India ಮತ್ತು ರಾಜ್ಯ @BJP4Karnataka ಸರ್ಕಾರಗಳು ಗಣನೆಗೆ ತೆಗೆದುಕೊಳ್ಳದಷ್ಟು ಭಂಡತನವನ್ನು ಬೆಳೆಸಿಕೊಂಡಿದೆ. ಮಾಧ್ಯಮಗಳು ಜನರ ಬವಣೆಗೆ ದನಿಯಾದರೆ ಸರ್ಕಾರಗಳು ಎಚ್ಚೆತ್ತುಕೊಳ್ಳಬಹುದೇನೋ?
— Siddaramaiah (@siddaramaiah) September 20, 2021
13/13#pricerises
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.